ಸೂರ್ಯವಂಶಿ ವಯಸ್ಸು 15 ಅಲ್ಲ 22 – RO-KO ಅಲ್ಲ KL ಟಫ್ ಬ್ಯಾಟ್ಸಮನ್
ರೋಹಿತ್ ದಾಖಲೆ ಮೇಲೆ ಸಂಜು ಕಣ್ಣು

ಸೂರ್ಯವಂಶಿ ವಯಸ್ಸು 15 ಅಲ್ಲ 22 –  RO-KO ಅಲ್ಲ KL ಟಫ್ ಬ್ಯಾಟ್ಸಮನ್ರೋಹಿತ್ ದಾಖಲೆ ಮೇಲೆ ಸಂಜು ಕಣ್ಣು

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಏಕದಿನ ವಿಶ್ವಕಪ್​ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬೇಕಾ? ಬೇಡ್ವಾ? ಈಗಲೇ ಹೇಳಿ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್‌ ಸ್ಪಷ್ಟನೆ ನೀಡಿ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಆಗ್ರಹಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂದಿನ 2027ರ ಏಕದಿನ ವಿಶ್ವಕಪ್‌ಗೆ ಬೇಕು ಎಂದಾದರೆ, ಈಗಲೇ ನಿರ್ಧಾರ ಮಾಡಿ. ಮುಂದಿನ ಒಂದು ವರ್ಷ ಅವರಲ್ಲಿ ಸಂಪೂರ್ಣ ಆತ್ಮವಿಶ್ವಾಸ ತುಂಬಿ ಎಂದಿದ್ದಾರೆ.

ಇದನ್ನೂ ಓದಿ: ENGನಲ್ಲಿ ವೈಭವ್ ಗೆ SEPARATE ರೂಲ್ಸ್ – ಟೀಂ ಇಂಡಿಯಾ ಡ್ರೆಸ್ಸಿಂಗ್ ಕೋಣೆಗಿಲ್ಲ ಎಂಟ್ರಿ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಇಂದು ನಡೆಯಲಿದ್ದು, ಇದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಭಾರತ ತಂಡವು ಮೂರು ಪಂದ್ಯಗಳಿಂದ 2 ಗೆಲುವುಗಳೊಂದಿಗೆ ಗ್ರೂಪ್ ಎ ನಲ್ಲಿ 4 ಅಂಕಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ತಂಡದ ನೆಟ್ ರನ್ ರೇಟ್ 2.511 ಆಗಿದೆ. ಹೀಗಾಗಿ ಸೆಮಿಫೈನಲ್‌ ರೇಸ್​ನಲ್ಲಿ ಟೀಂ ಇಂಡಿಯಾ ಜೀವಂತವಾಗಿರಬೇಕೆಂದರೆ ಉಳಿದಿರುವ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಭಾರತ ತಂಡ ಮೊದಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದು ಇಂದಿಗೆ 43 ವರ್ಷವಾಗಿದೆ. 1983ರ ಜೂನ್ 25 ರಂದು ವಿಶ್ವವೇ ಬೆರಗಾಗುವಂತೆ ಜಗತ್ತಿನ ಬಲಿಷ್ಠ ತಂಡವಾಗಿದ್ದ ವೆಸ್ಟ್ ಇಂಡೀಸ್ ಅನ್ನು ಮಣಿಸಿದ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಜಾದು ನಡೆದು ಇಂದಿಗೆ 43 ವರ್ಷ ಕಳೆದಿದೆ.

ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿಯಲು ಸಂಜು ಸ್ಯಾಮ್ಸನ್‌ಗೆ ಅವಕಾಶವಿದೆ. ಭಾರತ ಹಾಗೂ ಐರ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ. ಸಂಜು ಸ್ಯಾಮ್ಸನ್ ಐರ್ಲೆಂಡ್ ವಿರುದ್ಧ ಆಡಿರುವ ಮೂರು ಟಿ20 ಪಂದ್ಯಗಳಲ್ಲಿ 118 ರನ್ ಗಳಿಸಿದ್ದಾರೆ. ಹೀಗಾಗಿ ಸಂಜು ಈ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೆ, ರೋಹಿತ್ ಅವರ 201 ರನ್‌ಗಳ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

ಭಾರತೀಯ ತಂಡದ ಬೌಲರ್ ಆಕಾಶ್ ದೀಪ್  ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೆಹ್ರಿಯ ಮಾಣಿಕ್‌ಪುರದ ಮೂಲದ ಅಕ್ಷಿತಾ ರಾಜ್ ಅವರನ್ನು ಆಕಾಶ್ ಮದುವೆಯಾಗಿದ್ದಾರೆ.  ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ  ಭೋಜ್‌ಪುರಿ ತಾರೆ ಪವನ್ ಸಿಂಗ್ ಮತ್ತು ಕ್ರಿಕೆಟಿಗ ಮುಖೇಶ್ ಕುಮಾರ್ ಸೇರಿದಂತೆ ಗಣ್ಯ ವ್ಯಕ್ತಿಗಳು  ಭಾಗಿಯಾಗಿದ್ರು.

ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸುತ್ತಿರುವಾಗ, ಅವರ ಕಿರಿಯ ಸಹೋದರ ಆಶಿರ್ವಾದ್‌ ಸೂರ್ಯವಂಶಿ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಸ್ಥಳೀಯ ತಂಡಕ್ಕಾಗಿ ಆಡುತ್ತಿರೋ ಆಶೀರ್ವಾದ್ 119 ಎಸೆತಗಳಲ್ಲಿ 168 ರನ್ ಗಳಿಸಿದರು.   10 ವರ್ಷದ ಆಶೀರ್ವಾದ್ 19 ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿ 168 ರನ್‌ಗಳಿಸಿದ್ದಾರೆ.

ವೈಭವ್ ಸೂರ್ಯವಂಶಿಗೆ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ತನ್ವೀರ್ ಅಹ್ಮದ್ ಸವಾಲು ಹಾಕಿದ್ದು, ಇದು ಈಗ ಸಿಕ್ಕಪಟ್ಟೇ ವೈರಲ್ ಆಗಿದೆ. ಇಂಗ್ಲೆಂಡ್​ನಲ್ಲಿ ವೈಭವ್ ಸೂರ್ಯವಂಶಿ ಒಂದು ಶತಕ ಬಾರಿಸಲಿ ನೋಡೋಣ. ಆತ ಸೆಂಚುರಿ ಸಿಡಿಸಿದರೆ ನಾನು ಲಾಹೋರ್​ ಬೀದಿಯಲ್ಲಿ ಬೆತ್ತಲಾಗಿ ಓಡಾಡುವೆ ಎಂದು ತನ್ವೀರ್ ಅಹ್ಮದ್ ಘೋಷಿಸಿದ್ದಾರೆ.  ಅಷ್ಟೇ ಅಲ್ಲದೇ ವೈಭವ್ ಸೂರ್ಯವಂಶಿಗೆ 15 ವರ್ಷ ಎನ್ನುವುದು ಶುದ್ಧ ಸುಳ್ಳು. ನನ್ನ ಪ್ರಕಾರ ಆತನಿಗೆ ಕನಿಷ್ಠ 22 ವರ್ಷ ವಯಸ್ಸಾಗಿದೆ ಅಂತ ಹೇಳಿದ್ದಾನೆ.

ಮಾರಕ ವೇಗಿ ಜ್ರೋಫ್ರಾ ಆರ್ಚರ್ ತಾವು ಎದುರಿಸಿದ ಅತ್ಯಂತ ಕಠಿಣ ಬ್ಯಾಟರ್ ಯಾರೆಂದು ಹೇಳಿದ್ದಾರೆ.  ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅಲ್ಲ. ನನಗೆ, ಕೆಎಲ್ ರಾಹುಲ್ ವಿರುದ್ಧ ಬೌಲಿಂಗ್ ಮಾಡುವುದು ಅತ್ಯಂತ ಕಷ್ಟಕರವಾದ ಆಟಗಾರ. ಅವರು ಎಲ್ಲಾ ರೀತಿಯ ಬೌಲಿಂಗ್‌ಗೆ ತಮ್ಮದೇ ಆದ ಶಾಟ್‌ಗಳನ್ನು ಹೊಂದಿದ್ದಾರೆ. ಅವರು ಬಹಳ ಕಡಿಮೆ ಸಮಯದಲ್ಲಿ ಪರಿಸ್ಥಿತಿಗಳಿಗೆ ಹೊಂದಿಕೊಳ್ತಾರೆ ಎಂದು  ಆರ್ಚರ್ ಹೇಳಿದ್ದಾರೆ.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ನಾಯಕನಾಗಿ ಕಣಕ್ಕಿಳಿಯುತ್ತಿರುವ ಫಾಫ್ ಡುಪ್ಲೆಸಿಸ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಪಿನ್ ಅಲೆನ್  ಹೊಡೆದ ಬಾಲ್‌ನ್ನ ಫಾಫ್ ಡುಪ್ಲೆಸಿಸ್ ಗಾಳಿಯಲ್ಲಿ ಸಂಪೂರ್ಣವಾಗಿ ತೇಲುತ್ತಾ, ಕೇವಲ ಒಂದೇ ಕೈಯಿಂದ ಅವರು ಹಿಡಿದ ಡೈವಿಂಗ್ ಕ್ಯಾಚ್ ವಿಡಿಯೋ ಇದೀಗ  ಸಖತ್ ವೈರಲ್ ಆಗ್ತಿದೆ.

ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ. ಜೂನ್ 8 ರಂದು ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಮುಗಿದ ಬಳಿಕ ಬೆನ್ ಸ್ಟೋಕ್ಸ್ ಮತ್ತು ಬೌಲರ್ ಗಸ್ ಅಟ್ಕಿನ್ಸನ್ ಲಂಡನ್‌ನ ನೈಟ್‌ಕ್ಲಬ್‌ ಭೇಟಿ ನೀಡಿದ್ರು. ಈ ಕಾರಣಕ್ಕೆ 2ನೇ ಟೆಸ್ಟ್‌ ಪಂದ್ಯದಿಂದ ಸ್ಟೋಕ್ಸ್‌ನ ಹೊರಗಿಡಲಾಗಿತ್ತು. ಈಗ ಮತ್ತೆ  ತಂಡಕ್ಕೆ ವಾಪಸ್ ಆಗಿದ್ದು,ಸ್ಟೋಕ್ಸ್ ತಂಡದ  ಸದಸ್ಯರಲ್ಲಿ ಕ್ಷಮೆ ಕೇಳಿದ್ದಾರೆ.

Kishor KV