ಅಬ್ಬಬ್ಬಾ.. ಬಾಡಿಗೆ ಮನೆ ವಾಟರ್‌ ಬಿಲ್‌ 15,800! –  ರೊಚ್ಚಿಗೆದ್ದ ಬಾಡಿಗೆದಾರ ಮಾಡಿದ್ದೇನು ಗೊತ್ತಾ?

ಅಬ್ಬಬ್ಬಾ.. ಬಾಡಿಗೆ ಮನೆ ವಾಟರ್‌ ಬಿಲ್‌ 15,800! –  ರೊಚ್ಚಿಗೆದ್ದ ಬಾಡಿಗೆದಾರ ಮಾಡಿದ್ದೇನು ಗೊತ್ತಾ?

ಸಿಟಿಯಲ್ಲಿ ಜೀವನ ಮಾಡೋದು ಈಗೀಗ ಕಷ್ಟವಾಗಿದೆ. ಒಂದ್ಕಡೆ ಬೆಲೆ ಏರಿಕೆ.. ಇನ್ನೊಂದ್ಕಡೆ ಮನೆ ಬಾಡಿಗೆ ದರ ಕೂಡ ಹೆಚ್ಚಾಗಿದೆ. ಮೆಟ್ರೋ ಬಸ್‌, ದರ ಕೂಡ ಏರಿಕೆಯಾಗಿದೆ. ಇದೀಗ ನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರಿಗೆ ಒಂದು ತಿಂಗಳಿಗೆ ಬರೋಬ್ಬರಿ 15,800 ರೂ ವಾಟರ್​ ಬಿಲ್​​​​ ಬಂದಿದೆ.​

ಇದನ್ನೂ ಓದಿ:  ಹರಿಣಗಳಿಗೆ ನೀರಿಳಿಸಿದ ಸಾಲ್ಟ್, ಬಟ್ಲರ್ – T-20Iನಲ್ಲಿ ಭಾರತಕ್ಕೆ ENG ಸೆಡ್ಡು

ರೆಡ್ಡಿಟ್​​ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಬೆಂಗಳೂರು ಮೂಲದ ವ್ಯಕ್ತಿ ಪ್ರಕಾರ, ನನ್ನ ಮನೆ ಮಾಲೀಕರು ಪ್ರತಿ ತಿಂಗಳು ಹೆಚ್ಚು ಹೆಚ್ಚು ವಾಟರ್​ ಬಿಲ್​ ಬರುತ್ತಿರುವುದಕ್ಕೆ ನನ್ನನ್ನು ದೂಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಒಂದು ತಿಂಗಳಲ್ಲಿ 165,000 ಲೀಟರ್ ನೀರಿಗೆ ಸುಮಾರು 15,800 ರೂ. ಬಿಲ್​ ಬಂದಿದ್ದು, ಅದನ್ನು​​ ಹಂಚಿಕೊಂಡಿದ್ದಾರೆ.

ನಮಗೆ ಸಾಮಾನ್ಯವಾಗಿ ಪ್ರತಿ ತಿಂಗಳು ಸುಮಾರು 10 ಸಾವಿರ ರೂ ನೀರಿನ ಬಿಲ್ ಬರುತ್ತದೆ. ನಾವು ವಾಸಿಸುತ್ತಿರುವುದು ಕೇವಲ ಇಬ್ಬರು ಮಾತ್ರ. ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತೇವೆ ಎಂದು ವ್ಯಕ್ತಿ ಹೇಳಿದ್ದಾರೆ. ಈ ವಿಚಾರವಾಗಿ ನಾನು ಮನೆಯ ಮಾಲೀಕರೊಂದಿಗೆ ಜಗಳಕ್ಕಿಳಿದೆ. ಆದರೆ ಅವರು ಇಲ್ಲಸಲ್ಲದ ನೆಪಗಳನ್ನು ಹೇಳಿ ಪಾರಾಗುತ್ತಾರೆ. ಪ್ರತಿ ಹದಿನೈದು ದಿನಕ್ಕೊಮ್ಮೆ ನಮಗೆ ಒಂದು ಅಥವಾ ಎರಡು ದಿನ ನೀರು ಬರುವುದಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ​ ವೈರಲ್​​ ಆಗಿದ್ದು, ಹಲ್​ಚಲ್​ ಸೃಷ್ಟಿಸಿದೆ. ನೀರಿನ ಬಿಲ್ ಇಷ್ಟೊಂದು ಹೆಚ್ಚಾಗಲು ಸಾಧ್ಯವಿಲ್ಲ, ಮೀಟರ್ ಸಂಪರ್ಕವನ್ನು ಪರಿಶೀಲಿಸುವಂತೆ ವ್ಯಕ್ತಿಯನ್ನು ಒತ್ತಾಯಿಸಿಲಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ನೀರನ್ನು ಬಳಕೆ ಮಾಡಿರಬಹುದು. ಹಾಗಾಗಿ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಕೆಲವರು ಸಲಹೆ ನೀಡಿದ್ದಾರೆ.

ಇದು ನಿಜಕ್ಕೂ ಅಸಾಧ್ಯ, ಮೀಟರ್‌ಗೆ ನಿರಂತರವಾಗಿ ಗಾಳಿ ಹರಿಯುತ್ತಿರಬಹುದು ಅಥವಾ ಮೀಟರ್​​ನಲ್ಲಿ ಏನೋ ದೋಷ ಉಂಟಾಗಿರಬಹುದು. ಇಬ್ಬರು ವ್ಯಕ್ತಿಗಳಿಗೆ ಗರಿಷ್ಠ ಬಿಲ್ 300 ರೂ. ದಾಟಬಾರದು. ನಾಲ್ಕು ಸದಸ್ಯರ ಕುಟುಂಬಗಳಿಗೂ ಅಷ್ಟು ಹೆಚ್ಚು ಬಿಲ್‌ ಬರುವುದಿಲ್ಲ, ಏನೋ ಗೊಂದಲವಾಗಿದೆ. ನಿಮ್ಮ ನೆರೆಹೊರೆಯವರು ಅಥವಾ ಪಕ್ಕದ ಮನೆಯ ಜನರೊಂದಿಗೆ ಮಾತನಾಡಿ ಅವರ ನೀರಿನ ಬಿಲ್‌ ಎಷ್ಟು ಬರುತ್ತಿದೆ ವಿಚಾರಿಸುವಂತೆ ನೆಟ್ಟಿಗರು ಹೇಳಿದ್ದಾರೆ.

Shwetha M