ಟ್ವಿಟ್ಟರ್ ಸಿಬ್ಬಂದಿಗೆ ಗೇಟ್ ಪಾಸ್! ಇಂಜಿನಿಯರ್ ಗಳಿಗಾಗಿ ಮಸ್ಕ್ ಪರದಾಟ?
ಒಂದು ಇ-ಮೇಲ್.. ಸಾಲು ಸಾಲು ರಾಜೀನಾಮೆ!

ಟ್ವಿಟ್ಟರ್ ಸಿಬ್ಬಂದಿಗೆ ಗೇಟ್ ಪಾಸ್!  ಇಂಜಿನಿಯರ್ ಗಳಿಗಾಗಿ ಮಸ್ಕ್ ಪರದಾಟ?ಒಂದು ಇ-ಮೇಲ್.. ಸಾಲು ಸಾಲು ರಾಜೀನಾಮೆ!

ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದಲ್ಲಿರೋ ಟ್ವಿಟ್ಟರ್ ಸಂಸ್ಥೆ ಈಗ ನಿತ್ಯವೂ ಒಂದಿಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಟ್ವಿಟ್ಟರ್​ನ್ನ ಎಲಾನ್ ಮಸ್ಕ್ ಖರೀದಿಸಿದ್ದೇ ತಡ ಇಡೀ ಸಂಸ್ಥೆಯ ಚಿತ್ರಣವೇ ಬದಲಾಗಿ ಹೋಗಿದೆ. ದಿನ ಬೆಳಗಾಗುವಷ್ಟರಲ್ಲಿ ಟ್ವಿಟ್ಟರ್ ಶೇಕಡಾ 50ರಷ್ಟು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇನ್ನೊಂದಷ್ಟು ಮಂದಿ ಏಕಕಾಲಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟ್ವಿಟ್ಟರ್​ನಿಂದ ಹೊರ ನಡೆದಿದ್ರು. ಪರಿಣಾಮ ಈ ಹಿಂದೆ ಏಳು ಸಾವಿರ ಸಿಬ್ಬಂದಿಯನ್ನ ಹೊಂದಿದ್ದ ಟ್ವಿಟ್ಟರ್​​ನಲ್ಲಿ ಈಗ 2,750 ಮಂದಿ ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ನಡುವೆ, ಕೆಲ ಪ್ರಮುಖ ಹುದ್ದೆಯಲ್ಲಿದ್ದವರ ರಾಜೀನಾಮೆಯಿಂದಾಗಿ ಎಲಾನ್​ ಮಸ್ಕ್​​​ಗೆ ಕೂಡ ಒಂದಷ್ಟು ಸವಾಲುಗಳು ಎದುರಾಗಿದೆ. ಕಳೆದ ವಾರವಷ್ಟೇ ಸುಮಾರು 1,200 ಸಾಫ್ಟ್​ವೇರ್ ಇಂಜಿನಿಯರ್​ಗಳು ಟ್ವಿಟ್ಟರ್ ಸಂಸ್ಥೆಯಿಂದ ಹೊರ ನಡೆದಿದ್ರು. ಈ ಎಲ್ಲಾ ಇಂಜಿನಿಯರ್​ಗಳು ಕೋಡಿಂಗ್​​ ಮಾಡೋದ್ರಲ್ಲಿ ನಿಪುಣರಾಗಿದ್ದರು. ಆದ್ರೀಗ ಈ ಕೋಡಿಂಗ್ ಪರಿಣತರಿಗಾಗಿ ಎಲಾನ್​ ಮಸ್ಕ್ ಕಂಪನಿಯೊಳಗೇ ಹುಡುಕಾಟ ನಡೆಸುತ್ತಿದ್ದಾರೆ.

ಇಲ್ಲಿ ಮತ್ತೊಂದು ಕುತೂಹಲಕಾರಿ ವಿಚಾರ ಅಡಗಿದೆ. 1,200 ಮಂದಿ ಸಾಫ್ಟ್​ವೇರ್ ಇಂಜಿನಿಯರ್​ಗಳು ಟ್ವಿಟ್ಟರ್​ಗೆ ಗುಡ್​ಬೈ ಹೇಳೋದಕ್ಕೂ ಪ್ರಮುಖ ಕಾರಣವಿದೆ. ಇಂಜಿನಿಯರ್​ಗಳಿಂದ ಕಠಿಣ ಕೆಲಸಕ್ಕೆ ಸಜ್ಜಾಗುವಂತೆ ಇ-ಮೇಲ್ ಮಾಡಲಾಗಿತ್ತು. ವಾರಕ್ಕೆ ಬರೋಬ್ಬರಿ 80 ಗಂಟೆಗಳ ಕಾಲ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಕಂಪನಿಯ ಪ್ರಮುಖ ಇಂಜಿನಿಯರ್​ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟ್ವಿಟ್ಟರ್​ನಿಂದ ಹೊರ ನಡೆದಿದ್ದರು.

suddiyaana