ಬಂಗಾಳ ಹುಲಿ ಸೌರವ್ ಗಂಗೂಲಿ ಬಯೋಪಿಕ್ – ದಾದಾ ಸಿನಿಮಾಕ್ಕಾಗಿ ತೂಕ ಹೆಚ್ಚಿಸಿಕೊಂಡ ರಾಜ್‌ಕುಮಾರ್ ರಾವ್

ಭಾರತದ ಕ್ರಿಕೆಟ್ ದಿಗ್ಗಜ, ತಮ್ಮ ನಾಯಕತ್ವ ಗುಣದಿಂದಲೇ ದಾದಾ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಬಂಗಾಳ ಹುಲಿ ಜೀವನ ಚರಿತ್ರೆ ಈಗ ಸಿನಿಮಾ ಮೂಲಕ ಹೊರಬರಲಿದೆ. ದಾದಾ ಸೌರವ್ ಗಂಗೂಲಿ ಅವರ ಜೀವನ ಆಧರಿಸಿ ನಿರ್ಮಾಣವಾಗುತ್ತಿರುವ ಸಿನಿಮಾದ ಶೂಟಿಂಗ್ ಆರಂಭವಾಗಿದೆ.
ಇದನ್ನೂ ಓದಿ: IPLನ ಬೆಸ್ಟ್ ಕ್ಯಾಪ್ಟನ್ ಶ್ರೇಯಸ್ – ಜಿಂಬಾಬ್ವೆ ಸರಣಿಗೂ ಭಾರತದ ನಾಯಕ?
ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಬಂಗಾಳದ ಹುಲಿ ಸೌರವ್ ಗಂಗೂಲಿ. ಇದೀಗ ದಾದಾ ಜೀವನವನ್ನು ಆಧರಿಸಿ ಸಿನಿಮಾ ನಿರ್ಮಾಣವಾಗುತ್ತಿದೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಗಂಗೂಲಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕ್ರಿಕೆಟ್ ಲೆಜೆಂಡ್ ಸೌರವ್ ಗಂಗೂಲಿ ಅವರ ಜೀವನವನ್ನು ಆಧರಿಸಿದ ಈ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣವನ್ನು ರಾಜ್‌ಕುಮಾರ್ ರಾವ್ ಅಧಿಕೃತವಾಗಿ ಪ್ರಾರಂಭಿಸಿದ್ದಾರೆ. ಸಿನಿಮಾ ಟೈಟಲ್ ದಾದಾ ಎಂದು ಫೈನಲ್ ಆಗಿದೆ.
ಈ ಬಗ್ಗೆ ರಾಜ್‌ಕುಮಾರ್ ರಾವ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರದ ಬಗೆಗಿನ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ದಾದಾ, ಈ ಒಂದೇ ಪದವು ಅಭಿಮಾನಿಗಳನ್ನು ರೋಮಾಂಚನಗೊಳಿಸಲು ಸಾಕು, ಇದು ಕೇವಲ ಚಿತ್ರವಲ್ಲ, ಇದು ಭಾರತೀಯ ಕ್ರಿಕೆಟ್ ಅನ್ನು ಶಾಶ್ವತವಾಗಿ ಬದಲಾಯಿಸಿದ ಹೆಸರಿನ ಕಥೆ. ಈ ಜೀವನ ಚರಿತ್ರೆಯನ್ನು ಲವ್ ರಂಜನ್ ನಿರ್ಮಿಸುತ್ತಿದ್ದಾರೆ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶಿಸುತ್ತಿದ್ದಾರೆ. ಇನ್ನು ಈ ಚಿತ್ರದ ಶೂಟಿಂಗ್ ಇದೀಗ ಅಧಿಕೃತವಾಗಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಚಿತ್ರಕ್ಕಾಗಿ ರಾಜಕುಮಾರ್ ರಾವ್ ದಾದಾ ರೀತಿ ಕಾಣಲು ಮೇಕ್ ಓವರ್ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ನಟ ತೂಕ ಹೆಚ್ಚಿಸಿಕೊಂಡಿರುವ ಜೊತೆಗೆ ಹೊಸ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡುತ್ತಾ ದಾದಾ ಪಾತ್ರಕ್ಕಾಗಿ ನಾನು 9-10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೇನೆ ಎಂದು ನಟ ರಾಜ್‌ಕುಮಾರ್ ರಾವ್ ಹೇಳಿದ್ದಾರೆ. ಬಹಳಷ್ಟು ಪಿಜ್ಜಾ, ಸಿಹಿತಿಂಡಿಗಳು, ಆಲು ಪರಾಠ ಮತ್ತು ಬಿರಿಯಾನಿ ತಿನ್ನುವ ಮೂಲಕ ನಾನು ತೂಕ ಹೆಚ್ಚಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಇದರ ಜೊತೆಗೆ ಗಂಗೂಲಿ ಮೋಡ್‌ಗೆ ಮರಳಲು ಮತ್ತೆ ತನ್ನ ಫಿಟ್‌ನೆಸ್‌ಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ರಾಜ್‌ಕುಮಾರ್ ರಾವ್ ಹೇಳಿಕೊಂಡಿದ್ದಾರೆ.

ನೋಡಿರಿ

