ಕಾಲು ನೋವಿದೆ ಎಂದು ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನ ಇಡುತ್ತೀರಾ? – ಹಾಗಾದ್ರೆ ಈ ವಿಚಾರ ನಿಮಗೆ ಗೊತ್ತಿರಲಿ!

ಕಾಲು ನೋವಿದೆ ಎಂದು ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನ ಇಡುತ್ತೀರಾ? – ಹಾಗಾದ್ರೆ ಈ ವಿಚಾರ ನಿಮಗೆ ಗೊತ್ತಿರಲಿ!

ನಿತ್ಯ ಬಿಡುವಿಲ್ಲದ ಓಡಾಟದಿಂದ ಕೆಲವರಿಗೆ ಕಾಲು ನೋವು ಕಾಣಿಸಿಕೊಳ್ಳುತ್ತದೆ. ಕೆಲವರು ಇದಕ್ಕೆ  ನೋವಿನ ಮುಲಾಮು, ನೋವಿನ ಎಣ್ಣೆ ಹಚ್ಚುತ್ತಾರೆ. ಇನ್ನೂ ಕೆಲವರು ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಇಟ್ಟುಕೊಳ್ಳುತ್ತಾರೆ. ಆದ್ರೆ ಇದ್ರಿಂದ ನಿಜಕ್ಕೂ ನೋವು ಗುಣವಾಗುತ್ತಾ ಎಂದ ಪ್ರಶ್ನೆ ಅನೇಕರಲ್ಲಿದೆ.

ಇದನ್ನೂ ಓದಿ: ಮೂಳೆಯ ಆರೋಗ್ಯಕ್ಕೆ ಈ ತರಕಾರಿ ಬೆಸ್ಟ್!‌ – ಈ ಸೂಪರ್‌ ಫುಡ್‌ ಬಗ್ಗೆ ನಿಮಗೆ ಗೊತ್ತಾ?

ಇತ್ತೀಚೆಗೆ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಅನೇಕರಿದ್ದಾರೆ. ಕೆಲಸ ಮಾಡಿ ದಣಿದಾಗ ಕಾಲುಗಳಲ್ಲಿ ನೋವು, ಆಯಾಸ ಮತ್ತು ಭಾರವಾದ ಅನುಭವ ಉಂಟಾಗುವುದು ಸಾಮಾನ್ಯ. ಹೀಗಾಗಿ ಅನೇಕರು ಬಿಸಿ ಉಪ್ಪಿನ ಮೇಲೆ ನಿಲ್ಲುತ್ತಾರೆ. ಇನ್ನೂ ಕೆಲವರು ಉಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸುವುದು ಉತ್ತಮ ಎಂದು ಹೇಳುತ್ತಾರೆ. ತಜ್ಞರ ಪ್ರಕಾರ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಕೆಲವರಿಗೆ ಆರಾಮ ಮತ್ತು ವಿಶ್ರಾಂತಿಯ ಅನುಭವವಾಗಬಹುದು. ದಿನವಿಡೀ ನಿಂತು ಕೆಲಸ ಮಾಡುವುದರಿಂದ ಉಂಟಾದ ಆಯಾಸವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿಕೊಳ್ಳಲು ಇದು ಸಹಾಯ ಮಾಡಬಹುದು. ಆದರೆ ಈ ಪರಿಣಾಮ ಉಪ್ಪಿನಿಂದಲೇ ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಇದನ್ನು ಅನುಸರಿಸಿ ನೋಡಿ ಉಪಯೋಗವಾದರೆ ಮುಂದುವರೆಸಬಹುದು.

ಇನ್ನು ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ನೆನೆಸುವುದರಿಂದ ಉಷ್ಣತೆಯ ಪರಿಣಾಮವಾಗಿ ರಕ್ತನಾಳಗಳು ತಾತ್ಕಾಲಿಕವಾಗಿ ವಿಸ್ತರಿಸಬಹುದು. ಆದರೂ ಉಪ್ಪಿನ ಮೇಲೆ ನಿಲ್ಲುವುದರಿಂದ ಕಾಲುಗಳ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಪಾದಗಳ ನೋವು ಮತ್ತು ಊತ ಕಡಿಮೆಯಾಗುತ್ತದೆಯೇ ಎಂಬ ಪ್ರಶ್ನೆ ಹಲವರನ್ನ ಕಾಡುತ್ತದೆ. ಅಂದ್ಹಾಗೆ ಉಪ್ಪಿನ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಎಲ್ಲ ರೀತಿಯ ನೋವು ಅಥವಾ ಊತ ಕಡಿಮೆಯಾಗುವುದಿಲ್ಲ. ಕೀಲು ನೋವು, ಗಾಯ ಅಥವಾ ನಿರಂತರ ಊತಕ್ಕೆ ನಿರ್ದಿಷ್ಟ ಕಾರಣಗಳಿರಬಹುದು. ಇಂತಹ ಲಕ್ಷಣಗಳಿಗೆ ಉಪ್ಪಿನ ನೀರನ್ನು ಚಿಕಿತ್ಸೆಗೆ ಪರ್ಯಾಯವಾಗಿ ಬಳಸಬಾರದು. ಕೆಲವರಿಗೆ ಸಣ್ಣ ಪುಟ್ಟ ನೋವು ವಾಸಿಯಾಗಬಹುದು.

ಇನ್ನು ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸಿಕೊಳ್ಳುವುದು ಕೆಲವರಿಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡಬಹುದು. ಇದರಿಂದ ನಿದ್ರೆಗೆ ಸಿದ್ಧವಾಗಲು ಅನುಕೂಲವಾಗಬಹುದು. ಆದರೆ ಉಪ್ಪಿನ ನೀರು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ.

ಪಾದಗಳನ್ನು ನೆನೆಸುವ ಸರಿಯಾದ ವಿಧಾನ

ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು, ಬಯಸಿದರೆ ಸ್ವಲ್ಪ ಉಪ್ಪು ಸೇರಿಸಿ, ಆರಾಮದಾಯಕವಾಗಿದ್ದರೆ 10–15 ನಿಮಿಷಗಳ ಕಾಲ ಪಾದಗಳನ್ನು ನೆನೆಸಬಹುದು. ನೀರು ತುಂಬಾ ಬಿಸಿಯಾಗಿರಬಾರದು. ನಂತರ ಪಾದಗಳನ್ನು, ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಚೆನ್ನಾಗಿ ಒರೆಸಿ ಒಣಗಿಸಬೇಕು. ಮಧುಮೇಹ, ಪಾದಗಳಲ್ಲಿ ಸಂವೇದನೆ ಕಡಿಮೆಯಾಗಿರುವ ಸಮಸ್ಯೆ ಅಥವಾ ಗಾಯಗಳಿದ್ದರೆ ಈ ವಿಧಾನ ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.

Shwetha M

Leave a Reply

Your email address will not be published. Required fields are marked *