BMTC ಬಸ್ ನಲ್ಲಿ ಬಂದಿದ್ದ ಆರೋಪಿ! – ರಾಮೇಶ್ವರಂ ಕೆಫೆಯ ಸ್ಫೋಟಕ ಮಾಹಿತಿ ಬಹಿರಂಗ

BMTC ಬಸ್ ನಲ್ಲಿ ಬಂದಿದ್ದ ಆರೋಪಿ! – ರಾಮೇಶ್ವರಂ ಕೆಫೆಯ ಸ್ಫೋಟಕ ಮಾಹಿತಿ ಬಹಿರಂಗ

ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಅವಳಿ ಬಾಂಬ್‌ ಸ್ಪೋಟ ಸಂಭವಿಸಿತ್ತು. ಇದರಿಂದಾಗಿ ಸಿಲಿಕಾನ್‌ ಸಿಟಿ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಸಿಸಿಟಿವಿಯಲ್ಲಿ ಶಂಕಿತನ ಸುಳಿವು ಸಿಕ್ಕಿದೆ. ಅಲ್ಲದೇ ಆತ ಬಳಸಿರುವ ಸ್ಪೋಟಕದ ಮಾಹಿತಿಗಳು ಪತ್ತೆಯಾಗಿದೆ.

ಇದನ್ನೂ ಓದಿ: ಫಿಟ್ ಬಾಡಿ.. ಹಳೇ ಹೇರ್‌ಸ್ಟೈಲ್ – ಉದ್ದ ಕೂದಲಿನಲ್ಲಿ ಧೋನಿ ಸ್ಟೈಲಿಶ್ ಲುಕ್, ಮಹಿ ಫಿಟ್‌ನೆಸ್‌ಗೆ ಫ್ಯಾನ್ಸ್ ಫಿದಾ

ಶುಕ್ರವಾರ ಮಧ್ಯಾಹ್ನ ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನಗರದ ಎಲ್ಲಾ ಕಡೆಗಳಲ್ಲೂ ಹೈ ಅಲರ್ಟ್‌ ಘೋಷಿಸಲಾಗಿದೆ. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಒಂದೊಂದೇ ಸ್ಪೋಟಕ ಮಾಹಿತಿಗಳು ಬಯಲಾಗುತ್ತಿವೆ. ಇದೀಗ ಸಿಸಿಟಿವಿಯಲ್ಲಿ ಆರೋಪಿಯ ಅರ್ಧ ಮುಖ ಸ್ಪಷ್ಟವಾಗಿದ್ದು, ಆತನ ಚಹರೆಯ ಲಕ್ಷಣಗಳು ಸಹ ಸೆರೆಯಾಗಿದೆ. ರಾಮೇಶ್ವರಂ ಕೆಫೆಗೆ ಬಂದ ವ್ಯಕ್ತಿ ಸ್ಫೋಟಕ ವಸ್ತು ತಂದಿರೋದು ಪಕ್ಕಾ ಆಗಿದೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಕ್ಕೆ ಶಾರ್ಟ್ ಟೈಂ ಬ್ಲಾಸ್ಟ್ ಟೈಮರ್ ಬಳಸಲಾಗಿದೆ. ಆತ ಬಂದ ಸಮಯವು ಅನೇಕ ಸ್ಫೋಟಕ ಸುಳಿವು ನೀಡಿದೆ. ಹೀಗಾಗಿ ತನಿಖಾ ತಂಡ ಆರೋಪಿಯ ಹಿಂದೆ ಬಿದ್ದಿದೆ.

BMTC ಬಸ್​ ಮೂಲಕ ರಾಮೇಶ್ವರಂ ಕೆಫೆಗೆ ಬಂದಿರುವ ಶಂಕಿತ ಆರೋಪಿ ಮೊದಲೇ ಟೈಮರ್ ಫಿಕ್ಸ್ ಮಾಡಿ ಸ್ಫೋಟಿಸಲು ಪ್ಲಾನ್ ಮಾಡಿದ್ದಾನೆ ಎನ್ನಲಾಗಿದೆ. ಪ್ರಮುಖವಾಗಿ ಕೆಫೆಯ ಸಿಸಿಟಿವಿಯಲ್ಲಿ ತನ್ನ ದೃಶ್ಯ ಸೆರೆಯಾಗದಂತೆ ಬಹಳ ಹುಷಾರಾಗಿ ಓಡಾಡಿದ್ದಾನೆ. ಎಲ್ಲಿ ಸಿಸಿಟಿವಿಗಳು ಇಲ್ವೋ ಆ ಜಾಗದಲ್ಲೇ ಓಡಾಡಲು ಪ್ರಯತ್ನಿಸಿದ್ದಾನೆ. ಬಾಂಬ್ ಬ್ಯಾಗ್ ಇಡುವಾಗಲೂ ಸಿಸಿಟಿವಿ ಅವೈಡ್ ಮಾಡಿದ್ದಾನೆ ಎನ್ನಲಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ​ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ವಾಹನಗಳ ಮೇಲೆ ಹದ್ದಿನಕಣ್ಣು ಇಟ್ಟಿದ್ದಾರೆ. ಮತ್ತು ಎರಡೂ ಟರ್ಮಿನಲ್​ ಒಳಗಡೆ ಪ್ರವೇಶಿಸುವವರ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೂ ನಿಗಾ ಇರಿಸಿದ್ದಾರೆ. ವಿಐಪಿ ಲೈನ್​​ನಲ್ಲಿ ಪಾರ್ಕಿಂಗ್​ ಅವಧಿಯನ್ನು ಅರ್ಧ ಗಂಟೆಯಿಂದ 5 ರಿಂದ 10 ನಿಮಿಷಕ್ಕೆ ಇಳಿಸಿದ್ದಾರೆ. ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದಾರೆ. ರಾತ್ರ-ಹಗಲು ಮೂರು ಪಾಳಯದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Shwetha M