ಮದುವೆಗೆ ಒಪ್ಪದ ಪ್ರೇಯಸಿ – ಜೀವ ತೆಗೆದ ಕ್ರಿಮಿನಲ್ ಪಾಗಲ್ ಪ್ರೇಮಿ

ಮದುವೆಗೆ ಒಪ್ಪದ ಪ್ರೇಯಸಿ – ಜೀವ ತೆಗೆದ ಕ್ರಿಮಿನಲ್ ಪಾಗಲ್ ಪ್ರೇಮಿ

ಪ್ರೇಯಸಿ ಮದುವೆಗೆ ಒಪ್ಪಿಲ್ಲವೆಂದು ಪ್ರಿಯಕರ ಆಕೆ ಕುತ್ತಿಗೆಗೆ ಚಾಕು ಇರಿದು ಕೊಂದಿದ್ದಾನೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಂಜಲಿಕೊಲೆಯಾದ ದುರ್ದೈವಿ, ಆರೋಪಿ ರಾಜೀವ್‌ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಹಿಂದೆ ಕೆಲಸ ಮಾಡುತ್ತಿದ್ದ ಜಾಗದಲ್ಲಿ ಪರಿಚಯವಾಗಿ. ಮೂರ್ನಾಲ್ಕು ವರ್ಷಗಳಿಂದ ಅಂಜಲಿ ಹಾಗೂ ರಾಜೀವ್ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇರುವುದರಿಂದ ಅಂಜಲಿ ಕುಟುಂಬಸ್ಥರು ಈ ಮದುವೆಗೆ ಒಪ್ಪಿರಲಿಲ್ಲ. ಹಲವು ಬಾರಿ ಆಕೆಯ ಪೋಷಕರನ್ನು ಒಪ್ಪಿಸಲು ರಾಜೀವ್ ಸರ್ಕಸ್ ಮಾಡಿದ್ದಾನೆ.

ಇದನ್ನೂ ಓದಿ: ಗೆಳೆಯ ವೈಶಾಖ್ ಸಾವಿನ ಬಳಿಕ ಕೃಷಿ ತಾಪಂಡ ಮೊದಲ ಪ್ರತಿಕ್ರಿಯೆ – ನಾನು ಸಹಜ ಸ್ಥಿತಿಗೆ ಬರಲು ಸಾಧ್ಯವೇ ಎಂದು ಕೇಳಿದ ನಟಿ

ಆದ್ರೆ ಅಂಜಲಿ ಕೂಡ ಪೋಷಕರ ಒತ್ತಾಯಕ್ಕೆ ಮಣಿದು ರಾಜೀವ್‌ನನ್ನು ಅವಾಯ್ಡ್ ಮಾಡಲು ಶುರು ಮಾಡಿದ್ಲು. ನಿನ್ನೆ ಸಂಜೆ ರಾಜೀವ್ ಹೊರಗೆ ಊಟ ಮಾಡಲು ಬಾ ಎಂದು ಅಂಜಲಿಯನ್ನು ಕರೆದುಕೊಂಡು ಹೋಗಿದ್ದಾನೆ. ಆಗ ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಕೋಪಗೊಂಡ ರಾಜೀವ್ ಚಾಕುವಿನಿಂದ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣವೇ, ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂಜಲಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.

Kishor KV

Leave a Reply

Your email address will not be published. Required fields are marked *