ನಾಣ್ಯಗಳನ್ನೇ ಹೊತ್ತು ತಂದು ಐಫೋನ್ 15 ಖರೀದಿಸಿದ ಭಿಕ್ಷುಕ – iphone ಕ್ರೇಜ್ ಗೆ ಶಾಪ್ ಸಿಬ್ಬಂದಿಯೇ ಶಾಕ್!

ನಾಣ್ಯಗಳನ್ನೇ ಹೊತ್ತು ತಂದು ಐಫೋನ್ 15 ಖರೀದಿಸಿದ ಭಿಕ್ಷುಕ – iphone ಕ್ರೇಜ್ ಗೆ ಶಾಪ್ ಸಿಬ್ಬಂದಿಯೇ ಶಾಕ್!

ಹರಿದ ಬಟ್ಟೆ. ಮೈ ತುಂಬಾ ಕೊಳೆ. ರಾಶಿರಾಶಿ ನಾಣ್ಯಗಳನ್ನ ಬ್ಯಾಗ್​ನಲ್ಲಿ ಹೊತ್ತು ಭಿಕ್ಷುಕನೊಬ್ಬ ಐಫೋನ್​ ಶಾಪ್​ಗೆ ಬಂದಿದ್ದ. ಆತನ ಅವಸ್ಥೆ ನೋಡಿದ ಶಾಪ್ ಸಿಬ್ಬಂದಿ ಒಳಗೆ ಬಿಟ್ಟುಕೊಂಡಿಲ್ಲ. ಆದ್ರೆ ಆ ಭಿಕ್ಷುಕ ತಾನು ಐಫೋನ್ ಖರೀದಿಸೋಕೆ ಬಂದಿರೋದಾಗಿ ಹೇಳಿದ್ದಾನೆ. ಬಳಿಕ ತನ್ನ ಬಳಿ ಇದ್ದ ಚಿಲ್ಲರೆ ನಾಣ್ಯಗಳನ್ನ ಕೆಳಗೆ ಸುರಿದಿದ್ದಾನೆ. ಶಾಪ್​ನಲ್ಲಿದ್ದ ಎಲ್ಲಾ ಸಿಬ್ಬಂದಿ ಸೇರಿ ನಾಣ್ಯಗಳನ್ನ ಲೆಕ್ಕ ಹಾಕಿದ್ದಾರೆ. ಬಳಿಕ ಭಿಕ್ಷುಕನಿಗೆ ಐಫೋನ್ 15 ನೀಡಿದ್ದಾರೆ.

ಇದನ್ನೂ ಓದಿ : ಹುಡುಗಿ ಚೆನ್ನಾಗಿದ್ದಾಳೆ ಎಂದು ಬಡತನವನ್ನೂ ಲೆಕ್ಕಿಸದೆ ಮದುವೆ ಮಾಡಿಕೊಂಡ್ರು – ಮಾರನೇ ದಿನವೇ ಚಿನ್ನಾಭರಣದ ಜೊತೆ ವಧು ಪರಾರಿ

ಐಫೋನ್ ಖರೀದಿ ಮಾಡೋದು ಅಂದ್ರೆ ಅದು ಜನಸಾಮಾನ್ಯರಿಗೆ ಸ್ವಲ್ಪ ಕಷ್ಟವೇ. ಅಷ್ಟೊಂದು ಹಣ ಕೊಟ್ಟು ಯಾಕೆ ಫೋನ್ ಖರೀದಿ ಮಾಡಬೇಕು ಅಂದುಕೊಳ್ತಾರೆ. ಇಂತಹ ಸ್ಥಿತಿಯಲ್ಲಿ ಭಿಕ್ಷುಕನೋರ್ವ ಐಫೋನ್ ಖರೀದಿಸಲು ಹೋದರೆ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿಯುವುದಕ್ಕಾಗಿ ಈ ವಿಶೇಷ ಪ್ರಯೋಗ ನಡೆದಿದೆ. ಎಕ್ಸ್‌ಪೆರಿಮೆಂಟ್ ಕಿಂಗ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್‌ ಆಗಿದೆ. ವೀಡಿಯೋದಲ್ಲಿ ಯುವಕನೋರ್ವ ಭಿಕ್ಷುಕನ ವೇಷದಲ್ಲಿ ಚೀಲದ ತುಂಬಾ ನಾಣ್ಯದೊಂದಿಗೆ  ಜೋಧ್‌ಪುರದ (Jodhpur) ಮೊಬೈಲ್ ಶೋರೂಮ್ ಒಂದಕ್ಕೆ ಹೋಗಿ ಐಪೋನ್ ಖರೀದಿಸಲು ಹೋಗುತ್ತಾನೆ. ಆದರೆ ಹಲವು ಮೊಬೈಲ್ ಶೋರೂಮ್‌ಗಳು (Showroom) ಆತನ ಹರುಕು ಮುರುಕು ವೇಷ ನೋಡಿ ಮೊಬೈಲ್ ಶೋರೂಮ್ ಒಳಗೆ ಪ್ರವೇಶಿಸುವುದಕ್ಕೆ ಬಿಡುವುದಿಲ್ಲ, ಮತ್ತೆ ಕೆಲವರು ನಾಣ್ಯದ ಕಾರಣಕ್ಕೆ ಆತನ ಐಫೋನ್ ಕೊಳ್ಳುವ ಬಯಕೆಗೆ ತಣ್ಣೀರೆರಚುತ್ತಾರೆ. ಆದರೂ ಕೊನೆಯದಾಗಿ ಒಂದು ಮೊಬೈಲ್ ಶೋರೂಮ್ ಈತನ ಬಳಿ ಇರುವ ಚಿಲ್ಲರೆ ನಾಣ್ಯವನ್ನು ಸ್ವೀಕರಿಸಿ ಮೊಬೈಲ್ ಫೋನ್ ಖರೀದಿಸಲು ಅವಕಾಶ ಮಾಡಿಕೊಡುತ್ತದೆ.

