ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಈ ತಪ್ಪು ಮಾಡಿದ್ರೆ 2,000 ರೂಪಾಯಿ ಫೈನ್!

ಬೆಂಗಳೂರಿಗರ ಪಾರಂಪರಿಕ ಹಬ್ಬ, ಐತಿಹಾಸಿಕ ಜಾತ್ರೆ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ. ಇದೀಗ ಕಡಲೆಕಾಯಿ ಪರಿಷೆಗೆ ಬರುವವರಿಗೆ ಮಹತ್ವದ ಸುದ್ದಿಯಿದೆ. ಪರಿಷೆಗೆ ಬಂದು ಕಸ ಹಾಕಿದ್ರೆ ದಂಡ ಬಿಳೋದು ಫಿಕ್ಸ್!
ಇದನ್ನೂ ಓದಿ: ಡೇಟಿಂಗ್ಗೆ ಕರೆದು ಲಾಡ್ಜ್ಗೆ ಕರ್ಕೊಂಡು ಹೋದ ಸುಂದರಿ! – ರೂಮ್ಗೆ ಬರ್ತಿದ್ದಂತೆ ಯುವಕನಿಗೆ ಕಾದಿತ್ತು ಶಾಕ್!
ಇದೇ 17ರಿಂದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಐದು ದಿನಗಳ ಕಾಲ ನಡೆಯಲಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸ್ಥಳೀಯ ಶಾಸಕ, ಜಿಬಿಎ ಅಧಿಕಾರಿಗಳ ನೇತೃತ್ವದಲ್ಲಿ ಪುನರ್ ಪರಿಶೀಲನೆ ಸಭೆ ನಡೆಸಿ, ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಾದ್ಯಂತ ಜಿಬಿಎ ಆಪರೇಷನ್ ಕಸ ನಡೆಸುತ್ತಿದ್ದು, ಕಂಡ ಕಂಡಲ್ಲಿ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುತ್ತಿದೆ. ಇದೀಗ ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಕಸ ಹಾಕೋರಿಗೆ ಫೈನ್ ಹಾಕೋಕೆ ಜಿಬಿಎ ಮುಂದಾಗಿದೆ. ಹೀಗಾಗಿ ಈ ವರ್ಷದಿಂದ ಜನರು ಸಿಕ್ಕ ಸಿಕ್ಕಲ್ಲಿ ಕಸ ಹಾಕುವಂತಿಲ್ಲ. ಎಲ್ಲೆಂದರಲ್ಲಿ ಕಸ ಹಾಕಿದ್ರೆ ಎರಡು ಸಾವಿರದವರೆಗೂ ಫೈನ್ ಹಾಕಬಹುದಾಗಿದೆ. ಮಾರ್ಷಲ್ಗಳ ನಿಯೋಜನೆಯನ್ನು ಸಹ ಮಾಡಲಾಗಿದೆ.
ಇನ್ನೂ ಈ ಬಾರಿಯ ಪರಿಷೆ ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಿದ್ದು, ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಸುವಂತಿಲ್ಲ. ಒಂದು ವೇಳೆ ಬಳಸಿದ್ರೇ ಎರಡು ಸಾವಿರ ರೂಪಾಯಿವರೆಗೂ ಫೈನ್ ಹಾಕುವ ಎಚ್ಚರಿಕೆಯನ್ನು ಜಿಬಿಎ ಪಶ್ಚಿಮ ಪಾಲಿಕೆ ಆಯುಕ್ತ.ಕೆ.ವಿ ರಾಜೇಂದ್ರ ನೀಡಿದ್ದಾರೆ.

ನೋಡಿರಿ

