ಡೇಟಿಂಗ್‌ ಆಪ್‌ನಲ್ಲಿ ಯುವತಿ ಪರಿಚಯ! – ಮಾಯಾಂಗನೆ ಮಾತು ನಂಬಿ ಕೋಟಿ ಕೋಟಿ ಕಳೆದುಕೊಂಡ ವ್ಯಕ್ತಿ!  

ಡೇಟಿಂಗ್‌ ಆಪ್‌ನಲ್ಲಿ ಯುವತಿ ಪರಿಚಯ! – ಮಾಯಾಂಗನೆ ಮಾತು ನಂಬಿ ಕೋಟಿ ಕೋಟಿ ಕಳೆದುಕೊಂಡ ವ್ಯಕ್ತಿ!  

ಇತ್ತೀಚೆಗೆ ಡೇಟಿಂಗ್‌ ಆಪ್‌ಗಳಿಗೇನು ಕಡಿಮೆ ಇಲ್ಲ.. ಬೇಕಾದಷ್ಟು ಡೇಟಿಂಗ್‌ ಆಪ್‌ಗಳು ನಮ್ಮ ಮುಂದಿವೆ. ಡೇಟಿಂಗ್‌ ಆಪ್‌ನಲ್ಲಿ ಸಿಕ್ಕವರ ನಂಬಿ ಮೋಸ ಹೋಗಿರುವ ಘಟನೆ ಪದೇ ಪದೆ ವರದಿಯಾಗ್ತಿವೆ. ಇದೀಗ ಇಲ್ಲೊಬ್ಬರು ಡೇಟಿಂಗ್‌ ಆಪ್‌ನಲ್ಲಿ ಪರಿಚಯವಾದ ಯುವತಿಯನ್ನ ನಂಬಿ ಕೋಟಿ ಕೋಟಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಅಶ್ವಿನಿ ಗ್ಯಾಂಗ್‌ Target  ಗಿಲ್ಲಿ, ರಕ್ಷಿತಾ! – ಗೆಲ್ತಾರೆ ಅನ್ನೋ ಭಯಕ್ಕೇ ಕುಗ್ಗಿಸೋದಾ?

ಬೆಂಗಳೂರು ಮೂಲಕದ ಜಗದೀಶ್ ಸಿ ಎಂಬವರಿಗೆ ಕ್ವಾಕ್ ಕ್ವಾಕ್ ಎಂಬ ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ. ಅಲ್ಲಿಂದ ಇವರಿಬ್ಬರು ತುಂಬಾ ಕ್ಲೋಸ್‌ ಆಗಿದ್ದಾರೆ. ಆರೋಪಿಗಳು ಅವರನ್ನ ನಂಬುವಂತೆ ಮಾಡಿ, ಅಂತರರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ನೀಡುವ ಭರವಸೆ ನೀಡಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಮೇಘನಾ ರೆಡ್ಡಿ ಎಂಬ ಹೆಸರಿನ ಮಹಿಳೆ ಈ ವಂಚನೆ ಕಾರ್ಯದಲ್ಲಿ ಪ್ರಮುಖ ಆರೋಪಿಯೆಂದು ತಿಳಿದುಬಂದಿದೆ. ಆಕೆ ತನ್ನ ತಂದೆಯ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪಿಸಲು ಬಯಸುತ್ತಿದ್ದೇನೆಂದು ಹೇಳಿ ಜಗದೀಶ್ ಅವರನ್ನು ನಂಬಿಸಿದ್ದಳು. ಇದೇ ನೆಪದಲ್ಲಿ ಜಗದೀಶ್ ಬಳಿ ಹಣವನ್ನೂ ಕೇಳಿದ್ದಳು. ನವೆಂಬರ್ 5 ಮತ್ತು 6ರಂದು ಜಗದೀಶ್ ಅವರು RTGS ಮತ್ತು NEFT ಮುಖಾಂತರ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 1,29,33,253 ರೂಗಳನ್ನು ವರ್ಗಾಯಿಸಿದ್ದರು. ಖಾತೆಗೆ ಹಣ ಬಂದ ನಂತರ ಮೇಘನಾ, ಜಗದೀಶ್​ರನ್ನು ಸಂಪರ್ಕಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾಳೆ. ಈ ವೇಳೆ ತಾನು ಮೋಸ ಹೋಗಿದ್ದೇನೆ ಅನ್ನೋದು ಗೊತ್ತಾಗಿದೆ. ಕೂಡಲೇ  ಜಗದೀಶ್  ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬೆನ್ನಲ್ಲೇ ಉತ್ತರ ಸಿಇಎನ್ (ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ) ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿ ಕಳೆದುಹೋದ ಹಣವನ್ನು ಮರುಪಡೆಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shwetha M