1 ತಿಂಗಳವರೆಗೆ ಪ್ರತಿದಿನ 2 ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ!

1 ತಿಂಗಳವರೆಗೆ ಪ್ರತಿದಿನ 2 ಗಂಟೆಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕಹಿ ಸುದ್ದಿಯೊಂದಿದೆ. ಇನ್ನು ಒಂದು ತಿಂಗಳ ಕಾಲ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಪ್ರತಿ ದಿನ ಎರಡು ಗಂಟೆಗಳ ಕಾಲ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಹಿತಿ ನೀಡಿದೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಸಲಾರ್ ಟೀಸರ್ – ಟ್ರೇಲರ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಚಿತ್ರತಂಡ

ಮೆಟ್ರೋ ರೈಲು ನಿಗಮವು ಜುಲೈ 10 ರಿಂದ ಆಗಷ್ಟ್​ 09ರ ವರೆಗೆ ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳನ್ನು ಸಂಪರ್ಕಿಸುವ ಸಿಗ್ನಲಿಂಗ್​ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಬೆಳಗ್ಗೆ 5:00 ರಿಂದ ಬೆಳಿಗ್ಗೆ 7:00 ಘಂಟೆವರೆಗೂ ಈ ಮಾರ್ಗದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ.

ಬೈಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ ರಸ್ತೆ, ಕೃಷ್ಣರಾಜಪುರ-ವೈಟ್​ಫೀಲ್ಡ್​(ಕಾಡುಗೋಡಿ) ನಡುವಿನ ರೈಲು ಸಂಚಾರವನ್ನು ಬೆಳಗ್ಗೆ 5 ರಿಂದ 7 ಘಂಟೆವರೆಗೂ ಸ್ಥಗಿತಗೊಳಿಸುತ್ತಿದೆ. ಬೆಳಗ್ಗೆ 7 ಘಂಟೆಯ ನಂತರ ಬೈಯಪ್ಪನಹಳ್ಳಿ-ಕೆಂಗೇರಿ, ಕೃಷ್ಣರಾಜಪುರ-ವೈಟ್​ಫೀಲ್ಡ್​(ಕಾಡುಗೋಡಿ) ನಡುವಿನ ರೈಲು ಸಂಚಾರವು ಎಂದಿನಂತೆ ರಾತ್ರಿ 11 ಘಂಟೆವರೆಗೆ ಇರಲಿದೆ. ಹಸಿರು ಬಣ್ಣದ ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್’ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಲ ದಿನಗಳ ಹಿಂದೆ ನೇರಳೆ‌ ಮಾರ್ಗವಾದ ಬೈಯ್ಯಪ್ಪನಹಳ್ಳಿ ಕೆಂಗೇರಿ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಹೀಗಾಗಿ ಮೆಟ್ರೋ ಪ್ರಯಾಣಿಕರು ಹಲವು ಗಂಟೆಗಳ ಕಾಲ‌ ಮೆಟ್ರೋ ಸೇವೆ ಇಲ್ಲದೇ ಪರದಾಡುವಂತಾಗಿತು.‌ ಎಂದಿನಂದೆ ಬೆಳಗ್ಗೆ 6 ಗಂಟೆಗೆ ಮೆಟ್ರೋ ಸಂಚಾರ ಆರಂಭವಾಗಬೇಕಿತ್ತು. ಆದ್ರೆ ಬೆಳಗ್ಗೆ 5.45 ಕ್ಕೆ‌ ಸಿಗ್ನಲಿಂಗ್ ಸಮಸ್ಯೆ ಇರೋದು ಕಂಡುಬಂದ ಕಾರಣ ಮೆಟ್ರೋ ಸಂಚಾರ ಆರಂಭವಾಗಲೇ ಇಲ್ಲ. ಪ್ರತಿನಿತ್ಯದಂತೆ ಪ್ರಯಾಣಿಕರು ಮೆಟ್ರೋ ಸ್ಟೇಷನ್ ಗೆ ಬಂದು ಮೆಟ್ರೋ ಇಲ್ಲದೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡ್ರು. ಅದ್ರಲ್ಲೂ ಕಚೇರಿಗೆ ತೆರಳುವ ಪೀಕ್ ಅವರ್ ನಲ್ಲಿ ಮೆಟ್ರೋ ನಿಲ್ದಾಣ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಕೆಂಗೇರಿ ಮಾರ್ಗದವರೆಗೂ ರೈಲು ಸಂಚಾರ ಸ್ಥಗಿತ ಮಾಡಲಾಗಿತ್ತು.

suddiyaana