ಗಾನವಿ ಸಾ*ವಿ*ನ ಬೆನ್ನಲ್ಲೇ ಗಂಡನೂ ಸೂ*ಸೈ*ಡ್‌ – ಗಂಡಸಲ್ಲ ಅಂದಿದ್ದಕ್ಕೆ ಈ ನಿರ್ಧಾರನಾ?

ಗಾನವಿ ಸಾ*ವಿ*ನ ಬೆನ್ನಲ್ಲೇ ಗಂಡನೂ ಸೂ*ಸೈ*ಡ್‌ – ಗಂಡಸಲ್ಲ ಅಂದಿದ್ದಕ್ಕೆ ಈ ನಿರ್ಧಾರನಾ?

ಮದುವೆಯಾಗಿ ಒಂದೂವರೆ ತಿಂಗಳಿಗೆ ಮೃತಪಟ್ಟ  ಗಾನವಿ ಆತ್ಮಹತ್ಯೆ ಕೇಸ್‌ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.  ಶ್ರೀಲಂಕಾಕ್ಕೆ ಹನಿಮೂನ್‌ಗೆ ಹೋಗಿಬಂದ ನಂತ್ರ ಗಾನವಿ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ರು. ಈ ಹೆಂಡತಿ ಮೃತಪಟ್ಟ ಬಳಿಕ ಪತಿ ಸೂರಜ್  ಕೂಡ ಮಹಾರಾಷ್ಟ್ರದ ನಾಗಪುರದಲ್ಲಿ ನೇಣಿಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲ, ಸೂರಜ್ ತಾಯಿ ಕೂಡ ಆತ್ಮಹತ್ಯೆಗೆ ಯತ್ನ ಮಾಡಿದ್ದು, ಈಗ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಗಂಡ-ಹೆಂಡತಿ ಇಬ್ಬರು ಈ ರೀತಿ ತಮ್ಮ ಬದುಕನ್ನ ಅಂತ್ಯಗೊಳಿಸಿಕೊಂಡಿದ್ದು ನಿಜಕ್ಕೂ ವಿಪರ್ಯಾಸ ಅಂತನೇ ಹೇಳಬಹುದು. ಬಾಳಿ ಬದುಕ ಬೇಕಿದ್ದ ದಂಪತಿ ಜೀವನ ಅಂತ್ಯ ಮಾಡಿಕೊಂಡಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆ ಈಗ ಕುಟುಂಬ ದುರಂತ ಆಗಿ ಬದಲಾಗಿದೆ.

ಇದನ್ನೂ ಓದಿ: T-20Iನಲ್ಲಿ ಶುರು ಕ್ಯಾಪ್ಟನ್ಸಿ ರೇಸ್ – ಪಾಂಡ್ಯ Vs ಸಂಜು Vs ಅಕ್ಷರ್!

ಗಾನವಿ ಸಾವಿನ ನಂತರ ಕುಟುಂಬಸ್ಥರು ಸೂರಜ್‌ ಕುಟುಂಬದವರ ವಿರುದ್ಧ ಆರೋಪ ಮಾಡಿದ್ರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪತಿ ಸೂರಜ್, ತಮ್ಮ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಜೊತೆ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದರು. ಅಲ್ಲಿ ಏನಾಯ್ತೋ ಗೊತ್ತಿಲ್ಲ, ಸೂರಜ್ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ತನಿಖೆ ಈಗ ನಾಗಪುರಕ್ಕೂ ಲಿಂಕ್ ಆಗಿದೆ. ಗಾನವಿ ಸಾವು ಈ ಕುಟುಂಬವನ್ನ ಛಿದ್ರ ಮಾಡಿದೆ.
ಮಗನ ಜೊತೆಯಲ್ಲೇ ತಾಯಿ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರಿಗೆ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅತ್ತ ಗಾನವಿ ಮನೆಯಲ್ಲಿ ಸೂತಕದ ಛಾಯೆ ಎದುರಾಗಿದೆ.

Kishor KV