ಬೆನ್ ಸ್ಟೋಕ್ಸ್ ಜೊತೆ ಮೂವರು ಡ್ರಾಪ್ -5ನೇ ಪಂದ್ಯದಲ್ಲಿ ಭಾರತಕ್ಕಿದೆ ದೊಡ್ಡ ಅಡ್ವಾಂಟೇಜ್

ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಗುರುವಾರ ಲಂಡನ್ನ ಓವಲ್ನಲ್ಲಿ ನಡೆಯಲಿದೆ. ಈಗಾಗಲೇ ಸರಣಿಯು 2-1 ಅಂತರದಿಂದ ಇಂಗ್ಲೆಂಡ್ ಮುನ್ನಡೆ ಪಡೆದಿದೆ. ಕೊನೆಯ ಪಂದ್ಯದಲ್ಲಿ ಗೆದ್ರೆ ಸರಣಿ ಸಮಬಲ ಆಗುತ್ತೆ. ಅಥವಾ ಪಂದ್ಯ ಡ್ರಾ ಆದ್ರೂ ಆಂಗ್ಲರೇ ಸಿರೀಸ್ ಗೆಲ್ತಾರೆ. ಸೋ ಈ ಹೈವೋಲ್ಟೇಜ್ ಮ್ಯಾಚ್ನಲ್ಲೇ ಇಂಗ್ಲೆಂಡ್ ತಂಡ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ : ಭಾರತ ಗೆದ್ರೂ ಟ್ರೋಫಿ ಇಂಗ್ಲೆಂಡ್ ಪಾಲು – ಇಕ್ಕಟ್ಟಿನಲ್ಲಿ ಟೀಂ ಇಂಡಿಯಾ
ನಾಲ್ಕನೇ ಪಂದ್ಯದಲ್ಲಿ ಗೆದ್ದೇ ಬಿಟ್ವಿ ಅನ್ನೋ ಕಾನ್ಫಿಡೆನ್ಸ್ನಲ್ಲಿದ್ದ ಆಂಗ್ಲರು ಕೊನೆಗೆ ಮ್ಯಾಚ್ ಡ್ರಾ ಆಗಿದ್ರಿಂದ ಸಿಕ್ಕಾಪಟ್ಟೆ ಹರ್ಟ್ ಆಗಿದ್ರು. ಹೋಗ್ಲಿ ಇನ್ನೂ ಒಂದು ಚಾನ್ಸ್ ಇದೆ ಕೊನೇ ಮ್ಯಾಚ್ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋಣ ಅನ್ಕೊಂಡ್ರೆ ಸ್ಟಾರ್ ಆಟಗಾರರೇ ತಂಡದಿಂದ ಹೊರ ಬಿದ್ದಿದ್ದಾರೆ. ಕ್ಯಾಪ್ಟನ್ ಆಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಲಿಡ್ ಫಾರ್ಮ್ ನಲ್ಲಿದ್ದ ಬೆನ್ ಸ್ಟೋಕ್ಸ್ ಭುಜದ ಗಾಯಕ್ಕೆ ತುತ್ತಾಗಿದ್ದು, ಪಂದ್ಯದಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ದೊಡ್ಡ ಸೆಟ್ ಬ್ಯಾಕ್ ಆಗಲಿದೆ. ಇಂಗ್ಲೆಂಡ್ ತಂಡ ಬುಧವಾರವೇ ಪ್ಲೇಯಿಂಗ್ 11 ಘೋಷಣೆ ಮಾಡಿದ್ದು ಅದರಲ್ಲಿ ಸ್ಟೋಕ್ಸ್ ಸ್ಥಾನ ಪಡೆದಿಲ್ಲ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಭುಜದ ನೋವಿನಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು, ಭಾರತದ ಎರಡನೇ ಇನಿಂಗ್ಸ್ ವೇಳೆ ಬೌಲಿಂಗ್ ಮಾಡಿರಲಿಲ್ಲ. ಇನ್ನು ಸ್ಟೋಕ್ಸ್ ಕಳೆದ ನಾಲ್ಕು ಪಂದ್ಯಗಳಿಂದ 17 ವಿಕೆಟ್ಸ್ ಬೇಟೆಯಾಡಿದ್ರೆ ಬ್ಯಾಟಿಂಗ್ ನಲ್ಲಿ ಶತಕ ಸೇರಿದಂತೆ 304 ರನ್ಸ್ ಸ್ಕೋರ್ ಮಾಡಿದ್ದಾರೆ.
