ರೀಲ್ಸ್ ತುಂಬಾ ರಾಹುಲ್ಲನದ್ದೇ ಹವಾ – ಬೆಳ್ಳುಳ್ಳಿ ಕಬಾಬ್ ಕ್ರೇಜ್ ಹೇಗಿದೆ?

ರೀಲ್ಸ್ ತುಂಬಾ ರಾಹುಲ್ಲನದ್ದೇ ಹವಾ – ಬೆಳ್ಳುಳ್ಳಿ ಕಬಾಬ್ ಕ್ರೇಜ್ ಹೇಗಿದೆ?

ಸೋಶಿಯಲ್ ಮೀಡಿಯಾ ಒಂದೊಳ್ಳೆ ಫಾರ್ಟ್ ಫಾರ್ಮ್. ಆದ್ರೆ ಅದನ್ನ ಹೇಗೆ ಬಳಸಿಕೊಳ್ತಾರೆ ಅನ್ನೋದು ಅವ್ರವ್ರಿಗೆ ಬಿಟ್ಟದ್ದು. ಕೆಲವು ಸಲ ಒಳ್ಳೆ ವಿಚಾರವಾಗಿ ವೈರಲ್ ಆಗ್ತಾರೆ ಇನ್ನೂ ಕೆಲವು ಸಲ ನೆಗೆಟಿವ್ ಆಗಿ ಟ್ರೋಲ್ ಆಗ್ತಾರೆ. ಇದೀಗ ಬೆಳ್ಳುಳ್ಳಿ ಕಬಾಬ್ ಕೂಡ ಅಂಥದ್ದೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ರೀಲ್ಸ್ ತುಂಬೆಲ್ಲಾ ಚಂದ್ರು ಹಾಗೂ ರಾಹುಲ್ಲನ ಡೈಲಾಗ್​ಗಳೇ ಸದ್ದು ಮಾಡ್ತಿವೆ. ಅಷ್ಟಕ್ಕೂ ಈ ರಾಹುಲ್ಲಾ ಯಾರು..? ಹೋಟೆಲ್ ಮಾಲೀಕ ಚಂದ್ರು ಹಿನ್ನೆಲೆ ಏನು..? ಬೆಳ್ಳುಳ್ಳಿ ಕಬಾಬ್ ಹವಾ ಕ್ರಿಯೇಟ್ ಆಗಿದ್ದೇಗೆ..? ಯಾರೆಲ್ಲಾ ರಾಹುಲ್ಲನ ಮೆಚ್ಚಿಕೊಂಡಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ – ಐಪಿಎಲ್‌ನಿಂದಲೂ ಸ್ಟಾರ್ ಬೌಲರ್ ಶಮಿ ಔಟ್?

ಬೆಳ್ಳುಳ್ಳಿ ಕೇಜಿಗೆ 400 ರಿಂದ 500 ರೂಪಾಯಿ ಇದೆ. ಕಾಲು ಕೆಜಿ ಖರೀದಿ ಮಾಡೋಕು ಜನ ಹಿಂದೆ ಮುಂದೆ ನೋಡ್ತಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್ ಸುನಾಮಿ ಎಬ್ಬಿಸಿದೆ. ಚಂದ್ರು ಹಾಗೂ ರಾಹುಲ್ಲನಿಂದಾಗಿ ಬೆಳ್ಳುಳ್ಳಿ ಕಬಾಬ್ ಮಾಡೋರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲವ್ರು ಕಬಾಬ್ ಮಾಡ್ಕೊಂಡು ಟೇಸ್ಟ್ ಮಾಡ್ತಿದ್ರೆ ಇನ್ನೂ ಕೆಲವ್ರು ಚಂದ್ರು ಡೈಲಾಗ್​ಗಳಿಗೆ ರೀಲ್ಸ್ ಮಾಡ್ತಿದ್ದಾರೆ. ಅದ್ರಲ್ಲೂ ಕರಿಮಣಿ ಮಾಲೀಕ ಮತ್ತು ರಾಹುಲ್ಲಾ ಜೊತೆಯಾದ ಮೇಲಂತೂ ಅದ್ರ ಕ್ರೇಜ್ ಬೇರೆಯದ್ದೇ ಲೆವೆಲ್​ಗೆ ಹೋಗಿದೆ. ಉಪ್ಪಿ ಹಾಡಿಗೆ ರಾಹುಲ್ಲಾನ ತಂದು ಬಿಟ್ಟಿದ್ದೇ ಇದೇ ವಿಕಿಪೀಡಿಯಾ ಗ್ಯಾಂಗ್.. ಕರಿಮಣಿ ಮಾಲೀಕ ರಾಹುಲ್ಲಾ ರಾಹುಲ್ಲಾ ಅಂತಾ ಚಂದ್ರು ಜೊತೆಗೂಡಿಯೇ ರೀಲ್ಸ್ ಮಾಡಿದ್ದಾರೆ.

ಕರಿಮಣಿ ಮಾಲೀಕ ಮತ್ತು ರಾಹುಲ್ಲಾ ಸೇರಿದ ಮೇಲೆ ಈ ಹಾಡಿನ ಹಾವಳಿ ಮತ್ತಷ್ಟು ಹೆಚ್ಚಾಗಿದೆ. ಚಂದ್ರು ಅವ್ರ ರಾಹುಲ್ಲಾ ರುಬ್ಬಿಕೊಡಪ್ಪ, ಚಟಪಟ ಅನ್ನೋ ಮಾತುಗಳೂ ಸಹ ವೈರಲ್ ಆಗ್ತಿವೆ. ನಮ್ಮ ಬೆಂಗಳೂರು ಬುಲ್ಸ್ ತಂಡದ ಆಟಗಾರರು ಕೂಡ ಬೆಳ್ಳುಳ್ಳಿ ಕಬಾಬ್ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಬೆಂಗಳೂರು ತಂಡವೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿತ್ತು.

