ಬೆಂಗಳೂರಿನ ಬ್ಯಾಚುಲರ್ಸ್ ​ಗಳಿಗೆ ತಲೆಬಿಸಿಯಾದ ಬಾಡಿಗೆ ಮನೆ ರೂಲ್ಸ್ – ನಿಯಮ ಉಲ್ಲಂಘಿಸಿದ್ರೆ 1,000 ರೂ ದಂಡ!

ಬೆಂಗಳೂರಿನ ಬ್ಯಾಚುಲರ್ಸ್ ​ಗಳಿಗೆ ತಲೆಬಿಸಿಯಾದ ಬಾಡಿಗೆ ಮನೆ ರೂಲ್ಸ್ – ನಿಯಮ ಉಲ್ಲಂಘಿಸಿದ್ರೆ 1,000 ರೂ ದಂಡ!

ಬೆಂಗಳೂರು: ಮಹಾನಗರಗಳಲ್ಲಿ ಬ್ಯಾಚುಲರ್ಸ್ ಗಳಿಗೆ ಬಾಡಿಗೆ ಮನೆ ಸಿಗುವುದೇ ಕಷ್ಟ. ಸಿಕ್ಕಿದ್ರೂ ಮನೆ ಮಾಲೀಕರು ಕೆಲವೊಂದು ಷರತ್ತುಗಳನ್ನು ವಿಧಿಸುತ್ತಾರೆ. ಇದಕ್ಕೆ ಬದ್ಧರಾಗಿದ್ದರೆ  ಮಾತ್ರ ಮನೆ ಬಾಡಿಗೆ ನೀಡಲಾಗುತ್ತದೆ. ಇದೀಗ ನಗರದ ಹೌಸಿಂಗ್ ಸೊಸೈಟಿಯೊಂದು ಬ್ಯಾಚುಲರ್ಸ್ ಗೆ ಹೊಸ ಮಾರ್ಗಸೂಚಿಯನ್ನು ನೀಡಿದ್ದು, ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಇಟ್ಟು ಹೋದ ಅಂಗಡಿ ಮಾಲೀಕ – ಆಮೇಲೆ ನಡೆದಿದ್ದು ದೊಡ್ಡ ಅವಾಂತರ

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಹೌಸಿಂಗ್ ಸೊಸೈಟಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಅವಿವಾಹಿತರು ಬಾಡಿಗೆಗೆ ಪಡೆದಿರುವ ಫ್ಲ್ಯಾಟ್​ಗಳಲ್ಲಿ ರಾತ್ರಿ 10 ಗಂಟೆಯ ನಂತರ ಅತಿಥಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವವರಿಗೆ 1,000 ರೂಪಾಯಿ ದಂಡ ಅಥವಾ ಮನೆಯಿಂದ ಹೊರಹಾಕಲಾಗುವುದು. ರಾತ್ರಿ 10 ಗಂಟೆಯ ನಂತರ ಜೋರಾಗಿ ಹಾಡು ಹಾಕುವಂತಿಲ್ಲ. ತಡರಾತ್ರಿವರೆಗೆ ಪಾರ್ಟಿ ಮಾಡಬಾರದು ಮತ್ತು ರಾತ್ರಿ 10 ಗಂಟೆಯ ನಂತರ ಫೋನ್ ಕರೆಗಳಿಗೆ ಕಾರಿಡಾರ್ ಮತ್ತು ಬಾಲ್ಕನಿಗಳನ್ನು ಬಳಸಬಾರದು ಅಂತಾ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಾರ್ಗಸೂಚಿಯನ್ನು Reddit ಬಳಕೆದಾರರೊಬ್ಬರು ಪೊಸ್ಟ್ ಮಾಡಿದ್ದು,  ಬ್ಯಾಚುಲರ್​ಗಳಿಗೆ ಬೆಂಗಳೂರು ಅಲ್ಲ ಎಂಬ ಶೀರ್ಷಿಕೆ ಬರೆದಿದ್ದಾರೆ. ಭಾರತದಲ್ಲಿ ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇದೆ. ಅಥಿತಿಗಳನ್ನು ಮನೆಗೆ ಆಹ್ವಾನ ನೀಡುವುದರ ಹೊರತಾಗಿ, ರಾತ್ರಿ ವೇಳೆಯಲ್ಲಿ ತಂಗಲು ಅನುಮತಿ ಇಲ್ಲ. ಹಾಗೂ ಒಂದು ವೇಳೆ ಇರಲೇಬೇಕಾದ ಪರಿಸ್ಥಿತಿ ಬಂದರೆ ಅತಿಥಿಗಳು ತಮ್ಮ ಗುರುತಿನ ಪುರಾವೆಗಳನ್ನು ನೀಡುವ ಮೂಲಕ ಮ್ಯಾನೇಜರ್ ಅಥವಾ ಅಸೋಸಿಯೇಷನ್ ಕಚೇರಿಯಿಂದ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಈ ಮಾರ್ಗಸೂಚಿಯನ್ನು ಕಂಡು ನಟ್ಟಿಗರು ಕಿಡಿಕಾರಿದ್ದಾರೆ. ‘ಇದು ಹಾಸ್ಟೆಲ್‌ ನಿಯಮಗಳಿಗಿಂತ ಕೆಟ್ಟದಾಗಿದೆ. ನೀವು ಫ್ಲಾಟ್​ನ್ನು ಬಾಡಿಗೆಗೆ ನೀಡಲು ಹಣವನ್ನು ಪಾವತಿಸುತ್ತಿದ್ದೀರಿ. ಒಪ್ಪಂದಗಳ ಪ್ರಕಾರ ನೀವು ಬಾಡಿಗೆಗೆ ನೀಡುತ್ತಿರುವ ಅವಧಿಯವರೆಗೂ ಇದು ನಿಮ್ಮ ಫ್ಲಾಟ್ ಆಗಿರುತ್ತದೆ. ನಿಮ್ಮ ಫ್ಲಾಟ್‌ಗೆ ಯಾರು ಬರುತ್ತಾರೆ, ಹೋಗುತ್ತಾರೆ ಮತ್ತು ನೀವು ಬಾಲ್ಕನಿಯಲ್ಲಿ ಏನು ಮಾಡುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮಗೆ ಬಿಟ್ಟದ್ದು. ಇತ್ತೀಚಿನ ದಿನಗಳಲ್ಲಿ ಹೌಸಿಂಗ್ ಸೊಸೈಟಿಯ ನಿಯಮಗಳು ತುಂಬಾ ಹಾಸ್ಯಾಸ್ಪದವಾಗುತ್ತಿವೆ’ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.

ಮೊದಲನೇಯ ನಿಯಮವು ಬ್ಯಾಚುಲರ್​ಗಳಿಗೆ ತುಚ್ಛವಾಗಿದೆ. ರಾತ್ರಿ 10 ಗಂಟೆಯ ನಂತರ ಬಾಲ್ಕನಿಗಳಲ್ಲಿ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಫೋನ್ ನಲ್ಲಿ ಮಾತನಾಡಬಾರದು ಎಂದು ಮತ್ತೊಬ್ಬರು ಹೇಳಿದ್ದಾರೆ.

Bangalore not for Bachelors
by u/IsThisForReal- in bangalore

suddiyaana