ಹಾಗಂತ ಇಲ್ಲಿ ಬೆನ್ ಸ್ಟೋಕ್ಸ್ ಮಾತ್ರವೇ ಪಂದ್ಯದಿಂದ ಹೊರಬಿದ್ದಿಲ್ಲ. ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿರೋ ಈ ಮ್ಯಾಚ್ ನಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಸ್ಟೋಕ್ಸ್ ಜೊತೆಗೆ ಸ್ಪಿನ್ನರ್ ಲಿಯಾಮ್ ಡಾಸನ್, ವೇಗಿಗಳಾದ ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸೆ ಅವರನ್ನು ಸಹ ತಂಡದಿಂದ ಕೈಬಿಡಲಾಗಿದೆ. ಇವರ ಜಾಗಕ್ಕೆ ಜಾಕೋಬ್ ಬೆಥೆಲ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್ ಮತ್ತು ವೇಗಿ ಜೋಶ್ ಟಂಗ್ ಅವರಿಗೆ ಸ್ಥಾನ ನೀಡಲಾಗಿದೆ. ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಉಪನಾಯಕ ಓಲಿ ಪೋಪ್ ಹಂಗಾಮಿ ನಾಯಕರಾಗಿ ಪಂದ್ಯವನ್ನು ಮುನ್ನಡೆಸಲಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಜೋಶ್ ಟಂಗ್ ಕೊನೆಯ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹಾಗೇ ರೆಸ್ಟ್ ನೀಡೋ ಸಲುವಾಗಿ ವೇಗಿ ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸೆಯನ್ನ ಕೈಬಿಡಲಾಗಿದೆ.
ಇಂಗ್ಲೆಂಡ್ ಬೌಲರ್ಸ್ ಇಂಜುರಿಗೆ ಕಾರಣನೂ ಇದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 157.1 ಓವರ್‌ಗಳ ಕಾಲ ಫೀಲ್ಡಿಂಗ್‌ನಲ್ಲಿದ್ದರು. ಇಂಗ್ಲೆಂಡ್ ತಂಡ 257.1 ಓವರ್‌ಗಳವರೆಗೂ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿತ್ತು. ಬೌಲಿಂಗ್ ಮಾಡಿ ಮಾಡಿ ಇಂಜುರಿಗೊಂಡಿದ್ದಾರೆ. ಅಲ್ದೇ ನಾಲ್ಕನೇ ಪಂದ್ಯದಿಂದ ಐದನೇ ಪಂದ್ಯಕ್ಕೆ ಕೇವಲ ನಾಲ್ಕು ದಿನಗಳ ಬ್ರೇಕ್ ಇದ್ದಿದ್ರಿಂದ ಅನಿವಾರ್ಯವಾಗಿ ನಾಲ್ವರು ಆಟಗಾರರನ್ನ ಹೊರಗಿಡಲಾಗಿದೆ. ಸದ್ಯ ಸರಣಿಯಲ್ಲಿ ಸೆಟ್ ಆಗಿದ್ದ ಇಂಗ್ಲೆಂಡ್ ನ ನಾಲ್ವರು ಆಟಗಾರರು ಐದನೇ ಪಂದ್ಯದಿಂದ ಹೊರಬಿದ್ದಿರೋದು ಟೀಂ ಇಂಡಿಯಾಗೆ ಅಡ್ವಾಂಟೇಜ್ ಆಗಿದೆ. ಬಿಗ್ ಪ್ಲೇಯರ್ಸ್ ಅಲಭ್ಯತೆಯಲ್ಲಿ ಉಳಿದವರು ಪರ್ಫಾಮ್ ಮಾಡ್ಬೇಕಾಗುತ್ತೆ. ಈಗಾಗ್ಲೇ ಸರಣಿ ಗೆಲ್ಲೋ ಚಾನ್ಸ್ ಕಳ್ಕೊಂಡಿರೋ ಟೀಂ ಇಂಡಿಯಾಗೆ ಅಟ್ಲೀಸ್ಟ್ ಡ್ರಾ ಮಾಡಿಕೊಳ್ಳೋಕೆ ಒಂದು ಚಾನ್ಸ್ ಇದೆ. ಕೊನೇ ಪಂದ್ಯವನ್ನ ಶತಾಯ ಗತಾಯ ಗೆದ್ರಷ್ಟೇ ಡ್ರಾನಲ್ಲಿ ಕೊನೆಗೊಳಿಸಬಹುದು.

ನೋಡಿರಿ

