ಹಿಂಸಾಚಾರಕ್ಕೆ ತಿರುಗಿದ ರೈತರ ಹೋರಾಟ –  ವಾಹನಗಳ ಮೇಲೆ ಕಲ್ಲು ತೂರಾಟ

ಹಿಂಸಾಚಾರಕ್ಕೆ ತಿರುಗಿದ ರೈತರ ಹೋರಾಟ –  ವಾಹನಗಳ ಮೇಲೆ ಕಲ್ಲು ತೂರಾಟ

ಕಬ್ಬು ದರ ನಿಗದಿಗಾಗಿ ರೈತರು ಕಳೆದ 9 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಚಿಕ್ಕೋಡಿಯಲ್ಲಿ ಈ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರ ಗುಂಪು ಪೊಲೀಸರು ಹಾಗೂ ಪೊಲೀಸ್‌ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.

ಇದನ್ನೂ ಓದಿ:ಆ ಪದ ಬಳಸಿ ಗಿಲ್ಲಿ, ಕಾವ್ಯ ಪಿತ್ತ ನೆತ್ತಿಗೇರಿಸಿದ ಧ್ರುವಂತ್! – ಗಿಲ್ಲಿನಟನ ಟಾರ್ಗೆಟ್‌ ಮಾಡಿ ಇರೋ ಮರ್ಯಾದೆ ಕಳ್ಕೊಳ್ತಿದ್ದಾರಾ?

ಪ್ರತಿಭಟನೆ ಹಿನ್ನೆಲೆ ಇಂದು ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈಡ್ರಾಮಾ ನಡೆಯಿತು. ರೈತರನ್ನು ಒತ್ತಾಯಪೂರ್ವಕವಾಗಿ ರಸ್ತೆಯಿಂದ ವಾಪಸ್ ಕಳುಹಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಜಟಾಪಟಿ ನಡೆಯಿತು. ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ರೈತರನ್ನ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಅಲ್ಲದೇ ರೈತರ ಮೇಲೆ ಲಾಠಿಚಾರ್ಚ್‌ ಮಾಡಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸ್ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ.  ಪರಿಸ್ಥಿತಿ ನಿಯಂತ್ರಿಸಲಾಗದೇ ಸ್ಥಳದಿಂದ ಪೊಲೀಸರು ಅಲ್ಲಿಂದ ವಾಪಾಸ್‌ ಹೋಗಿದ್ದಾರೆ.

ಅಂದ್ಹಾಗೆ ರೈತರ ಪ್ರತಿಭಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 4ರ ಹತ್ತರಗಿ ಟೋಲ್ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. 250ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು. ಪ್ರತಿಭಟನೆ ಮಾಡುವ ರೈತರನ್ನು ವಶಕ್ಕೆ ಪಡೆಯಲು 5 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು.

Shwetha M