ಮಹಿಳಾ ಸುರಕ್ಷತೆಗೆ ಪ್ಯಾನಿಕ್‌ ಬಟನ್‌ – ಬಸ್ ಅಪಘಾತ ತಡೆಗೆ ಅಡಾಸ್ ಮೊರೆ ಹೋದ ಬಿಎಂಟಿಸಿ!

ಮಹಿಳಾ ಸುರಕ್ಷತೆಗೆ ಪ್ಯಾನಿಕ್‌ ಬಟನ್‌ – ಬಸ್ ಅಪಘಾತ ತಡೆಗೆ ಅಡಾಸ್ ಮೊರೆ ಹೋದ ಬಿಎಂಟಿಸಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಸರಗಳ್ಳತನ, ಲೈಂಗಿಕ ಕಿರುಕುಳದಂತಹ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್​ಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಪ್ಯಾನಿಕ್ ಬಟನ್​ಗಳ ಅಳವಡಿಕೆ ಮಾಡಲಾಗಿದೆ. ಸುಮಾರು ಐದು ಸಾವಿರ ಬಸ್​ಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಮಾಡಲಾಗಿದ್ದು,  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: ಇನ್ನುಮುಂದೆ ವಾಹನಗಳಲ್ಲಿ ಪ್ಯಾನಿಕ್‌ ಬಟನ್‌ ಕಡ್ಡಾಯ – ಯಾವ್ಯಾವ ವಾಹನಗಳಿಗೆ ನಿಯಮ ಅನ್ವಯ?

ಇತ್ತೀಚೆಗೆ ಮಾಲ್, ಮೆಟ್ರೋದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ಕಿರುಕುಳದಿಂದ ಎಚ್ಚೆತ್ತ ಬಿಎಂಟಿಸಿ, ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸೇಫ್ ಆಗಿ ಪ್ರಯಾಣಿಸಲು ಪ್ಯಾನಿಕ್ ಬಟನ್ ಹಾಗೂ 5 ಸಾವಿರ ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

ಬಸ್‌ಗಳಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ, ಜಗಳ, ಸೇರಿದಂತೆ ಹಲವು ತೊಂದರೆಗಳಾದ್ರೆ ಜಸ್ಟ್ ಪ್ಯಾನಿಕ್ ಬಟನ್ ಕ್ಲಿಕ್ ಮಾಡಿದ್ರೇ ಸಾಕು-ಬಿಎಂಟಿಸಿ ಸಾರಥಿಗಳು ತಕ್ಷಣ ಹಾಜರಾಗಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಪ್ರಯಾಣಿಕರು ನಿಮ್ಮ ಬಸ್​ನಲ್ಲಿರುವ ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ್ದಾರೆ ಆ ಪ್ರಯಾಣಿಕರಿಗೆ ಸಮಸ್ಯೆ ಏನಾಗಿದೆ ಎಂದು ಕೇಳಲಾಗುತ್ತದೆ. ನಂತರ ಆಕೆಯ ರಕ್ಷಣೆಗೆ ಕಂಡಕ್ಟರ್ ಮತ್ತು ಡ್ರೈವರ್ ದಾವಿಸುತ್ತಾರೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಬಸ್ ಅನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತದೆ. ಯಾರಾದರೂ ಮಹಿಳೆಯರಿಗೆ ಕಿರುಕುಳ ನೀಡಿದ್ದ ಬಗ್ಗೆ ಮಾಹಿತಿ ನೀಡಿದರೆ ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗುತ್ತದೆ.

ಬಸ್ ಅಪಘಾತ ತಡೆಗೆ ಅಡಾಸ್ ಮೊರೆ!

ಇನ್ನು ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಬಸ್ ಅಪಘಾತ ತಡೆಯಲು ಬಿಎಂಟಿಸಿ ಹೊಸ ಟೆಕ್ನಾಲಜಿಯ ಮೊರೆ ಹೋಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ಅಡಾಸ್ ಅಂದ್ರೆ ಅಡ್ವಾನ್ಸ್ ಡ್ರೈವರ್‌ ಅಸಿಸ್ಟೆನ್ಸ್ ಸಿಸ್ಟಮ್ ಅಳವಡಿಕೆ ಮಾಡುತ್ತಿದೆ.

ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡಿರುವ ಈ ಡಿವೈಸ್ ಮುಂಭಾಗದಲ್ಲಿ ಬರುವ ವಾಹನಗಳ ಅಲರ್ಟ್ ಮಾಡುವ ಜೊತೆಗೆ, ಡ್ರೈವರ್ ಅನ್ನು ಸಹ ಮಾನಿಟರ್ ಮಾಡುತ್ತೆ. ಡ್ರೈವರ್ ವಿಭಾಗದಲ್ಲಿ ಅಳವಡಿಸಲಾಗಿರುವ ಐ ವಾಚ್ ಇತರೇ ವಾಹನಗಳ ನಡುವೆ ಅಂತರ ಎಷ್ಟಿದೆ ಎಂಬುದನ್ನ ರೆಡ್ ಸಿಗ್ನಲ್ ಮೂಲಕ ಅಳವಡಿಕೆ ಮಾಡಿದ್ರೆ, ಡ್ರೈವರ್ ಮಾನಿಟರಿಂಗ್ ಸಿಸ್ಟಮ್ ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅಥವಾ ನಿದ್ರೆಗೆ ಜಾರಿದರೆ ತಕ್ಷಣವೇ ಸಿಗ್ನಲ್‌ ಮೂಲಕ ಎಚ್ಚರಿಕೆ ನೀಡುತ್ತದೆ.

Shwetha M