ಬೆಂಗಳೂರಿಗರೇ ಎಚ್ಚರ.. ಎಲ್ಲೆಡೆ ಡೆಂಗ್ಯೂ ಡಂಗುರ – ಸ್ವಚ್ಛತೆ ಕಾಪಾಡದಿದ್ದರೆ ದಂಡ ಕಟ್ಟಲು ರೆಡಿಯಾಗಿ
ಡೆಂಗ್ಯೂ ತಡೆಗೆ ದಂಡ - ಯಾರಿಗೆ ಎಷ್ಟು ದಂಡ ಗೊತ್ತಾ?

ಬೆಂಗಳೂರಿಗರೇ ಎಚ್ಚರ.. ಎಲ್ಲೆಡೆ ಡೆಂಗ್ಯೂ ಡಂಗುರ – ಸ್ವಚ್ಛತೆ ಕಾಪಾಡದಿದ್ದರೆ ದಂಡ ಕಟ್ಟಲು ರೆಡಿಯಾಗಿಡೆಂಗ್ಯೂ ತಡೆಗೆ ದಂಡ - ಯಾರಿಗೆ ಎಷ್ಟು ದಂಡ ಗೊತ್ತಾ?

ಬೆಂಗಳೂರಿನಲ್ಲಿ ಮತ್ತೊಮ್ಮೆ ಡೆಂಗ್ಯೂ ಹಾವಳಿ ಶುರುವಾಗಿದೆ. ಕಳೆದ ವಾರ 210 ಪ್ರಕರಣಗಳು ವರದಿಯಾಗಿವೆ. ಇದೀಗ ಡೆಂಗ್ಯೂ ಪ್ರಕರಣ ಕಂಟ್ರೋಲ್ ಮಾಡಲು ಸ್ವತಃ ಬಿಬಿಎಂಪಿ ಅಖಾಡಕ್ಕಿಳಿದಿದೆ. ಆರೋಗ್ಯ ಇಲಾಖೆ ಕೂಡಾ ಡೆಂಗ್ಯೂ ಪ್ರಕರಣಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕಾಗಿ ಬೆಂಗಳೂರು ಜನ ಅಲರ್ಟ್ ಆಗಲೇಬೇಕು. ಇಲ್ಲದಿದ್ದರೆ ದಂಡ ಕಟ್ಟಲು ರೆಡಿಯಾಗಬೇಕು.

ಇದನ್ನೂ ಓದಿ:ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ರಾಜೀನಾಮೆ – ವೈದ್ಯಕೀಯ ಕಾರಣಗಳಿಂದ ರಾಜೀನಾಮೆ ಎಂದು ಉಲ್ಲೇಖ

ಬೆಂಗಳೂರಿನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 210 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸ್ವಚ್ಛತೆ ಕಾಪಾಡದೆ ಡೆಂಗ್ಯೂ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣರಾಗುವವರಿಗೆ ಭಾರಿ ಮೊತ್ತದ ದಂಡ ವಿಧಿಸಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮುಂದಾಗಿವೆ. ಶಾಕಿಂಗ್ ವಿಚಾರ ಏನೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1582 ಸಕ್ರಿಯ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ಜುಲೈ ವರೆಗಿನ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2800 ದಾಟಿದೆ. ದಿನೇ ದಿನೇ ಡೆಂಗ್ಯೂ ಹೆಚ್ಚಳದಿಂದ ಕಂಗಾಲಾಗಿರುವ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗಳು ರೋಗ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಸ್ವಚ್ಛತೆ ಕಾಪಾಡದವರಿಗೆ ದಂಡ ಡೆಂಗ್ಯೂ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಮತ್ತೆ ದಂಡ ಪ್ರಯೋಗ ಮುಂದುವರಿಸಲು ಆರಂಭಿಸಿದೆ.

ನೀರು ನಿಂತ ಕಡೆಗಳಲ್ಲಿ ಹಾಗೂ ಸ್ವಚ್ಛತೆ ಇಲ್ಲದ ಕಡೆಯಲ್ಲಿ ಡೆಂಗ್ಯೂ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಮನೆಗಳು, ಕಚೇರಿ, ಖಾಲಿ ನಿವೇಶನಗಳು ಹಾಗೂ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದವರ ವಿರುದ್ಧ ದಂಡ ವಿಧಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಲು ಕಳೆದ ವರ್ಷ ಇಲಾಖೆ ಮುಂದಾಗಿತ್ತು. ಇದೀಗ ಮತ್ತೆ ಆ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.

  • ಮನೆಗಳು, ನಗರ ಪ್ರದೇಶ: 800 ರೂಪಾಯಿ
  • ಗ್ರಾಮೀಣ ಪ್ರದೇಶ: 400 ರೂಪಾಯಿ
  • ವಾಣಿಜ್ಯ ಸಂಸ್ಥೆ, ಶಾಲಾ ಕಾಲೇಜು, ರೆಸ್ಟೋರೆಂಟ್ , ಹೋಟೆಲ್, ಸೂಪರ್ ಮಾರ್ಕೆಟ್ , ಅಂಗಡಿ , ಪಾರ್ಕ್ , ಥಿಯೇಟರ್ (ನಗರ ಪ್ರದೇಶ): 2000 ರೂಪಾಯಿ
  • ಗ್ರಾಮೀಣ ಪ್ರದೇಶ: 1000 ರೂಪಾಯಿ
  • ಖಾಲಿ ನಿವೇಶನ , ನಿರ್ಮಾಣ ಕಾರ್ಯ , ಜಮೀನು (ನಗರ ಪ್ರದೇಶ): 4000 ರೂಪಾಯಿ ಗ್ರಾಮೀಣ ಪ್ರದೇಶ – 2000 ರೂಪಾಯಿ

Sulekha