ವಿರೋಧ ಪಕ್ಷದ ನಾಯಕ ನಾನೇ! – ಸದನದಲ್ಲೂ ಶುರುವಾಯ್ತು ಕುರ್ಚಿ ಫೈಟ್!

 ವಿರೋಧ ಪಕ್ಷದ ನಾಯಕ ನಾನೇ! – ಸದನದಲ್ಲೂ ಶುರುವಾಯ್ತು ಕುರ್ಚಿ ಫೈಟ್!

ವಿಧಾನಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರ್ಚಿ ವಿಚಾರಕ್ಕೆ ಸಿಟ್ಟಾಗಿದ್ದಾರೆ. ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ.. ನಮ್ಮನ್ನ ಹಿಂದಕ್ಕೆ ಹಾಕಿದ್ದೀರ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನೀವು ಗಂಡಸಲ್ವಾ?.. ಏ ಥೂ.. ಕ*ಚಡಾ! – ನಾಮಿನೇಟ್‌ ಮಾಡಿದ ರಜತ್‌ಗೆ ಅಶ್ವಿನಿ ಬೈಯ್ಯೋದು ಹೀಗಾ!?

ವಿಧಾನಸಭೆಯಲ್ಲಿ ಕುರ್ಚಿ ಬದಲಾಯಿಸಿದ್ದಕ್ಕೆ ಗರಂ ಆದ ಯತ್ನಾಳ್, ನಾವೆಲ್ಲರೂ ಹಿರಿಯ ಶಾಸಕರು, ಆದರೆ ನಮ್ಮನ್ನು ಹಿಂದಕ್ಕೆ ಹಾಕಿದ್ದೀರಾ. ಇದು ಯಾವ ನ್ಯಾಯ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಶಾಸಕ ರಂಗನಾಥ್ ಮಾತನಾಡಿ, ಯತ್ನಾಳ್‌ರನ್ನ ಬಿಜೆಪಿಯವರು ಅನಾಥರನ್ನಾಗಿ ಮಾಡಿದ್ದಾರೆ. ಅವರ ಜೊತೆ ನಾವು ನಿಲ್ಲುತ್ತೇವೆ ಎಂದ ಕಾಲೆಳೆದರು.

ಆಗ ಸ್ಪೀಕರ್ ಯ.ಟಿ.ಖಾದರ್ ಸ್ಪಷ್ಟನೆ ನೀಡಿ, ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಅಂತಿಲ್ಲ. ಅಧಿಕಾರಿದಲ್ಲಿದ್ದಾಗ ಸೀನಿಯರ್, ಇಲ್ಲದಿದ್ದಾಗ ಜೂನಿಯರ್, ಶಾಸಕರ ಸಂಖ್ಯಾಬಲ ನೋಡಿಕೊಂಡು ಸೀಟು ಕೊಡೋದು. ನಿಮಗೆ ಬೇಕಾದಾಗ ಇಲ್ಲಿ ಇರುತ್ತೀರಾ, ಬೇಡ ಅಂದಾಗ ಅಲ್ಲಿಗೆ ಹೋಗ್ತೀರಿ ಎಂದು ತಿವಿದರು.

ಬಳಿಕ ಮಾತನಾಡಿದ ಯತ್ನಾಳ್, ಬೇಕಾದಾಗ ಅಂತಾ ಅಲ್ಲ, ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ. ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ. ನಾನು ಅಡ್ಜಸ್ಮೆಂಟ್ ರಾಜಕಾರಣಿ ಅಲ್ಲ. ನಾನೇನು ಸಿಎಂ ಮನೆಗೆ ಹೋಗಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎದುರಲ್ಲೇ ನಾನೇ ನಿಜವಾದ ವಿರೋಧ ಪಕ್ಷದ ನಾಯಕ ಎಂದು ಟಾಂಗ್ ಕೊಟ್ಟರು.

Shwetha M