ಕಾರು ಖರೀದಿ ವಿಚಾರಕ್ಕೆ ಕಿರಿಕ್ – ಭಾವನ ಕಥೆ ಮುಗಿಸಿದ ಬಾಮೈದ

ಕಾರು ಖರೀದಿ ವಿಚಾರಕ್ಕೆ ಕಿರಿಕ್ – ಭಾವನ ಕಥೆ ಮುಗಿಸಿದ ಬಾಮೈದ

ಕಾರು ಖರೀದಿ ವಿಚಾರವಾಗಿ ಬಾಮೈದನಿಂದ ಭಾವನನ್ನು ಕೊಲೆ ಮಾಡಿರುವಂತಹ ಘಟನೆ ಆಂಧ್ರದ ಇಂದೂಪುರ ಪೊಲೀಸ್ ಠಾಣವ್ಯಾಪ್ತಿಯ ಮೇಳ್ಯ ಬಳಿ ನಡೆದಿದೆ. ವಿನಯ್ ಕುಮಾರ್ (37) ಕೊಲೆಯಾದ ವ್ಯಕ್ತಿ. ಬಾಮೈದ ರಾಜು ಮತ್ತು ಅವನ ಗ್ಯಾಂಗ್​​ನಿಂದ ಕೊಲೆ ಮಾಡಲಾಗಿದ್ದು,  ರಾಜು, ವೇಣು, ಶ್ರೇಯಸ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿ ಚಿಕ್ಕಬಾಣಾವರದ ನಿವಾಸಿಗಳಾದ ರಂಗಶಾಮಪ್ಪ ಮತ್ತು ಸೌಭಾಗ್ಯಮ್ಮ ದಂಪತಿಯ ಮೂರನೇ ಮಗ ವಿನಯ್ ಕುಮಾರ್​, ಕಳೆದ 10 ತಿಂಗಳ ಹಿಂದೆ ಕುಟುಂಬಸ್ತರೇ ನೋಡಿ ಮೇಘನಾ ಎಂಬುವವರೊಂದಿಗೆ ಮದುವೆ ಮಾಡಿದ್ದರು. ಮದುವೆ ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದೆ.

ಇದನ್ನೂ ಓದಿ: ಸ್ನೇಹಿತನ ಮದುವೆಗೆ ಹೋದವನ ಬಾಳಲ್ಲಿ ವಿಧಿಯಾಟ – ಈಜಲು ಹೋಗಿ ಭದ್ರಾನದಿ ಪಾಲಾದ ಐಟಿ ಯುವಕ!

ಕಳೆದ 15 ದಿನಗಳಿಂದ ಕಾರು ಖರೀದಿ ವಿಚಾರವಾಗಿ ಮೇಘನಾ ಹಾಗೂ ವಿನಯ್ ನಡುವೆ ಗಲಾಟೆ ಶುರುವಾಗಿತ್ತು. ಕಾರು ಖರೀದಿಗೆ ನನ್ನ ಅಣ್ಣ ರಾಜು ಹಣ ಕೊಡುತ್ತಾನೆ ತೆಗೆದುಕೊಂಡು ಬಾ ಎಂದು ಮೇಘನಾ ಹೇಳಿದ್ದಾರೆ. ಈ ಹಿನ್ನೆಲೆ ಶನಿವಾರ ರಾತ್ರಿ 9ಗಂಟೆಗೆ ಆಂಧ್ರದ ಮೇಳ್ಯ ಬಳಿ ವಿನಯ್ ಹೋಗಿದ್ದಾರೆ. ಈ ವೇಳೆ ಹಣಕಾಸಿನ ವಿಚಾರವಾಗಿ ಬಾಮೈದ ರಾಜು ಮತ್ತು ಅವನ ಗ್ಯಾಂಗ್​​ನಿಂದ ವಿನಯ್​​ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆತನನ್ನು ಸೇರಿ ಬೈಕ್ ಸಮೇತ ಕಾಲುವೆಗೆ ಎಸೆದಿದ್ದಾರೆ.

ಇನ್ನು ಬೈಕ್ ಜಿಪಿಆರ್​​ಎಸ್​​ನಲ್ಲಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ಬೆಳಿಗ್ಗೆ ವಿನಯ್ ಪೊಷಕರಿಗೆ ಮಾಹಿತಿ ನಿಡಲಾಗಿದೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಕುಟುಂಬಸ್ತರಿಗೆ ಹಸ್ತಾಂತರ ಮಾಡಲಿದ್ದಾರೆ.

Kishor KV