ಬೆಲ್ಲದ ಚಹಾ.. ರುಚಿ ಆಹಾ.. – ನೀವೂ ಒಮ್ಮೆ ಟ್ರೈ ಮಾಡಿ.. ಏನಂತೀರಾ?

ಬೆಲ್ಲದ ಚಹಾ.. ರುಚಿ ಆಹಾ.. – ನೀವೂ ಒಮ್ಮೆ ಟ್ರೈ ಮಾಡಿ.. ಏನಂತೀರಾ?

ಹೆಚ್ಚಿನ ಜನರ ಫೇವರಿಟ್ ಡ್ರಿಂಕ್ ಅಂದ್ರೆ ಅದು ಚಹಾ. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಕುಡಿಲಿಲ್ಲಾ ಅಂತಾದ್ರೆ ದಿನಾನೇ ಮುಂದೆ ಹೋಗಲ್ಲ.. ನಿಮಗೂ ಕೂಡ ಟೀ ಇಷ್ಟ ಅಂತಾದ್ರೆ ನೀವು ಈ ವಿಚಾರ ತಿಳ್ಕೊಳ್ಲೇಬೇಕು.. ಟೀಗೆ ಸಕ್ಕರೆ ಬದಲು ಈ ವಸ್ತುನಾ ಹಾಕಿದ್ರೆ ಟೀಯ ಟೇಸ್ಟ್ ಜೊತೆಗೆ ಆರೋಗ್ಯ ಕೂಡ ವೃದ್ಧಿಯಾಗುತ್ತೆ.. ಅಷ್ಟಕ್ಕೂ ಆ ವಸ್ತು ಯಾವ್ದು? ಅದನ್ನ ಟೀಗೆ ಹಾಕಿದ್ರೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ಗೊತ್ತಾ?

ನಮ್ಮಲ್ಲಿ ಹೆಚ್ಚಿನವರು ಹಾಲಿನಲ್ಲಿ ಮಾಡಿದ ಚಹಾವನ್ನು ಕುಡಿಯುತ್ತಾರೆ. ಇನ್ನೊಂದಷ್ಟು ಮಂದಿ ಚಹಾ ಟೇಸ್ಟೀ ಆಗಿರಲು ಶುಂಟಿ, ಏಲಕ್ಕಿ ಮುಂತಾದವುಗಳನ್ನು ಹಾಕುತ್ತಾರೆ.. ಚಳಿಗಾಲ ಇರಲಿ, ಬೇಸಿಗೆ ಇರಲಿ, ಮಳೆಗಾಲ ಇರ್ಲಿ.. ಎಲ್ಲಾ ಕಾಲದಲ್ಲೂ ಜನರು ಚಹಾ ಕುಡಿಯೋದಕ್ಕೆ ಇಷ್ಟಪಡ್ತಾರೆ. ಆದರೆ ಹೆಚ್ಚು ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಅದರಲ್ಲೂ, ಚಹಾಕ್ಕೆ ಸಕ್ಕರೆ ಸೇರಿಸೋದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನೀವು ಚಹಾ ಪ್ರಿಯರಾಗಿದ್ದರೆ, ಸಕ್ಕರೆಯ ಬದಲು, ಚಹಾದಲ್ಲಿ ಬೆಲ್ಲವನ್ನು ಬಳಸಬಹುದು. ಆರೋಗ್ಯದ ದೃಷ್ಟಿಯಿಂದ ಬೆಲ್ಲದ ಚಹಾ ತುಂಬಾನೇ ಪ್ರಯೋಜನಕಾರಿ.  ಬೆಲ್ಲವು ಅನೇಕ ಪೋಷಕಾಂಶಗಳಿಂದ ಕೂಡಿದೆ. ಇದರಲ್ಲಿ ವಿಟಮಿನ್ ಗಳು, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮುಂತಾದವುಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ..

ಇನ್ನು ಬೆಲ್ಲವನ್ನು ಕಬ್ಬಿಣದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.  ಇದನ್ನು ಸೇವಿಸೋದರಿಂದ ರಕ್ತಹೀನತೆ ಸಮಸ್ಯೆ ಅನುಭವಿಸುವ ಸಾಧ್ಯತೆ ಕಡಿಮೆ. ಇದು ರಕ್ತಪರಿಚಲನೆ ಹೆಚ್ಚಿಸುತ್ತೆ. ಅಷ್ಟೇ ಅಲ್ಲದೇ ಬೆಲ್ಲದಲ್ಲಿ ಸಾಕಷ್ಟು ಪ್ರಮಾಣದ ಆಂಟಿಆಕ್ಸಿಡೆಂಟ್ಸ್ ಕಂಡುಬರುತ್ತವೆ, ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಲಿವರ್‌ನಿಂದ ವಿಷಕಾರಿ ವಸ್ತುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತೆ. ಇನ್ನು ಬೆಲ್ಲವು ನೈಸರ್ಗಿಕ ಸಿಹಿಕಾರಕ. ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಆಹಾರ ಪದಾರ್ಥ.. ಅಂದರೆ, ಅದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸೋದಿಲ್ಲ. ಇದು ನಿಧಾನವಾಗಿ ದೇಹದಲ್ಲಿ ಸಕ್ಕರೆಯನ್ನು ಬಿಡುಗಡೆ ಮಾಡುತ್ತದೆ. ಇದು ದಿನವಿಡೀ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ. ಇದರಿಂದ ನೀವು ದಿನವಿಡೀ ಎನರ್ಜಿಟಿಕ್ ಆಗಿರಲು ಸಹಾಯ ಮಾಡುತ್ತದೆ.

ಇನ್ನು ಬೆಲ್ಲ ಉಸಿರಾಟದ ಸಮಸ್ಯೆಗಳನ್ನು ದೂರವಿರಿಸುವ ಶಕ್ತಿಯನ್ನ ಹೊಂದಿದೆ. ಅಷ್ಟೇ ಅಲ್ಲದೇ ಬೆಲ್ಲವು ಶೀತ ಮತ್ತು ಕೆಮ್ಮಿನಂತಹ ಸೀಸನಲ್ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ. ಹೀಗಾಗಿ ನಿತ್ಯ ಬೆಲ್ಲದಿಂದ ಮಾಡಿದ ಚಹಾವನ್ನು ಕುಡಿಯೋದು ತುಂಬಾನೇ ಒಳ್ಳೆದು.

Shwetha M

Leave a Reply

Your email address will not be published. Required fields are marked *