ಬೇಲೂರು ವರ್ತಕನ ಆತ್ಮಹ*ತ್ಯೆ ಕೇಸ್‌ಗೆ ಟ್ವಿಸ್ಟ್! – ಶಾಸಕ ಎಚ್.ಕೆ. ಸುರೇಶ್ ವಿರುದ್ಧ ಎಫ್‌ಐಆರ್!

ಬೇಲೂರು ವರ್ತಕನ ಆತ್ಮಹ*ತ್ಯೆ ಕೇಸ್‌ಗೆ ಟ್ವಿಸ್ಟ್! – ಶಾಸಕ ಎಚ್.ಕೆ. ಸುರೇಶ್ ವಿರುದ್ಧ ಎಫ್‌ಐಆರ್!

ಪುರಸಭೆಯ ಅಂಗಡಿ ಮಳಿಗೆಯ ಬಾಡಿಗೆ ವಿಚಾರವಾಗಿ ಅಧಿಕಾರಿಗಳಿಂದ ಕಿರುಕುಳವಾಗಿದೆ ಎಂದು ಆರೋಪಿಸಿ, ಡೆತ್‌ನೋಟ್ ಬರೆದಿಟ್ಟು ಬೇಲೂರಿನ ವರ್ತಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಈಗ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಮೃತರನ್ನು ಬೇಲೂರಿನ ವರ್ತಕ ನಾಗೇಶ್ ಎ.ಆರ್. ಎಂದು ಗುರುತಿಸಲಾಗಿದೆ. ಪುರಸಭೆಯ ಅಂಗಡಿ ಮಳಿಗೆಯ ಬಾಡಿಗೆ ವಿಚಾರದಲ್ಲಿ ಅಧಿಕಾರಿಗಳಿಂದ ಕಿರುಕುಳ ಅನುಭವಿಸಿದ್ದಾಗಿ ಅವರು ಆರೋಪಿಸಿ ಡೆತ್‌ನೋಟ್ ಬರೆದಿಟ್ಟಿದ್ದರು ಎನ್ನಲಾಗಿದೆ. ಈ ಘಟನೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಬೇಲೂರು ಶಾಸಕ ಎಚ್.ಕೆ. ಸುರೇಶ್ ಸೇರಿದಂತೆ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶಾಸಕ ಎಚ್.ಕೆ. ಸುರೇಶ್ ಅವರನ್ನು ಏಳನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ದೇವನಹಳ್ಳಿ ಬಳಿ ಲಾರಿಗೆ ರೇಂಜ್ ರೋವರ್ ಕಾರು ಡಿಕ್ಕಿ – ಬಿಜೆಪಿ ಮುಖಂಡ ಶಿವಕುಮಾರ್ ಸಾ*ವು!

2026ರ ಜುಲೈ 20ರಂದು ಮಳಿಗೆಯನ್ನು ಖಾಲಿ ಮಾಡುವಂತೆ ಸೂಚಿಸಿ, ಬೇಲೂರು ಪುರಸಭೆಯ ಆರ್‌ಐ, ಆರ್‌ಒ, ಆರೋಗ್ಯ ನಿರೀಕ್ಷಕ ಹಾಗೂ ಇತರ ಸಿಬ್ಬಂದಿ ಮಳಿಗೆಗೆ ಬೀಗ ಹಾಕಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಮಳಿಗೆ ತೆರೆಯಲು ಅವಕಾಶ ನೀಡುವಂತೆ ನಾಗೇಶ್ ಅಧಿಕಾರಿಗಳನ್ನು ಹಲವು ಬಾರಿ ಭೇಟಿಯಾಗಿ ಮನವಿ ಮಾಡಿದ್ದರು. ಈ ವೇಳೆ ಶಾಸಕರ ಬಳಿ ತೆರಳಿ ಮಾತನಾಡುವಂತೆ ಅಧಿಕಾರಿಗಳು ಸೂಚಿಸಿದ್ದರು. ಅಲ್ಲದೆ, ಒಂದು ಲಕ್ಷ ರೂಪಾಯಿ ನೀಡಿದರೆ ಮಾತ್ರ ಮಳಿಗೆಯ ಕೀ ನೀಡುವುದಾಗಿ ಅಧಿಕಾರಿಗಳು ಹೇಳಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಮಳಿಗೆಗೆ ಬೀಗ ಹಾಕಿದ್ದರಿಂದ ನಾಗೇಶ್ ತೀವ್ರವಾಗಿ ಮನನೊಂದಿದ್ದರು ಎಂದು ಅವರ ಕುಟುಂಬದವರು ದೂರಿದ್ದಾರೆ.

Kishor KV

One thought on “ಬೇಲೂರು ವರ್ತಕನ ಆತ್ಮಹ*ತ್ಯೆ ಕೇಸ್‌ಗೆ ಟ್ವಿಸ್ಟ್! – ಶಾಸಕ ಎಚ್.ಕೆ. ಸುರೇಶ್ ವಿರುದ್ಧ ಎಫ್‌ಐಆರ್!”

Leave a Reply

Your email address will not be published. Required fields are marked *