ಯುವಕ ತನ್ನ ಕೈಯಲ್ಲಿದ್ದ ನಾಣ್ಯಗಳ ಚೀಲವನ್ನು ಮೊಬೈಲ್ ಶೋರೂಮ್‌ನ ಮೇಜಿನ ಮೇಲೆ ಸುರಿಯುತ್ತಾನೆ. ನಂತರ ಅಲ್ಲಿದ್ದ ಸಿಬ್ಬಂದಿ ಎಲ್ಲರೂ ಜೊತೆಯಾಗಿ ಈ ನಾಣ್ಯವನ್ನು ಲೆಕ್ಕ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ನಂತರ ಆತನಿಗೆ ಐಫೋನ್ 15 ನೀಡುತ್ತಾರೆ. ಅಲ್ಲದೇ ಈ ಭಿಕ್ಷುಕ ಶಾಪ್ ಮಾಲೀಕರ ಜೊತೆ ಫೋಟೋವನ್ನು ತೆಗೆದುಕೊಳ್ಳುತ್ತಾನೆ. ಅಲ್ಲಿದ್ದ ಕೆಲವರು ಅಚ್ಚರಿಯಿಂದ ಈತನನ್ನು ನೋಡುವುದನ್ನು ಕಾಣಬಹುದು.

ಆಪಲ್ ಸರಣಿಯ iPhone 15 ಫೋನ್‌ ಭಾರತದಲ್ಲಿ ಸೆಪ್ಟೆಂಬರ್‌ 22 ರಿಂದ ಗ್ರಾಹಕರ ಖರೀದಿಗೆ ಲಭ್ಯವಾಗಿತ್ತು. ಇದು ಬಿಡುಗಡೆಗೆ ಮೊದಲೇ ದೆಹಲಿ ಮತ್ತು ಮುಂಬೈನಲ್ಲಿನ ಆಪಲ್‌ನ ರಿಟೈಲ್ ಶಾಪ್‌ಗಳ ಹೊರಗೆ ಜನ ಉದ್ದನೇಯ ಸರತಿ ಸಾಲಿನಲ್ಲಿ ನಿಂತಿದ್ದರು. 128 GB ಬೇಸ್ ಸ್ಟೋರೇಜ್ ಹೊಂದಿರುವ ಐಫೋನ್ 15ನ ದರ  79,900 ರಿಂದ ಆರಂಭವಾಗುತ್ತದೆ.  ಐಫೋನ್ 15 ಪ್ಲಸ್‌ಗೆ  89,900  ರೂ ಇದೆ. ಅದೇ ರೀತಿ 128GB ಹೊಂದಿರುವ  iPhone 15 Pro ದರ 1,34,900 ರಿಂದ ಆರಂಭವಾಗುತ್ತದೆ. ಹಾಗೆಯೇ iPhone 15 Pro Maxಗೆ  1, 59,900 ದರ ಇದೆ.

ಹಾಗಂತ ಇಲ್ಲಿ ಐಫೋನ್ ಖರೀದಿಸಿದ್ದು ನಿಜವಾದ ಭಿಕ್ಷುಕ ಅಲ್ಲ, ಭಿಕ್ಷುಕನ ವೇಷದಲ್ಲಿದ್ದ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್. ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Shantha Kumari