ನಿದ್ದೆ ಮಾಡಲೆಂದೇ ರಜೆ ನೀಡಿದ ಬೆಂಗಳೂರು ಕಂಪನಿ – ಸರ್ಪ್ರೈಸ್ ಗಿಫ್ಟ್ ಗೆ ಉದ್ಯೋಗಿಗಳು ಫುಲ್ ಖುಷ್!

ನಿದ್ದೆ ಮಾಡಲೆಂದೇ ರಜೆ ನೀಡಿದ ಬೆಂಗಳೂರು ಕಂಪನಿ – ಸರ್ಪ್ರೈಸ್ ಗಿಫ್ಟ್ ಗೆ ಉದ್ಯೋಗಿಗಳು ಫುಲ್ ಖುಷ್!

ಊಟ ಬೇಕಾದ್ರೂ ಬಿಡಬಹುದು. ಆದ್ರೆ ನಿದ್ದೆ ಮಾಡದೆ ಇರೋಕೇ ಆಗಲ್ಲ. ಅದ್ರಲ್ಲೂ ಬೆಳಗ್ಗೆ ಹೊತ್ತು ಬೇಗ ಎದ್ದೇಳುವುದು ಇದೆಯಲ್ಲ ಅದಕ್ಕಿಂತ ಹಿಂಸೆ ಇನ್ನೊಂದಿಲ್ಲ. ಎಷ್ಟೋ ಸಲ ಕೆಲಸ ಕೆಲಸ ಅನ್ಕೊಂಡು ಬೇಗ ಎದ್ದೇಳುವ ಜನ ಆಫೀಸ್​ನಲ್ಲಿ ತೂಕಡಿಸುತ್ತಾ ಕೂರುತ್ತಾರೆ. ಅಂತಹ ನಿದ್ದೆಪೋತರಿಗೆ ಇಲ್ಲೊಂದು ಕಂಪನಿ ಸರ್​ಪ್ರೈಸ್ ಗಿಫ್ಟ್ ನೀಡಿದೆ.

ಕೆಲಸಗಳ ಒತ್ತಡ, ತಲೆ ಚಿಟ್ಟು ಹಿಡಿಯುವಷ್ಟು ಚಿಂತೆ, ಹಣದ ಕೊರತೆ, ಅನಾರೋಗ್ಯ ಅದು ಇದು ಅನ್ಕೊಂಡು ಜನ ನಿದ್ದೆ ಮಾಡೋದನ್ನೇ ಕಡಿಮೆ ಮಾಡಿಬಿಟ್ಟಿದ್ದಾರೆ. ಆದ್ರೆ ನಿದ್ದೆ ಆರೋಗ್ಯಕ್ಕೆ ತುಂಬಾ ಮುಖ್ಯ. ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿದ್ರೆ ಮಾತ್ರ ದಿನಪೂರ್ತಿ ಉಲ್ಲಾಸದಿಂದ ಇರೋಕೆ ಸಾಧ್ಯ. ಹೀಗಾಗೇ ಬೆಂಗಳೂರಿನ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ನಿದ್ದೆ ಮಾಡಲೆಂದೇ ಸರ್‌ಪ್ರೈಸ್ ಆಗಿ ಒಂದು ದಿನದ ರಜೆಯನ್ನು ನೀಡಿದೆ.

ಇದನ್ನೂ ಓದಿ : ಅಪ್ಪು ಹುಟ್ಟುಹಬ್ಬಕ್ಕೆ ದಿನವಿಡೀ ಕಾರ್ಯಕ್ರಮ – ಹೇಗಿದೆ ಗೊತ್ತಾ ‘ಪವರ್ ಸ್ಟಾರ್’ ಬರ್ತಡೇ..? 

ಮಾರ್ಚ್ 17, ವಿಶ್ವ ನಿದ್ರಾ ದಿನ (World sleep day). ಹೀಗಾಗಿ ಬೆಂಗಳೂರು ಮೂಲದ ಕಂಪನಿ ವಿಶ್ವ ನಿದ್ರಾ ದಿನವನ್ನು ಆಚರಿಸಲು ತನ್ನ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿದೆ. Wakefit Solutions, D2C ಮನೆ ಮತ್ತು ನಿದ್ರೆ ಪರಿಹಾರಗಳ ಕಂಪನಿಯು ಈಗ ತನ್ನ ಗೃಹೋಪಯೋಗಿ ಉತ್ಪನ್ನಗಳ ಕಾರಣದಿಂದಾಗಿ ಬಹಳ ಜನಪ್ರಿಯವಾಗಿದೆ. ಸದ್ಯ ವಿಶ್ವ ನಿದ್ರಾ ದಿನದಂದು ತನ್ನ ಉದ್ಯೋಗಿಗಳಿಗೆ ಒಂದು ದಿನದ ರಜೆ ಘೋಷಿಸುವ ಮೂಲಕ ಎಲ್ಲೆಡೆ ವೈರಲ್ ಆಗ್ತಿದೆ.

ವಿಶ್ವ ನಿದ್ರಾ ಆಚರಣೆಯ ದಿನವಾದ ಮಾರ್ಚ್ 17, 2023 ರಂದು, ಎಲ್ಲಾ ವೇಕ್‌ಫಿಟ್ ಉದ್ಯೋಗಿಗಳಿಗೆ ರಜೆಯೆಂದು ಘೋಷಿಸಲಾಗಿದೆ. ಮತ್ತು ದೀರ್ಘ ವಾರಾಂತ್ಯವನ್ನು ಅನುಸರಿಸಲು, ಹೆಚ್ಚು ಅಗತ್ಯವಿರುವ ವಿಶ್ರಾಂತಿ ಪಡೆಯಲು ಇದು ಪರಿಪೂರ್ಣ ಅವಕಾಶವಾಗಿದೆ’ ಎಂದು ತಿಳಿಸಲಾಗಿದೆ. ಇ ಮೇಲ್​ನಲ್ಲಿ ‘ಸರ್ಪ್ರೈಸ್ ಹಾಲಿಡೇ: ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಕಂಪನಿಯ ಹೆಚ್‌ಆರ್‌ ಪೋರ್ಟಲ್‌ ಮೂಲಕ ಈ ರಜೆಯನ್ನು ಸ್ಯಾಂಕ್ಷನ್ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ. ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್‌ನ 6ನೇ ಆವೃತ್ತಿಯ ಪ್ರಕಾರ 2022ರಲ್ಲಿ 21% ನಷ್ಟು ಜನರು ಕೆಲಸದ ಸಮಯದಲ್ಲಿ ನಿದ್ರೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. 21% ನಷ್ಟು ಮಂದಿ ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ ಬೆಳಗ್ಗೆ ಸುಸ್ತಾಗಿ ಏಳುತ್ತಾರೆ ಎಂದು ತಿಳಿದುಬಂದಿದೆ.

suddiyaana