ಮದ್ವೆಯಾಗದೇ ಗರ್ಭಿಣಿಯಾದ ಸ್ಯಾಂಡಲ್‌ವುಡ್ ನಟಿ! – ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಭಾವನ

ಸ್ಯಾಂಡಲ್ ವುಡ್ ನಟಿ ಭಾವನ ಈಗ ತಾಯಿಯಾಗೋ ಖುಷಿಯಲ್ಲಿದ್ದಾರೆ. ಇದೀಗ ನಟಿ 6 ತಿಂಗಳ ಗರ್ಭಿಯಾಗಿದ್ದು, ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಈ ಖುಷಿ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರತಿ ಬಾಲ್‌ಗೂ ಹ್ಯಾರಿ ಬ್ರೂಕ್ ಬ್ರೇಕ್ – ಸಿಡಿದೆದ್ದ ರಿಷಭ್ ಪಂತ್, ರವೀಂದ್ರ ಜಡೇಜಾ ವಾರ್ನಿಂಗ್
ನಟಿ ಭಾವನಾ ಇನ್ನೂ ಸಿಂಗಲ್ ಜೀವನ ನಡೆಸುತ್ತಿದ್ದಾರೆ. ಇದೀಗ ತಮ್ಮ 40ನೇ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದಾರೆ. ಐವಿಎಫ್ ಮೂಲಕ ಭಾವನಾ ತಾಯಿಯಾಗುತ್ತಿದ್ದಾರೆ. ಈ ಸಂತಸದ ವಿಚಾರವನ್ನ ನಟಿ ಸೋಶಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದಾರೆ. ತುಂಬು ಕುಟುಂಬದಲ್ಲಿ ಬೆಳೆದ ನನಗೆ ಈವರೆಗೂ ತಾಯಿ ಆಗುವ ಬಯಕೆ ಇರಲಿಲ್ಲ. ಆದರೆ ಈಗೀಗ ತಾಯಿ ಆಗಬೇಕು ಎನ್ನುವ ಹಂಬಲ ನನ್ನ ಕಾಡುತ್ತಲೇ ಇತ್ತು. ಹೀಗಾಗಿ ಐವಿಎಫ್ ಮೂಲಕ ಈಗ ಗರ್ಭಿಣಿಯಾಗಿದ್ದೇನೆ. ಮಕ್ಕಳ ಬಗ್ಗೆ ತುಂಬಾ ಕುತೂಹಲವಿದೆ. ಅಮ್ಮ ಆಗುವ ಉತ್ಸುಕದಲ್ಲಿದ್ದೇನೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಭಾವನಾ ಅವರು ಸ್ಯಾಂಡಲ್ವುಡ್ನಲ್ಲಿ ಭರತನಾಟ್ಯದಲ್ಲಿ ಖ್ಯಾತಿ ಪಡೆದಿದ್ದಾರೆ. ತುಳು ಮೂಲಕ ಸಿನಿ ರಂಗಕ್ಕೆ ಆಗಮಿಸಿದ ಅವರು ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲ ಮನ ಗೆದ್ದರು. ನೀ ಮುಡಿದ ಕ್ಷಾಮ, ಭಾಗೀರಥಿ ಹಾಗೂ ಮಲ್ಲಿಗೆ ಮೂವಿಗಳಿಗಾಗಿ 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.

ನೋಡಿರಿ