ಅಲ್ದೇ ಸಾಕಷ್ಟು ಮಂದಿ ಈ ವೈರಲ್ ವಿಡಿಯೋ ಬಳಿಕವೇ ಬೆಳ್ಳುಳ್ಳಿ ಕಬಾಬ್ ಮನೆಗಳಲ್ಲಿ ಟ್ರೈ ಮಾಡ್ತಿದ್ದಾರೆ. ರೇಟ್ ಜಾಸ್ತಿ ಇದ್ರೂ ಬೆಳ್ಳುಳ್ಳಿ ಖರೀದಿಸಿ ಕಬಾಬ್ ಮಾಡ್ತಿದ್ದಾರೆ. ಅಷ್ಟಕ್ಕೂ ವೈರಲ್ ಆಗಿರೋ ಈ ರಾಹುಲ್ಲಾ ಬಿಹಾರ ಮೂಲದವನು. ಮುಂಬೈನ ಹೋಟೆಲ್​ವೊಂದ್ರಲ್ಲಿ ಕೆಲ್ಸ ಮಾಡ್ಕೊಂಡಿದ್ದ ರಾಹುಲ್ ಕೊರೊನಾ ಟೈಮಲ್ಲಿ ಬೆಂಗಳೂರಿಗೆ ಬಂದಿದ್ರು. ಚಂದ್ರು ಅವರ ಹೋಟೆಲ್ ನಲ್ಲಿ ಹೆಲ್ಪರ್ ಆಗಿ ಕೆಲ್ಸಕ್ಕೆ ಸೇರಿಕೊಂಡಿದ್ರು. ಎರಡೂವರೆ ವರ್ಷದಿಂದ ಅದೇ ಹೋಟೆಲ್​ನಲ್ಲೇ ಕೆಲ್ಸ ಮಾಡ್ತಿದ್ದು ಈಗ ಎಲ್ಲಾ ತರಹದ ಅಡುಗೆ ಮಾಡೋದನ್ನ ಕಲ್ತಿದ್ದಾರೆ. ಕೊರೊನಾ ಟೈಮಲ್ಲಿ ಜೊತೆ ನಿಂತ ರಾಹುಲ್ಲನ ಬಗ್ಗೆ ಚಂದ್ರುಗೂ ಕೂಡ ವಿಶೇಷ ಅಭಿಮಾನವಿದೆ. ಬೆಳ್ಳುಳ್ಳಿ ಕಬಾಬ್ ಇಷ್ಟೊಂದು ವೈರಲ್ ಆದ ಮೇಲೆ ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿರುವ ನಿಮ್ಮ ಮನೆ ಹೋಟೆಲ್​ಗೆ ಬರೋರ ಸಂಖ್ಯೆ ವಿಪರೀತ ಜಾಸ್ತಿಯಾಗಿದೆ. ಅದ್ರಲ್ಲೂ ಮಧ್ಯಾಹ್ನದ ವೇಳೆ ಜಾತ್ರೆ ಸೇರಿದಂತೆ ಜನ ಇರ್ತಾರೆ. ಫುಡ್ ಆರ್ಡರ್ ಮಾಡೋದ್ರಿಂದ ಹಿಡಿದು ಬಿಲ್ ಪೇ ಮಾಡೋಕೂ ಕ್ಯೂನಲ್ಲಿ ನಿಲ್ಲುವಂಥ ಪರಿಸ್ಥಿತಿ ಇದೆ. ಎಷ್ಟೋ ಜನ ಬೆಳ್ಳುಳ್ಳಿ ಕಬಾಬ್ ತಿನ್ನೋಕಂತ್ಲೇ ಹೋಟೆಲ್​ಗೆ ಹೋಗ್ತಿದ್ದಾರೆ.

ಇನ್ನು ರಾಹುಲ್ಲ ಅಂತೂ ಒಂದು ರೇಂಜ್​ಗೆ ಸೆಲೆಬ್ರಿಟಿಯೇ ಆಗಿ ಬಿಟ್ಟಿದ್ದಾರೆ. ರಸ್ತೆಗಳಲ್ಲಿ ಹೋಗುವಾಗ ರಾಹುಲ್ಲಾ ರಾಹುಲ್ಲಾ ಅಂತಾ ಜನ ಕೂಗಿಕೊಳ್ತಿದ್ದಾರೆ. ಕೆಲವ್ರು ಬಂದು ಸೆಲ್ಫಿ ಕೂಡ ತೆಗೆದುಕೊಳ್ತಿದ್ದಾರೆ. ಹೋಟೆಲ್​ಗೆ ಹೋಗುವವರು ಕೂಡ ರಾಹುಲ್ಲಾ ರಾಹುಲ್ಲಾ ಅಂತಾ ಕೂಗ್ತಿದ್ದಾರೆ. ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ಲಾ ಹವಾ ಜೋರಾಗೇ ಇದೆ. ಕರಿಮಣಿ ಮಾಲೀಕ ಹಾಡು ಮತ್ತು ರಾಹುಲ್ಲಾ  ಡೈಲಾಗ್ ಸೇರಿಸಿ ಲಕ್ಷಾಂತರ ಮಂದಿ ರೀಲ್ಸ್ ಮಾಡ್ತಿದ್ದಾರೆ. ಪ್ರಧಾನಿ ಮೋದಿ, ರಾಹುಲ್ ಗಾಂಧಿ ಮತ್ತು ಸ್ಟಾರ್ ಕ್ರಿಕೆಟರ್ಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

Shwetha M