ಖಾಸಗಿ ಚಾಲಕನಿಗೆ ಬಲವಂತದ ಸನ್ಮಾನ – ಮುಖಕ್ಕೆ ಉಗಿದು ಅವಮಾನ!

ಖಾಸಗಿ ಚಾಲಕನಿಗೆ ಬಲವಂತದ ಸನ್ಮಾನ – ಮುಖಕ್ಕೆ ಉಗಿದು ಅವಮಾನ!

 ಬೆಂಗಳೂರು: ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು ಅಥವಾ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಬಂದ್‌ಗೆ ಕರೆ ನೀಡಿದೆ. ಈ ಮುಷ್ಕರಕ್ಕೆ ಖಾಸಗಿ ವಾಹನಗಳ ಮಾಲೀಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಕೆಲ ಖಾಸಗಿ ಸಂಘಟನೆಗಳು ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

ರಾಜ್ ಕುಮಾರ್ ರಸ್ತೆ, ಏರ್ಪೋರ್ಟ್ ರಸ್ತೆ ಜಾಲಹಳ್ಳಿ ಬಳಿ ಆಟೋ, ಕ್ಯಾಬ್‌ ಚಾಲಕರ ಮೇಲೆ ಹಲ್ಲೆ ನಡೆದಿದೆ. ರಾಜ್ ಕುಮಾರ್ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ನಿಲ್ಲಿಸಿ, ಆಟೋ ಪಂಕ್ಚರ್ ಮಾಡಲಾಗಿದೆ. ಅಲ್ಲದೆ ಆಟೋ ಚಾಲಕನಿಗೆ ಸಾರಿಗೆ ಸಂಘಟನೆಯವರು ಮನಬಂದಂತೆ ಬೈದಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬಂದ್ ಬಿಸಿ – ಆಟೋ-ಕ್ಯಾಬ್ ಸಿಗದೆ ಜನರ ಪರದಾಟ!

ವಿಜಯನಗರದ ಬಳಿ ಹೋಗುತ್ತಿದ್ದ ಆಟೋ ತಡೆದು, ಚಕ್ರದ ಗಾಳಿ ತೆಗೆದ ಹಿನ್ನಲೆ ಚಾಲಕ ಹಾಗೂ ಸಂಘಟನೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ರ್ಯಾಲಿಗೆ ಬರುವಂತೆ ಸಂಘಟನೆಯವರು ಒತ್ತಾಯಪಡಿಸಿದ ಘಟನೆ ನಡೆಯಿತು.

ಇನ್ನು ತಡರಾತ್ರಿ ಜಾಲಹಳ್ಳಿ ಬಳಿ ಆಟೋ ಓಡಿಸಿದ ವ್ಯಕ್ತಿಗೆ ಸನ್ಮಾನ ಮಾಡಿ ಅವಮಾನ ಮಾಡಿದ್ದಾರೆ. ಕೆಲ ಸಂಘಟನೆಯ ಚಾಲಕರು ಗೂಂಡಾ ವರ್ತನೆ ತೋರಿ ಆಟೋ ಓಡಿಸಿದ ಚಾಲಕನ ಮುಖಕ್ಕೆ ಎಂಜಲು ಉಗಿದು ಅವಮಾನಗೊಳಿಸಿದ್ದಾರೆ.

ಕೆಲ ಆಟೋ ಚಾಲಕರಿಂದ ಹೆಚ್ಚು ದರ ಸುಲಿಗೆ

ಕೆಲವೆಡೆ ಆಟೋ ಚಾಲಕರಿಂದ ಸುಲಿಗೆ ನಡೆಯುತ್ತಿದೆ. ಪೊಲೀಸರ ಮುಂದೆ ಮೀಟರ್ ಹಾಕಿ, ನಂತರ ಸ್ವಲ್ಪ ದೂರ ಹೋದಾಗ 85 ರೂಪಾಯಿ ಮೀಟರ್ ಬದಲಿಗೆ ಪ್ಯಾಸೆಂಜರ್ಸ್ ನಿಂದ 500 ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದಾರೆ. ಮೆಜೆಸ್ಟಿಕ್ ನಿಲ್ದಾಣದ ಕಡೆ ಕ್ಯಾಬ್ ರ್ಯಾಲಿ ನಗರದ ಗೊರಗುಂಟೆ ಪಾಳ್ಯದಿಂದ ಕ್ಯಾಬ್ ರ್ಯಾಲಿ ನಡೆಸಲು ಚಾಲಕರು ಸಿದ್ಧತೆ ನಡೆಸುತ್ತಿದ್ದಾರೆ. ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಮೈಸೂರು ರಸ್ತೆ, ಮೇಕ್ರಿ ವೃತ್ತ ಸೇರಿದಂತೆ ನಗರದ ನಾನಾ ಕಡೆಗಳಿಂದ ಖಾಸಗಿ ಸಾರಿಗೆ ಸಂಸ್ಥೆಗಳ ರ್ಯಾಲಿ ಆರಂಭವಾಗಿದೆ.

suddiyaana