ಬೆಳಗಾವಿ ಗಡಿ ವಿವಾದ – ಬಸ್ ಸೇವೆ ರದ್ದುಮಾಡಿದ ಮಹಾರಾಷ್ಟ್ರ ಸರ್ಕಾರ
ಮಹಾರಾಷ್ಟ್ರ ಸಾರಿಗೆ ಬಸ್‌ಗಳಿಗೆ ಪೊಲೀಸರ ಭದ್ರತೆ

ಬೆಳಗಾವಿ ಗಡಿ ವಿವಾದ – ಬಸ್ ಸೇವೆ ರದ್ದುಮಾಡಿದ ಮಹಾರಾಷ್ಟ್ರ ಸರ್ಕಾರಮಹಾರಾಷ್ಟ್ರ ಸಾರಿಗೆ ಬಸ್‌ಗಳಿಗೆ ಪೊಲೀಸರ ಭದ್ರತೆ

ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದ ತೀವ್ರಗೊಳ್ಳುತ್ತಿದ್ದಂತೆ ಮಹಾರಾಷ್ಟ್ರ ರಾಜ್ಯ ಸಾರಿಗೆ ನಿಗಮ ಕರ್ನಾಟಕಕ್ಕೆ ಬಸ್ ಸೇವೆಯನ್ನು ರದ್ದುಗೊಳಿಸಿದೆ.  ಪ್ರಯಾಣಿಕರು ಮತ್ತು ಬಸ್ ಸುರಕ್ಷತೆಯನ್ನು ನೋಡಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಮತ್ತೊಂದೆಡೆ . ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡಕ್ಕೆ ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರಿಗೆ ತೊಂದರೆಯಾಗದಂತೆ ಮಹಾರಾಷ್ಟ್ರ ಸಾರಿಗೆ ಬಸ್‌‌ಗಳಿಗೆ ಭದ್ರತೆ ಒದಗಿಸಲಾಗಿದೆ . ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಆಗಮಿಸಿರುವ ಮಹಾರಾಷ್ಟ್ರ ಸಾರಿಗೆ ಬಸ್‌‌ಗಳಿಗೆ ಭದ್ರತೆ ನೀಡಲಾಗಿದೆ.. ಡಿವೈಎಸ್‌ಪಿ, ಮೂವರು ಸಿಪಿಐ, ಎರಡು ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ  100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ :  ಅನ್ನರಾಮಯ್ಯ, ದಲಿತರಾಮಯ್ಯ ಈಗ ಸಿದ್ರಾಮುಲ್ಲಾಖಾನ್- ಹೆಸರಿಟ್ಟಿದ್ದಕ್ಕೆ ಬೇಸರವಿಲ್ಲ ಎಂದು ಬಿಜೆಪಿಗೆ ಸಿದ್ದು ತಿರುಗೇಟು

ಇನ್ನೊಂದೆಡೆ ಬೆಳಗಾವಿಯ ಬಾಚಿ ಚೆಕ್​​​ಪೋಸ್ಟ್​​ನಲ್ಲಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ​​ಬಾಚಿ ಚೆಕ್​​ಪೋಸ್ಟ್​​ನಲ್ಲಿ ಮಹಾರಾಷ್ಟ್ರದಿಂದ ಬರುವ ವಾಹನ ತಪಾಸಣೆ ಮಾಡಿಯೇ ನಂತರ ಬಿಡಲಾಗುತ್ತಿದೆ. ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ವಿವಾದದ ಕಿಚ್ಚು ಅತ್ತ ನಾಸಿಕ್‌ನಲ್ಲೂ ಜೋರಾಗಿಯೇ ವ್ಯಾಪಿಸಿದೆ.  ಕರ್ನಾಟಕ ಬ್ಯಾಂಕ್‌ಗೆ ಕಿಡಿಗೇಡಿಗಳು ಕಪ್ಪು ಮಸಿ ಬಳಿದಿದ್ದಾರೆ. ಬ್ಯಾಂಕ್​ನ ಬೋರ್ಡ್‌, ಬಾಗಿಲಿಗೆ ಕಪ್ಪು ಮಸಿ ಬಳಿದಿದ್ದಾರೆ.

suddiyaana