ಜೊತೆ ಜೊತೆಯಲಿ ಇರುವೆವು ಹೀಗೆ ಎಂದು.. ಚಿರತೆ, ಕರಿಚಿರತೆ ಜೋಡಿಯ ಪಯಣ ಹೇಗಿದೆ ಗೊತ್ತಾ?
ನಮ್ಮ ದೇಶದಲ್ಲಿ ಸಫಾರಿ ಪ್ರಿಯರಿಗೇನು ಕಡಿಮೆ ಇಲ್ಲ. ಹೀಗಾಗಿ ರಜಾ ಸಿಕ್ಕಾಗ ಅನೇಕರು ಸಫಾರಿಯನ್ನೇ ಆಯ್ದುಕೊಳ್ಳುತ್ತಾರೆ. ಸಫಾರಿ ಹೋಗುತ್ತಿರುವಾಗ ಕ್ಯಾಮರಾ ಕಣ್ಣಿಗೆ ಕಾಡು ಪ್ರಾಣಿಗಳ ಸಾಕಷ್ಟು ದೃಶ್ಯಗಳು ಸಿಗುತ್ತವೆ. ಅವುಗಳ ತುಂಟಾಟದ, ಬೇಟೆಯಾಡುವ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಚೀತಾದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮರಿಯ ಕುತ್ತಿಗೆ ಹಿಡಿದಿತ್ತು ಸಿಂಹ – ಕಂದನನ್ನು ಕಾಪಾಡಿದ್ದೇಗೆ ಗೊತ್ತಾ ಜಿರಾಫೆ?
ಖ್ಯಾತ ಛಾಯಾಗ್ರಾಹಕ ಶಾಜ್ ಜಂಗ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇಂತಹದ್ದೊಂದು ಅಪೂರ್ವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸೆರೆಹಿಡಿದ ದೃಶ್ಯ ಇದು ಎಂದು ಹೇಳಲಾಗುತ್ತದೆ.
ಈ ವಿಡಿಯೋದಲ್ಲಿ ಕರಿಚಿರತೆ ಹಾಗೂ ಚಿರತೆ ಒಟ್ಟಿಗೆ ಹೆಜ್ಜೆಯನ್ನಿಡುತ್ತಾ ಮುಂದೆ ಸಾಗುತ್ತಿರುತ್ತದೆ. ಆದರೆ, ಈ ಜೋಡಿ ಒಂದು ಕ್ಷಣ ಕ್ಯಾಮರಾದತ್ತ ದಿಟ್ಟಿಸಿ ನೋಡುತ್ತವೆ. ಇದಾದ ಬಳಿಕ ತಮ್ಮ ಪಯಣವನ್ನು ಮುಂದುವರಿಸುತ್ತವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಚಿರತೆ ಮತ್ತು ಕರಿಚಿರತೆ ಜೋಡಿಯ ಹೆಸರು ಸಯಾ ಮತ್ತು ಕ್ಲಿಯೋ ಎಂದು ಶಾಜ್ ಶೇರ್ ಮಾಡಿದ ಪೋಸ್ಟ್ ನಲ್ಲಿ ಬರೆದಿದ್ದಾರೆ. ಈ ಅದ್ಬುತ ದೃಶ್ಯವನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
View this post on Instagram