ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಬಳಿಕ ಬೆಲಾರಸ್ ಅಧ್ಯಕ್ಷ ಆಸ್ಪತ್ರೆಗೆ ದಾಖಲು – ವಿಷ ನೀಡಿರುವ ಶಂಕೆ!  

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಬಳಿಕ ಬೆಲಾರಸ್ ಅಧ್ಯಕ್ಷ ಆಸ್ಪತ್ರೆಗೆ ದಾಖಲು – ವಿಷ ನೀಡಿರುವ ಶಂಕೆ!  

ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅಲೆಕ್ಸಾಂಡರ್ ಅವರಿಗೆ ವಿಷ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಕೂಡ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾದ ಬಳಿಕ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಆಸ್ಪತ್ರೆಗೆ ದಾಖಲಾಗಿದ್ದು, ವಿಷ ನೀಡಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಗ್ರಾಹಕರಿಗೆ ಮತ್ತಷ್ಟು`ಖಾರʼವಾದ ಒಣ ಮೆಣಸಿನಕಾಯಿ – ಕೆಜಿಗೆ ಎಷ್ಟು ರೂಪಾಯಿ ಗೊತ್ತಾ?

ಆಸ್ಪತ್ರೆಗೆ ದಾಖಲಾಗಿರುವ ಬೆಲಾರಸ್​ ಅಧ್ಯಕ್ಷರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಬೆಲಾರಸ್‌ನ ವಿರೋಧ ಪಕ್ಷದ ನಾಯಕ ವ್ಯಾಲೆರಿ ತ್ಸೆಪ್ಕಾಲೊ ತಿಳಿಸಿದ್ದಾರೆ. 68 ವರ್ಷದ ಲುಕಾಶೆಂಕೋ ಅವರ ಆರೋಗ್ಯ ಹದಗೆಟ್ಟ ತಕ್ಷಣ ಅವರನ್ನು ಮಾಸ್ಕೋದ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಸಲಿಗೆ ಅಲೆಕ್ಸಾಂಡರ್ ವ್ಲಾಡಿಮಿರ್​ ಪುಟಿನ್​ಗೆ ಅತ್ಯಂತ ನಿಕಟವಿರುವ ನಾಯಕರಲ್ಲಿ ಒಬ್ಬರು ಮತ್ತು ಅತ್ಯಾಪ್ತ ಮಿತ್ರರೂ ಆಗಿದ್ದಾರೆ.

ಲುಕಾಶೆಂಕೋ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದರು. ಸದ್ಯ ಅವರನ್ನು ಐಸಿಯುನಲ್ಲಿರಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ವಿಷಪ್ರಾಶನದ ಶಂಕೆ ಹಿನ್ನೆಲೆ ರಕ್ತ ಶುದ್ಧೀಕರಣ ಕಾರ್ಯವಿಧಾನಗಳನ್ನು ನಡೆಸಲಾಗುತ್ತಿದೆ. ಇನ್ನು ರಷ್ಯಾ ನಾಯಕರ ಉಕ್ರೇನ್ ಆಕ್ರಮಣವನ್ನು ಲುಕಾಶೆಂಕೋ ಬೆಂಬಲಿಸಿದ್ದರು. ಮೇ 9 ರಂದು ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಂಡಿದ್ದರು. ಆದರೆ ಹೆಚ್ಚು ಹೊತ್ತು ಅಲ್ಲಿರದೆ ತಮ್ಮ ದೇಶಕ್ಕೆ ವಾಪಸಾಗಿದ್ದರು.

ಬ್ರಿಟಿಷ್ ಸರ್ಕಾರ ತಾನು ಉಕ್ರೇನ್‌ಗೆ ಯುರೇನಿಯಂ ಸೇರಿದಂತೆ ವಿವಿಧ ಆಯುಧಗಳನ್ನು ಪೂರೈಸುವುದಾಗಿ ಘೋಷಿಸಿದ ಬೆನ್ನಲ್ಲೇ, ಪುಟಿನ್ ತಾನು ಉಕ್ರೇನ್ ಜೊತೆ ಗಡಿ ಹಂಚಿಕೊಳ್ಳುವ ಬೆಲಾರಸ್‌ನಲ್ಲಿ ಕಾರ್ಯತಂತ್ರದ ಅಣ್ವಸ್ತ್ರಗಳನ್ನು ಅಳವಡಿಸುವುದಾಗಿ ಘೋಷಿಸಿದ್ದರು.

suddiyaana