ಸಿಸಿಬಿ ಮತ್ತು ಖಾಕಿ ಭರ್ಜರಿ ಕಾರ್ಯಾಚರಣೆ – 5.24 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, 16 ಜನ ಅರೆಸ್ಟ್

ವಿವಿಧ ಡ್ರಗ್ಸ್ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು 16 ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಹಾಗೂ ನಗರದ ವಿವಿಧ ಠಾಣೆಗಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಹೊರ ರಾಜ್ಯದ 8 ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ನಗರದಲ್ಲಿ 5.24 ಕೋಟಿ ರೂ ಮೌಲ್ಯದ ಡ್ರಗ್ಸ್, ಮೂರು ಸಾವಿರ ಎಂಡಿಎಂ ಮಾತ್ರೆಗಳು ಮತ್ತು ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಇನ್ನು ನೈಜೀರಿಯಾ ಪ್ರಜೆಯ ಡ್ರಗ್ಸ್ ಡಿಲೀಂಗ್ಗೆ ಸಾಥ್ ಕೊಡುತ್ತಿದ್ದ ಕಿಲಾಡಿ ಲೇಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಭಾಷಿಣಿ ಬಂಧಿತ ಮಹಿಳೆ. ಬಾಗಲೂರು ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.ಬಂಧಿತ ಸುಭಾಷಿಣಿ, ನೈಜೀರಿಯನ್ ಪ್ರಜೆಯೊಬ್ಬನ ಜೊತೆ ಸೇರಿ ಡ್ರಗ್ಸ್ ಡಿಲೀಂಗ್ ಮಾಡುತ್ತಿದ್ದಳು. ವಿದೇಶಿ ಪ್ರಜೆ ನೈಜೀರಿಯಾದಿಂದ ಡ್ರಗ್ಸ್ ತರಿಸಿಕೊಂಡು ಸುಭಾಷಿಣಿ ಮನೆಯಲ್ಲಿ ಶೇಖರಿಸಿಟ್ಟಿದ್ದ. ಆತ ಸೂಚಿಸಿದ್ದ ವಿಳಾಸ, ಗ್ರಾಹಕರಿಗೆ ಸುಭಾಷಿಣಿ ತಲುಪಿಸುತ್ತಿದ್ದಳು.
ಇದನ್ನೂ ಓದಿ: ಬಾಯ್‌ಫ್ರೆಂಡ್ ಮಾತು ಬಿಟ್ಟಿದ್ದಕ್ಕೆ ಚಾಕು ಚುಚ್ಚಿದ್ಲು! – ಪ್ರೀತಿ ಬಲೆಯಲ್ಲಿ ಯುವಕ ವಿಲವಿಲ!
ನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ, ಬಂಧಿತಳಿಂದ 2 ಕೋಟಿ ರೂ ಮೌಲ್ಯದ 300 ಎಕ್ಸ್ ಟೆಸಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾಗಿರುವ ವಿದೇಶಿ ಡ್ರಗ್ ಪೆಡ್ಲರ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಕೋಟಿಗಟ್ಟಲೇ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ಸೀಜ್ ಮಾಡಿ ಪೆಡ್ಲರ್ಗಳನ್ನು ಲಾಕ್ ಮಾಡಿದ್ದರು. ಬಂಧಿತರಲ್ಲಿ ಬಹುಪಾಲು ನೆರೆ ರಾಜ್ಯದವರು ಸೇರಿ ವಿದೇಶಿಗರನ್ನು ಕಂಬಿಹಿಂದೆ ತಳ್ಳಿದ್ದರು. ಅಮೃತಹಳ್ಳಿ, ಹೆಬ್ಬಗೋಡಿ, ಶೇಷಾದ್ರಿಪುರಂ, ಜೆಬಿ ನಗರ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜ್ ಠಾಣಾ ವ್ಯಾಪ್ತಿಗಳಲ್ಲಿ ಪೆಡ್ಲರ್ಗಳನ್ನು ಲಾಕ್ ಮಾಡಿ ಬರೋಬ್ಬರಿ 20 ಕೋಟಿ ರೂ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದರು.

ನೋಡಿರಿ

