ನೀವು ಸುಂದರವಾಗಿದ್ದೀರಿ.. ಇನ್ನೂ ಯಾಕೆ ಮದುವೆಯಾಗಿಲ್ಲ? – ವಿದ್ಯಾರ್ಥಿನಿ ಪ್ರಶ್ನೆಗೆ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತಾ?
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮದುವೆ ವಿಚಾರ ಆಗಾಗ ಮುನ್ನೆಲೆ ಬರುತ್ತಲೇ ಇದೆ. ಈ ಹಿಂದೆ ಮಹಿಳೆಯೊಬ್ಬ ಸೋನಿಯಾ ಗಾಂಧಿ ಅವರ ಬಳಿಯೂ ರಾಹುಲ್ ಗಾಂಧಿ ಮದುವೆ ಬಗ್ಗೆ ಪ್ರಶ್ನಿಸಿದ್ದರು. ಇದೀಗ ರಾಹುಲ್ ಗಾಂಧಿಯವರನ್ನು ವಿದ್ಯಾರ್ಥಿಯೊಬ್ಬಳು ಪ್ರಶ್ನಿಸಿದ್ದಾಳೆ. ಈ ಪ್ರಶ್ನೆಗೆ ರಾಹುಲ್ ಗಾಂಧಿಯೇ ಉತ್ತರಿಸಿದ್ದಾರೆ.
ರಾಜಸ್ಥಾನದ ಜೈಪುರದ ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಾಹುಲ್ ಗಾಂಧಿಗೆ ಮತ್ತೆ ಮದುವೆ ಪ್ರಶ್ನೆ ಎದುರಾಗಿದೆ. ವಿದ್ಯಾರ್ಥಿನಿಯೊಬ್ಬಳು, ನೀವು ಸುಂದರವಾಗಿದ್ದೀರಿ, ತುಂಬಾ ಚೆನ್ನಾಗಿ ಕಾಣಿಸುತ್ತೀರಿ, ಆದರೂ ಇನ್ನೂ ಯಾಕೆ ಮದುವೆ ಆಗಿಲ್ಲ ಎಂದು ರಾಹುಲ್ ಗಾಂಧಿಯನ್ನು ಕೇಳಿದ್ದಾಳೆ. ಈ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರವನ್ನೂ ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲೇ ಅತೀ ಹೆಚ್ಚು ಅವಧಿಪೂರ್ವ ಶಿಶುಗಳ ಜನನ! – ಅಧ್ಯಯನದಲ್ಲಿ ಶಾಕಿಂಗ್ ವಿಚಾರ ಬಯಲು!
ನಾನು ನನ್ನ ಕೆಲಸ ಹಾಗೂ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಸಿಲುಕಿಕೊಂಡಿದ್ದೇನೆ. ಹೀಗಾಗಿ ಮದುವೆ ಆಗಿಲ್ಲ ಎಂದು ರಾಹುಲ್ ಉತ್ತರ ನೀಡಿದ್ದಾರೆ.
ಇನ್ನು ಈ ಸಂವಾದದಲ್ಲಿ ರಾಹುಲ್ ಗಾಂಧಿ ಕುರಿತ ಇನ್ನಷ್ಟು ವಿಚಾರಗಳ ಬಗ್ಗೆ ಕೇಳಲಾಗಿದ್ದು, ಅವರ ಇಷ್ಟದ ತಿಂಡಿ-ತಿನಿಸು, ಊಟ, ಆಸಕ್ತಿ ಇತ್ಯಾದಿಯ ಮಾಹಿತಿ ಬಹಿರಂಗಗೊಂಡಿದೆ. ಅಲ್ಲದೆ ರಾಹುಲ್ ಗಾಂಧಿ ತ್ವಚೆಗೆ ಏನು ಹಚ್ಚುತ್ತಾರೆ ಎಂಬ ಪ್ರಶ್ನೆ ಕೂಡ ಕೇಳಲಾಗಿದ್ದು, ಅದಕ್ಕೂ ಅವರು ಉತ್ತರ ನೀಡಿದ್ದಾರೆ. ನಾನು ಮುಖಕ್ಕೆ ಯಾವುದೇ ಕ್ರೀಮ್ ಅಥವಾ ಸೋಪ್ ಬಳಸುವುದಿಲ್ಲ. ಮುಖವನ್ನು ಬರೀ ನೀರಿನಿಂದ ತೊಳೆಯುತ್ತೇನೆ ಎಂದಿದ್ದಾರೆ.