ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ರಾಕ್ಷಸ – ವ್ಯಾಪಕ ಆಕ್ರೋಶ

ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ರಾಕ್ಷಸ – ವ್ಯಾಪಕ ಆಕ್ರೋಶ

ಬೆಂಗಳೂರು: ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ದರ್ಪ ತೋರಿರುವ ಘಟನೆ ಬೆಂಗಳೂರಿನ ಹೊರಮಾವು ಬಳಿಯ ಬಂಜಾರ ಲೇಔಟ್‍ನಲ್ಲಿ ನಡೆದಿದೆ.

ಅಪಾರ್ಟ್ ಮೆಂಟ್ ನ ಮುಂಭಾಗ ನಾಯಿಯೊಂದು ಮಲಗಿತ್ತು. ಈ ವೇಳೆ ಕಾರಿನಲ್ಲಿ ಬಂದಿದ್ದ ವ್ಯಕ್ತಿ ನಾಯಿಯನ್ನು ನೋಡಿದ್ದಾನೆ. ಆದರೆ ಆತ ನಾಯಿಯನ್ನು ಓಡಿಸಿ ಕಾರು ಚಲಾಯಿಸುವ ಬದಲು ನಾಯಿಯ ಮೇಲೆಯೇ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಪರಿಣಾಮ ನಾಯಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡ ನಾಯಿಗಾಗಿ ಸಾರ್ವಜನಿಕರು ಮರುಗಿದ್ದಾರೆ.

ಇದನ್ನೂ ಓದಿ: ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ – ಓರ್ವ ಅರೆಸ್ಟ್

ನಾಯಿ ಮೇಲೆ ಕಾರು ಹತ್ತಿಸಿದ ವ್ಯಕ್ತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೃಶ್ಯಾವಳಿ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ರಾಮಮೂರ್ತಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೃತ್ಯ ಎಸಗಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿ ಬಂದಿದೆ.

suddiyaana