7 ಕೋಟಿ ದರೋಡೆ ಕೇಸ್!‌ – ಆಂಧ್ರದ ವೇಲೂರಲ್ಲಿ ಕೆಜಿ ಹಳ್ಳಿ ನಿವಾಸಿ ವಶಕ್ಕೆ!

7 ಕೋಟಿ ದರೋಡೆ ಕೇಸ್!‌ – ಆಂಧ್ರದ ವೇಲೂರಲ್ಲಿ ಕೆಜಿ ಹಳ್ಳಿ ನಿವಾಸಿ ವಶಕ್ಕೆ!

ಬೆಂಗಳೂರಿನ ಡೈರಿ ಸರ್ಕಲ್‌ ಬಳಿ ನಡೆದ ಮಹಾ ದರೋಡೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದು, 5 ಕೋಟಿ ರೂಪಾಯಿ ವಶಕ್ಕೆ ಪಡೆದಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್! – ಧನ್ವೀರ್ ವಿಚಾರಣೆಯಿಂದ ಎಸ್ಕೇಪ್ ಆಗಿದ್ರಾ?

ನ.19ರ ಮಧ್ಯಾಹ್ನ ಡೈರಿ ಸರ್ಕಲ್‌ನಲ್ಲಿ ಬರೋಬ್ಬರಿ 7 ಕೋಟಿ 11 ಲಕ್ಷ ರೂ. ಹಣವನ್ನ ದೋಚಿ ದರೋಡೆಕೋರರು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಬೆನ್ನುಹತ್ತಿರುವ ಪೊಲೀಸರು ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಸೇರಿ ಇಬ್ಬರನ್ನು ಬಂಧಿಸಿದ್ದರು. ಇದೀಗ ಕೆಜಿ ಹಳ್ಳಿ ನಿವಾಸಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಬಂಧಿತ ಆರೋಪಿ ವ್ಯಾಗನರ್‌ನಲ್ಲಿ ತಮಿಳುನಾಡಿಗೆ ಹೋಗಿದ್ದ. ಬಳಿಕ ಕುಪ್ಪಂನಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದ. ಈತನನ್ನು ಆಂಧ್ರದ ವೇಲೂರು ಬಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನೂ ದರೋಡೆ ಮಾಡಿದ ಹಣದಲ್ಲಿ ನವೀನ್ ಎಂಬಾತನ ಮನೆಯಲ್ಲಿ ಐದೂವರೆ ಕೋಟಿ ಹಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪತಿಯ ಹಲವು ಲಾಡ್ಜ್ ಗಳಲ್ಲಿ ಪೊಲೀಸರ ತಂಡ ತಪಾಸಣೆ ನಡೆಸುತ್ತಿದೆ.

Shwetha M