ಸಿಲಿಕಾನ್‌ ಸಿಟಿಯಲ್ಲಿ ವಾಯುಮಟ್ಟ ಕುಸಿತ – ಜನರ ಆರೋಗ್ಯಕ್ಕೆ ಕಾದಿದ್ಯಾ ಸಂಚಕಾರ!

ಸಿಲಿಕಾನ್‌ ಸಿಟಿಯಲ್ಲಿ ವಾಯುಮಟ್ಟ ಕುಸಿತ – ಜನರ ಆರೋಗ್ಯಕ್ಕೆ ಕಾದಿದ್ಯಾ ಸಂಚಕಾರ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನ ಜನತೆಗೆ ಶಾಕಿಂಗ್‌ ಸುದ್ದಿಯೊಂದಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಶ್ವಾಸಕೋಶ, ಹೃದ್ರೋಗ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಬಿರಿಯಾನಿ ಎಲೆ ಎಂದು ನೀಲಗಿರಿ ಎಲೆ ಮಾರಾಟ! – ರಾಜ್ಯದಲ್ಲಿ ಬಯಲಾಯ್ತು ಮತ್ತೊಂದು ದಂಧೆ!

ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಲಿನ್ಯ ನಿಯಂತ್ರಣ ಮಂಡಳಿ ನಗರದ ಹಲವು ಭಾಗಗಳಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ ಮಾಪಕಗಳನ್ನು ಅಳವಡಿಕೆ ಮಾಡಿದೆ. ಇದ್ರ ಪ್ರಕಾರ, ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಕುಸಿತ ಸರಾಸರಿಗಿಂತ ಹೆಚ್ಚಾಗಿದೆ. ಅದರಲ್ಲೂ ಸಿಲ್ಕ್ ಬೋರ್ಡ್ ಸುತ್ತಮುತ್ತ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಪ್ರಮಾಣ 125 ಮುಟ್ಟಿದೆ. ಮಾರ್ಗಸೂಚಿಗಳ ಪ್ರಕಾರ 63 ಸರಾಸರಿ AQI ಮಟ್ಟ ಆಗಿದ್ದು, ಮೆಜೆಸ್ಟಿಕ್ ಸಿಟಿ ರೈಲ್ವೆ ನಿಲ್ದಾಣ, ಪೀಣ್ಯ, ಕಸ್ತೂರಿನಗರ, ಮೈಲಸಂದ್ರ ಭಾಗಗಳಲ್ಲಿ ಸರಾಸರಿಗಿಂತ ಹೆಚ್ಚಿನ AQI ದಾಖಲಾಗಿದೆ.

ದಿನಾಂಕ 10-7-2025ರ ಪ್ರಕಾರ ಬೆಂಗಳೂರಿನ ವಿವಿಧ ಪ್ರದೇಶಗಳ ಏರ್ ಕ್ವಾಲಿಟಿ ಇಂಡೆಕ್ಸ್ ಪ್ರಮಾಣವನ್ನು ರಿಲೀಸ್‌ ಮಾಡಿದೆ. ಸಿಲ್ಕ್ ಬೋರ್ಡ್ನಲ್ಲಿ 125 AQI, ಪೀಣ್ಯದಲ್ಲಿ 73 AQI, ಸಿಟಿ ರೈಲ್ವೆ ನಿಲ್ದಾಣದಲ್ಲಿ 93 AQI, ಕಸ್ತೂರಿ ನಗರದಲ್ಲಿ 68 AQI, ಮೈಲಸಂದ್ರದಲ್ಲಿ 72 AQI ದಾಳಲಾಗಿದೆ.

AQI ಪ್ರಮಾಣ 63 ಸರಾಸರಿಯಾಗಿದ್ದು, ಅದು ದಾಟಿದರೆ ಅನಾರೋಗ್ಯಕರ ಎಂದು ಹೇಳಲಾಗಿದೆ. ಇನ್ನು ಸಿಲ್ಕ್ ಬೋರ್ಡ್ ನಲ್ಲಿ ಈ ಪ್ರಮಾಣ 125 ಮುಟ್ಟಿದ್ದು, ಇದು ಉಸಿರಾಡಲು ಅಪಾಯ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಗಳಿಗೆ ಆಹ್ವಾನ ಎನ್ನಲಾಗಿದೆ. ಹೀಗಾಗಿ ಪರಿಸರ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಾಯು ಗುಣಮಟ್ಟ ಸುಧಾರಿಸುವತ್ತ ಗಮನ ಹರಿಸಬೇಕಿದೆ.

Shwetha M