ಕ್ರಿಕೆಟ್ ಗ್ರೌಂಡ್ನಲ್ಲಿ ತಲೆ ಕ*ತ್ತರಿಸಿ ಚೆಂಡಾಡಿದ ಪಾಪಿಗಳು – ಬೆಂಗಳೂರಿನಲ್ಲಿ ಡೆಡ್ಲಿ ಮ*ರ್ಡರ್

ರಾಜಧಾನಿ ಬೆಂಗಳೂರಿನಲ್ಲಿ ಕ್ರೈಂ ರೇಟ್ ಹೆಚ್ಚುತ್ತಲೇ ಇದೆ. ದಿನ ಬೆಳಗ್ಗೆಯಾದ್ರೂ ರಕ್ತ ನೀರಿನಂತೆ ಹರಿಯುತ್ತಿದೆ. ಈಗ ಮತ್ತೊಂದು ಡೆಡ್ಲಿ ಮರ್ಡರ್ಗೆ ಬೆಂಗಳೂರಿನ ಬೆಚ್ಚಿ ಬಿದ್ದಿದೆ.
ಕೊಡತಿ ಗೇಟ್ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಬರ್ಬರ ಕೊಲೆ ಮಾಡಿದ್ದು, ಬಳಿಕ ಆತನ ತಲೆಯನ ಕತ್ತರಿಸಿ ಸಮೀಪದ ಕ್ರಿಕೆಟ್ ಮೈದಾನದಲ್ಲಿಟ್ಟು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರಲ್ಲಿ ತೀವ್ರ ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮೃತನನ್ನು ಗುರುತು ಪತ್ತೆಯಾಗಿಲ್ಲ, ಹೆಚ್ಚಿನ ಮಾಹಿತಿಯನ್ನ ಪೊಲೀಸರು ಕಲೆಹಾಕ್ತಿದ್ದಾರೆ.
ಇದನ್ನೂ ಓದಿ: ಪ್ರವಾಹದಲ್ಲಿ ಕೊಚ್ಚಿ ಹೋದ ಅಸ್ಸಾಂ ಜನರ ಬದುಕು – 69 ಸಾ*ವು, ಬೀದಿಗೆ ಬಿದ್ದ 4.45 ಲಕ್ಷ ಜನ
ಘಟನೆಯ ಸುಳಿವು ಸಿಗುತ್ತಿದ್ದಂತೆ ವರ್ತೂರು ಠಾಣೆಯ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಹಾಗೂ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗತ್ಯ ಸಾಕ್ಷಾಧಾರಗಳನ್ನು ಕಲೆಹಾಕುತ್ತಿದ್ದಾರೆ. ಪ್ರಸ್ತುತ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ಆ್ಯಂಗಲ್ನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ನೋಡಿರಿ

