ಸೊಳ್ಳೆ ಕಚ್ಚಿತೆಂದು ಅದನ್ನೇ ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ.. –  ಸೊಳ್ಳೆಯನ್ನು ತಂದಿದ್ದೇಕೆ ಗೊತ್ತಾ?

ಸೊಳ್ಳೆ ಕಚ್ಚಿತೆಂದು ಅದನ್ನೇ ಚೀಲದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದ.. –  ಸೊಳ್ಳೆಯನ್ನು ತಂದಿದ್ದೇಕೆ ಗೊತ್ತಾ?

ಮಳೆಗಾಲ ಮುಗಿಯುತ್ತಾ ಬರುತ್ತಿದ್ದಂತೆ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದೆ. ಮಲೇರಿಯಾ, ಡೆಂಘೀ, ವೈರಲ್‌ ಫಿವರ್‌ ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಇನ್ನು ಮನೆಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದಂತೆ ಸೊಳ್ಳೆ ಬತ್ತಿ, ಸೊಳ್ಳೆ ಬ್ಯಾಟ್‌ ನಿಂದ ಕೊಲ್ಲುತ್ತೇವೆ. ಆದರೂ ಕೆಲವು ಸೊಳ್ಳೆ ಕಚ್ಚುತ್ತವೆ. ಇದೀಗ ಇಲ್ಲೊಬ್ಬ ವ್ಯಕ್ತಿಗೆ ಸೊಳ್ಳೆಗಳು ಕಚ್ಚಿವೆ. ಸೊಳ್ಳೆ ಕಚ್ಚಿದ್ದಕ್ಕೆ ಆತ ಏನು ಮಾಡಿದ ಅಂತಾ ಗೊತ್ತಾದರೆ ಶಾಕ್‌ ಆಗೋದು ಗ್ಯಾರಂಟಿ.

ಏನಿದು ಘಟನೆ?

ನಿಂತ ಮಳೆ ನೀರಲ್ಲಿ ಸೊಳ್ಳೆಗಳು ಹುಟ್ಟಿಕೊಳ್ಳೋದು ಕಾಮನ್‌. ಸಂಜೆಯಾಗುತ್ತಿದ್ದಂತೆ ಈ ಸೊಳ್ಳೆಗಳು ಜೀವ ಹಿಂಡಲು ಶುರುಮಾಡುತ್ತವೆ. ನಿಂತಲ್ಲಿ ನಿಲ್ಲಲು ಬಿಡಲ್ಲ. ಕೂತಲ್ಲಿ ಕೂರಲು ಬಿಡಲ್ಲ.. ಗುಯ್‌ ಅಂತಾ ಸೌಂಡ್ ಮಾಡಿಕೊಂಡು ಕಚ್ಚುತ್ತವೆ. ಇದರ ಕಾಟಕ್ಕೆ ತಲೆ ಕೆಟ್ಟು ಹೋದಂತೆ ಆಗುತ್ತೆ. ಪಶ್ಚಿಮ ಬಂಗಾಳದಲ್ಲಿ ವ್ಯಕ್ರಿಯೊಬ್ಬನಿಗೆ ಸೊಳ್ಳೆ ಕಚ್ಚಿದೆ. ಇದೀಗ ಆತ ಸೊಳ್ಳೆಯನ್ನು ಹಿಡಿದು ಚೀಲದಲ್ಲಿ ತುಂಬಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ.

ಇದನ್ನೂ ಓದಿ: ಕಡಿಮೆ ಅಂಕ ಕೊಟ್ಟಿದ್ದಕ್ಕೆ ಹೀಗಾ ಮಾಡೋದು! – ಶಿಕ್ಷಕಿಯ ವಾಟರ್ ಬಾಟಲ್‌ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!

ಚೀಲದಲ್ಲಿ ಸೊಳ್ಳೆ ತುಂಬಿ ತಂದಿದ್ದ!

ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಮಂಗಲಕೋಟೆಯ ಖುರ್ತುಬಾ ಗ್ರಾಮದ ನಿವಾಸಿ ಮನ್ಸೂರ್ ಅಲಿ ಶೇಖ್ ಎಂಬುವರು ಸುಮಾರು 25 ರಿಂದ 30 ಸೊಳ್ಳೆಗಳನ್ನು ಸಂಗ್ರಹಿಸಿ ಪಾಲಿಥಿನ್ ಚೀಲದಲ್ಲಿ ಆಸ್ಪತ್ರೆಗೆ ತಂದು ಕೊಟ್ಟಿದ್ದಾರೆ. ಈ ವ್ಯಕ್ತಿ ಇಷ್ಟೊಂದು ಸೊಳ್ಳೆ ಒಂದೇ ಕಡೆ ಸಿಕ್ಕಿದೆ ಇದರಿಂದಾಗಿ ಜಿಗಲೆಯಲ್ಲಿ ಡೆಂಘೀ ಹರಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.

ಸೊಳ್ಳೆಯನ್ನು ಆಸ್ಪತ್ರೆಗೆ ತಂದಿದ್ದು ಏಕೆ?

ಮನ್ಸೂರ್ ಅಲಿ ಶೇಖ್ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ಡಾ ಜುಲ್ಫಿಕರ್ ಅಲಿ ಎಂಬುವವರು ಕರ್ತವ್ಯದಲ್ಲಿ ಇದ್ದರು. ಈತ ಬರುವುದನ್ನು ನೋಡಿ ಈ ವ್ಯಕ್ತಿ ಚಿಕಿತ್ಸೆಗಾಗಿ ಬಂದಿದ್ದಾನೆಂದು ಭಾವಿಸಿದ್ದರು. ಆದರೆ ಚೀಲದಲ್ಲಿ ಸೊಳ್ಳೆ ನೋಡಿದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಬಳಿಕ ತಾನು ಚೀಲದಲ್ಲಿ ಇಷ್ಟೊಂದು ಸೊಳ್ಳೆಗಳನ್ನು ತರಲು ಕಾರಣ ಏನು ಎಂದು ಕೂಡ ತಿಳಿಸಿದ್ದಾನೆ. ಇನ್ನು ಈ ಬಗ್ಗೆ ಮಾತನಾಡಿದ ಮನ್ಸೂರ್ ಅಲಿ ಶೇಖ್, ನನ್ನನ್ನು ರಕ್ಷಿಸಿಕೊಳ್ಳಲು ಮತ್ತು ಸೊಳ್ಳೆ ಸಮಸ್ಯೆಯನ್ನು ನಿಭಾಯಿಸಲು, ನಾನು ಕೆಲವು ಸೊಳ್ಳೆಗಳನ್ನು ಪಾಲಿಥಿನ್ ಚೀಲದಲ್ಲಿ ಹಿಡಿದು ಆಸ್ಪತ್ರೆಗೆ ತಂದಿದ್ದೇನೆ. ಈ ಮೂಲಕ ವೈದ್ಯರೂ ಸೊಳ್ಳೆಗಳನ್ನೂ ಪರೀಕ್ಷಿಸಿ ನನಗೆ ಸೂಕ್ತ ಚಿಕಿತ್ಸೆ ನೀಡಬಹುದು ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಕ್ರಮಕೈಗೊಳ್ಳಲು ಅಧಿಕಾರಿಗಳಿಂದ ಸೂಚನೆ!

ಘಟನೆ ಕುರಿತು ಪ್ರತಿಕ್ರಿಯಿಸಿದ ಮಂಗಲಕೋಟೆ ಪಂಚಾಯತ್ ಸಮಿತಿಯ ಮೀನುಗಾರಿಕಾ ಅಧಿಕಾರಿ ಸೈಯದ್ ಬಸೀರ್, ಈ ವಿಷಯವನ್ನು ಬ್ಲಾಕ್ ಆರೋಗ್ಯಾಧಿಕಾರಿ (ಬಿಎಂಒಹೆಚ್) ಮತ್ತು ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಇನ್ನು ಸೊಳ್ಳೆ ಹಿಡಿದ ಪ್ರದೇಶದಲ್ಲಿ ಅವುಗಳ ನಿಯಂತ್ರಣಕ್ಕೆ ಸೊಳ್ಳೆ ನಿವಾರಕ ಮತ್ತು ಬ್ಲೀಚಿಂಗ್ ಪೌಡರ್ ವಿತರಣೆ ಸೇರಿದಂತೆ ಸೊಳ್ಳೆ ಸಮಸ್ಯೆ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯತ್ ಸಮಿತಿಯ ಮೀನುಗಾರಿಕಾ ಅಧಿಕಾರಿ ಸೈಯದ್ ಮೇಲಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

Shwetha M