ಮಗುವನ್ನ ಶಾಲೆಗೆ ಬಿಡಲು ಹೋಗ್ತಿದ್ದ ವೇಳೆ​ ಅಪಘಾತ – ತಾಯಿ ಮುಂದೆಯೇ ಹೋಯ್ತು 5 ವರ್ಷದ ಮಗು ಜೀವ

ಮಗುವನ್ನ ಶಾಲೆಗೆ ಬಿಡಲು ಹೋಗ್ತಿದ್ದ ವೇಳೆ​ ಅಪಘಾತ –  ತಾಯಿ ಮುಂದೆಯೇ ಹೋಯ್ತು 5 ವರ್ಷದ ಮಗು ಜೀವ

ಬೆಂಗಳೂರಿನ ಉತ್ತರಹಳ್ಳಿಯ ಸಾವನದರ್ಬಾರ್ ಆಶ್ರಮದ ಬಳಿ ಈ ಅಪಘಾತವಾಗಿದ್ದು, ತಾಯಿ ಜೊತೆ ಸ್ಕೂಟರ್​​​​ನಲ್ಲಿ ಹೋಗ್ತಿದ್ದ 5 ವರ್ಷದ ಮಗ ಮೃತಪಟ್ಟಿದ್ದಾನೆ.  ಭವೀನ್ ಮೃತ ದುರ್ದೈವಿ ಆಗಿದ್ದಾನೆ. ತಾಯಿ ಶುಭ ಲತಾ ಎಂಬುವವರು ಮಗುವನ್ನ ಶಾಲೆ ಬಿಡಲೆಂದು ಸ್ಕೂಟರ್​ನಲ್ಲಿ ಕೂರಿಸಿಕೊಂಡು ಹೋಗ್ತಿದ್ದ ವೇಳೆ ಈ ದುರಂತ ನಡೆದಿದೆ.

 ದ್ವಿಚಕ್ರ ವಾಹನ ಡಿಕ್ಕಿಯಾಗಿ ಮಗು ಕೆಳಗೆ ಬಿದ್ದಿದೆ. ಇದೇ ವೇಳೆ ಹಿಂದೆಯಿಂದ ಬಂದ ಟಿಪ್ಪರ್ ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮತ್ತೊಂದೆಡೆ ಮಗನಿಗೆ ಶೂ ಕೊಡಿಸಲು ಹೋದ ತಂದೆ ಮೇಲೆ ಟಿಪ್ಪರ್ ಹರಿದು ಸಾವನ್ನಪ್ಪಿರೋ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ನಡೆದಿದೆ. 36 ವರ್ಷದ ಚೇತನ್​ ಮೃತಪಟ್ಟ ದುರ್ದೈವಿ ಆಗಿದ್ದು, ಹೆಮ್ಮಿಗೆಪುರದ ಬಳಿ ಮಗನಿಗೆ ಶೂ ಕೊಡಿಸಲು ಹೋಗ್ತಿದ್ದ ತಂದೆ ಮೇಲೆ ಟಿಪ್ಪರಿ ಲಾರಿ ಹರಿದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ  ಕೆಂಗೇರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರಕ್ ಚಾಲಕನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

Kishor KV

Leave a Reply

Your email address will not be published. Required fields are marked *