ನಾಲ್ಕೇ ವರ್ಷದಲ್ಲಿ ₹722 ಕೋಟಿ ಲೂಟಿ – ನಿಮ್ಮ ಅಕೌಂಟ್ ಗೂ ಕನ್ನ ಹಾಕೋದೇಗೆ ಗೊತ್ತಾ..!?
ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿ ಸಿಟಿ, ಟೆಕ್ ಹಬ್ ಅಂತೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ. ವಿದೇಶಗಳು ಕೂಡ ಬೆಂಗಳೂರಿನಲ್ಲಿ ಕೋಟಿ ಕೋಟಿ ಹೂಡಿಕೆ ಮಾಡ್ತಿದ್ದಾರೆ. ಆದ್ರೆ ಇದೇ ನಗರದಲ್ಲಿ ಸೈಬರ್ ಕ್ರೈಂ ಹಾವಳಿ ಮಿತಿ ಮೀರಿದೆ. 2019ರಿಂದ ಈವರೆಗೂ ಬರೋಬ್ಬರಿ ₹517 ಕೋಟಿಗಳನ್ನ ಲೂಟಿ ಮಾಡಿದ್ದಾರೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಹೊರತಾಗಿಯೂ ಸೈಬರ್ ಖದೀಮರು ಕೈಚಳಕ ತೋರುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬೆಂಗಳೂರಿಗರು ಬರೋಬ್ಬರಿ ₹517 ಕೋಟಿ ಹಣ ಕಳೆದುಕೊಂಡಿದ್ದಾರೆ. ಅದೂ ಕೂಡ ಸರಾಸರಿ ನಿತ್ಯ ₹35 ಲಕ್ಷ ವಂಚನೆ ನಡೆದಿದೆ.
ಇದನ್ನೂ ಓದಿ : ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ! – ಆರೋಗ್ಯ ಸಚಿವರು ಹೀಗೇಕೆ ಹೇಳಿದ್ದು?
ಕರ್ನಾಟಕದಲ್ಲಿ ನಡೆದ ಸೈಬರ್ ವಂಚನೆಗಳ ಪೈಕಿ ಶೇಕಡಾ 72 ಪರ್ಸೆಂಟ್ ಜನ ಬೆಂಗಳೂರಿನವರೇ ಆಗಿದ್ದಾರೆ. ರಾಜ್ಯವ್ಯಾಪಿ ಅಂಕಿಅಂಶಗಳ ಪ್ರಕಾರ 2019ರ ಜನವರಿಯಿಂದ 2023ರ ಜನವರಿವರೆಗೆ ಅಂದ್ರೆ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯಾದ್ಯಂತ ಬರೋಬ್ಬರಿ ₹722 ಕೋಟಿ ಹಣ ಸೈಬಲ್ ಕಳ್ಳರ ಪಾಲಾಗಿದೆ. ಅದೂ ಕೂಡ ಪ್ರತಿನಿತ್ಯ ₹48ಲಕ್ಷ ವಂಚಿಸಲಾಗಿದೆ. ಗೃಹ ಇಲಾಖೆಯೇ ನೀಡಿರುವ ವರದಿಯ ಪ್ರಕಾರ ಸೈಬರ್ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೈಬರ್ ಅಪರಾಧ (Cyber Crime) ಪ್ರಕರಣಗಳು ಹೆಚ್ಚುತ್ತಿವೆ. ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 2022ರಲ್ಲಿ ವಂಚಕರು ಜನರಿಂದ ನಿತ್ಯ ಸರಾಸರಿ 1 ಕೋಟಿ ರೂ. ಗಳನ್ನು ಲೂಟಿ ಮಾಡಿದ್ದಾರೆ. ಇಂಟರ್ನೆಟ್ ಅಪರಾಧಗಳಲ್ಲಿ ಕಳೆದುಹೋದ ಹಣದಲ್ಲಿ ಶೇಕಡಾ 150 ರಷ್ಟು ಏರಿಕೆಯಾಗಿದೆ ಎಂದು ರಾಜ್ಯ ಗೃಹ ಇಲಾಖೆ ಮಾಹಿತಿ ನೀಡಿದೆ. ಕರ್ನಾಟಕವು 2022 ರಲ್ಲಿ 363 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಮತ್ತು 2019 ರಿಂದ 722 ಕೋಟಿ ರೂಪಾಯಿಗಳನ್ನು ವಂಚಕರು ಸುಲಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಯಾರಾದರೂ ಫೋನ್ ಮಾಡಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಕೇಳಿದಾಗ ಎಚ್ಚರಿಕೆಯಿಂದ ಇರಬೇಕಾಗಿದೆ.