ಇಂದಿನಿಂದ ಬೆಂಗಳೂರಿನಲ್ಲಿ ಈ ಪ್ಲೈ ಓವರ್‌ಗಳಲ್ಲಿ ಬೈಕ್, ಆಟೋಗಳಿಗೆ ನೋ ಎಂಟ್ರಿ – ಯಾವೆಲ್ಲಾ ಪ್ಲೈ ಓವರ್ ಗೊತ್ತಾ?

ಇಂದಿನಿಂದ ಬೆಂಗಳೂರಿನಲ್ಲಿ ಈ ಪ್ಲೈ ಓವರ್‌ಗಳಲ್ಲಿ ಬೈಕ್, ಆಟೋಗಳಿಗೆ ನೋ ಎಂಟ್ರಿ – ಯಾವೆಲ್ಲಾ ಪ್ಲೈ ಓವರ್ ಗೊತ್ತಾ?

ರಾಜಧಾನಿ ಬೆಂಗಳೂರಿನ  ಪ್ರಮುಖ ಪ್ಲೈ ಓವರ್ ಗಳಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಟ್ರಾಫಿಕ್ ದಟ್ಟಣೆ  ನಿಯಂತ್ರಿಸಲು ಮತ್ತು ಸವಾರರ ಸುರಕ್ಷತೆಗಾಗಿ ಸಂಚಾರ ಪೊಲೀಸರು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಸೆಪ್ಟೆಂಬರ್ 4ರಿಂದ ಅಂದರೆ ಇಂದಿನಿಂದ ನಗರದ ಐದು ಫ್ಲೈ ಓವರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ.

ಇಂದಿನಿಂದ ನಾಲ್ಕು ಪ್ರಮುಖ ಮಾರ್ಗಗಳಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಅನ್ವಯವಾಗಲಿವೆ. ಈ ಬದಲಾವಣೆಗಳ ಫಲಿತಾಂಶವನ್ನು ಹತ್ತಿರದಿಂದ ಗಮನಿಸಲಿದ್ದು, ಅಗತ್ಯಬಿದ್ದರೆ ನಿಯಮಗಳಲ್ಲಿ ಮಾರ್ಪಾಡು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ಫ್ಲೈ ಓವರ್ ಎಂಟ್ರಿ ಮತ್ತು ಎಕ್ಸಿಟ್‌ಗಳಲ್ಲಿ ಅಪಘಾತಗಳನ್ನು ತಡೆದು, ವಾಹನ ಸಂಚಾರ ಸುಗಮಗೊಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್

ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಆಟೋ ರಿಕ್ಷಾ ಮತ್ತು ಮೂರು ಚಕ್ರದ ಗೂಡ್ಸ್ ವಾಹನಗಳಿಗೂ ಸಂಪೂರ್ಣ ನಿಷೇಧ ಹೇರಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ತನಕ ಎಲ್ಲಾ ಮಾದರಿಯ ಸರಕು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಮಾರ್ಕೆಟ್ ಫ್ಲೈ ಓವರ್

ಮಾರ್ಕೆಟ್ ಫ್ಲೈ ಓವರ್ ಮತ್ತು ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್ ಮೇಲೆ ಭಾರಿ ಸರಕು ವಾಹನಗಳಿಗೆ ದಿನದ 24 ಗಂಟೆ ಸಂಚಾರ ನಿರ್ಬಂಧಿಸಲಾಗಿದೆ. ಗೂಡ್ಸ್ ಆಟೋಗಳು ಮತ್ತು ಇತರೆ ಸರಕು ಸಾಗಾಣೆ ವಾಹನಗಳಿಗೆ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಿರ್ಬಂಧ ಹೇರಲಾಗಿದೆ.

ಪೀಣ್ಯ ಫ್ಲೈಓವರ್‌

ಪೀಣ್ಯ ಫ್ಲೈಓವರ್‌ನಲ್ಲಿ ಆಟೋ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಗೂಡ್ಸ್ ಆಟೋಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಭಾರಿ ಹಾಗೂ ಮಧ್ಯಮ ಸರಕು ವಾಹನಗಳಿಗೆ ಬೆಳಗ್ಗೆ 7 ರಿಂದ 11 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 11 ಗಂಟೆ ವರೆಗೆ ನಿರ್ಬಂಧಿಸಲಾಗಿದೆ. ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಭಾರಿ ಘನ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಏರ್‌ಪೋರ್ಟ್ ಫ್ಲೈ ಓವರ್

ಏರ್‌ಪೋರ್ಟ್ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ಮಾತ್ರವಲ್ಲ, ಆಟೋ ಮತ್ತು ಗೂಡ್ಸ್ ರಿಕ್ಷಾಗಳಿಗೂ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ದಿನದ 24 ಗಂಟೆ ಈ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ಮತ್ತು ಆಟೋ ಸಂಚಾರ ಮಾಡುವಂತಿಲ್ಲ. ಎಲ್ಲಾ ಮಾದರಿಯ ಸರಕು ಸಾಗಾಣೆ ವಾಹನಗಳಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಿರ್ಬಂಧ ಹೇರಲಾಗಿದೆ.

Kishor KV

Leave a Reply

Your email address will not be published. Required fields are marked *