ಕಲಾವಿದನ ಅದ್ಭುತ ಕೈಚಳವಿದು.. – ಬಾಲಕ ಬಾಲರಾಮನಾದ!

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೊಂಡಿದೆ. ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾನ ಕೃಷ್ಣ ಶಿಲೆಯ ಭವ್ಯ ಮೂರ್ತಿ ಎಲ್ಲರ ಕಣ್ಮನ ಸೆಳೆಯುತ್ತಿದೆ. ನಿತ್ಯ ಲಕ್ಷಾಂತರ ಮಂದಿ ಭಕ್ತರು ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಇದೀಗ ಇದೇ ಮೂರ್ತಿಯನ್ನು ಹೋಲುವಂತೆ ನಡೆದಾಡುವ ರಾಮ ಲಲ್ಲಾನನ್ನು ಬಂಗಾಳದ ಕಲಾವಿದ ದಂಪತಿಗಳು ತಮ್ಮ ಕೈಚಳಕದಿಂದ ಸೃಷ್ಟಿಸಿದ್ದಾರೆ. ಇದರ ಫೋಟೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಕಲಾವಿದ ಮನಸ್ಸು ಮಾಡಿದ್ರೆ ಕಲ್ಲನ್ನು ಕೂಡ ಸುಂದರ ಶಿಲೆಯನ್ನಾಗಿಸುವ ಶಕ್ತಿ ಆತನಿಗಿದೆ. ಇದಕ್ಕೆ ಸಾಕ್ಷಿ ಅಯೋಧ್ಯೆ ರಾಮಮಂದಿರದ ಮೂರ್ತಿ. ಇದೀಗ ಇಲ್ಲೊಬ್ಬ ಕಲಾವಿದ ತಮ್ಮ ಕೈಚಳದ ಮೂಲಕ ಬಾಲಕನಿಗೆ ಮೇಕಪ್ ಮಾಡಿ ಭಗವಾನ್ ರಾಮಲಲ್ಲಾ ಮೂರ್ತಿಯಂತೇ ಕಂಗೊಳಿಸುವಂತೆ ಮಾಡಿದ್ದಾರೆ. ಇದನ್ನು ಕಂಡಾಗ ಸಾಮ್ಯತೆ ಗೊತ್ತಾಗದಂತಿದೆ.
ಪಶ್ಚಿಮ ಬಂಗಾಳದಲ್ಲಿ ಅಸನ್ಸೋಲ್ನ ಅಶಿಶ್ ಕುಂದು ಎಂಬುವವರು ಬಾಲಕನಿಗೆ ಮೇಕಪ್ ಮಾಡಿದ್ದಾರೆ. ಇವರ ಪತ್ನಿ ರೂಬಿ ಸಹಾಯ ಪಡೆದುಕೊಂಡು 9 ವರ್ಷದ ಬಾಲಕ ಅಬೀರ್ನನ್ನು ಅಯೋಧ್ಯೆಯಲ್ಲಿ ಇರಿಸಲಾದ ಬಾಲ ರಾಮನ ಮೂರ್ತಿಯಂತೆ ಮೇಕಪ್ ಮೂಲಕ ಪರಿವರ್ತಿಸಿದ್ದಾರೆ. ಜನವರಿ 22 ರಾಮ ಮಂದಿರ ಪ್ರತಿಷ್ಠಾಪನೆ ಆದಾಗಿನಿಂದ ರಾಮಲಲ್ಲಾ ಹೋಲುವ ವಿಗ್ರಹವನ್ನು ರಚಿಸಬೇಕು ಎಂಬ ಮನದಾಸೆ ಇತ್ತಂತೆ. ಆದರೆ ಅನಿರೀಕ್ಷಿತ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ರಾಮಲಲ್ಲಾನಿಗೆ ಗೌರವಾರ್ಥವಾಗಿ ಏನಾದರು ಮಾಡಬೇಕು ಎಂದು ಅನ್ವೇಷಣೆಯಲ್ಲಿ ತೊಡಗಿಕೊಂಡರು. ಈ ವೇಳೆ ಅಶಿಶ್ ಕುಂದು ಬಾಲಕನನ್ನು ಬಳಸಿಕೊಂಡು ಮೇಕಪ್ ಮೂಲಕ ಆತನನ್ನು ರಾಮಲಲ್ಲಾ ಮೂರ್ತಿಯಂತೇ ಹೋಲುವಂತೆ ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾಲಕನನ್ನು ರಾಮಲಲ್ಲಾನನ್ನಾಗಿ ಮೇಕಪ್ ಮಾಡಿಸಿದ ಫೋಟೋ ಹರಿದಾಡುತ್ತಿದೆ. ಅನೇಕರು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.