ಹಿಜಾಬ್ ಧರಿಸದೇ ಮನೆಯಿಂದ ಹೊರಗೆ ಕಾಲಿಟ್ರೆ ಹುಷಾರ್.. – ಕಾರು ಜಪ್ತಿ, ಕೆಲಸದಿಂದ ವಜಾ!
ಟೆಹ್ರಾನ್: ಇರಾನ್‌ನಲ್ಲಿ ಕಟ್ಟು ನಿಟ್ಟಾದ ಡ್ರೆಸ್ ಕೋಡ್ ಇದೆ. ಕಳೆದ ಕೆಲವು ದಿನಗಳ ಹಿಂದೆ ಸ್ಕಾರ್ಫ್ ಧರಿಸದೆ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಇರಾನ್ ಚೆಸ್ ಆಟಗಾರ್ತಿ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಈ ವಿವಾದ ತೀವ್ರಗೊಳ್ಳುತ್ತಿದ್ದಂತೆ ಸರಸಾದತ್ ಖಡೆಮಲ್ಶರೀಹ್ ಅವರಿಗೆ ಸ್ಪೇನ್ ದೇಶ ತನ್ನ ಪೌರತ್ವ ನೀಡಿತ್ತು. ಇದೀಗ ಇರಾನ್‌ನಲ್ಲಿ ಹಿಜಾಬ್ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕ್ರಮಗಳನ್ನು ಅನುಸರಿಸುವ ಕಾನೂನು ಜಾರಿಗೆ ಬಂದಿದೆ.
ಹಿಜಾಬ್ ಧರಿಸದ ಮಹಿಳೆಯರಿಗೆ ಸಾವಿರಾರು ಪೊಲೀಸರು ಎಸ್ ಎಂಎಸ್ ಮೂಲಕ, ಕಾರುಗಳನ್ನು ಜಪ್ತಿ ಮಾಡಲಾಗುವುದು, ಕೆಲಸದಿಂದ ತೆಗೆದು ಹಾಕಲಾಗುತ್ತದೆ ಹಾಗೂ ಕಾನೂನಿನ ಮೂಲಕ ಕಠಿಣ ಕ್ರಮಗೊಳ್ಳಲಾಗುತ್ತದೆ ಎನ್ನುವ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು 133,100ಕ್ಕೂ ಹೆಚ್ಚು ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದಾರೆ. ಜೊತೆಗೆ ನಿಗದಿತ ಅವಧಿಯವರೆಗೆ ಕಾರನ್ನು ಬಳಸಬಾರದೆಂದು 2,000 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ.
ಇದನ್ನೂ ಓದಿ: ಕಾಲೇಜಿನ ಅವ್ಯವಸ್ಥೆ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ – ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ವಸ್ತ್ರ ಸಂಹಿತೆ ಉಲ್ಲಂಘಿಸಿದ ಹಲವಾರು ಮಹಿಳೆಯರನ್ನು ವಿಶ್ವವಿದ್ಯಾಲಯಗಳಿಂದ ಅಮಾನತುಗೊಳಿಸಲಾಗಿದೆ. ಪರೀಕ್ಷೆಗಳನ್ನು ಬರೆಯದಂತೆ ನಿರ್ಬಂಧಿಸಲಾಗಿದೆ. ಬ್ಯಾಂಕಿಂಗ್ ಸೇವೆಗಳು ಮತ್ತು ಸಾರ್ವಜನಿಕ ಸಾರಿಗೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಕಡ್ಡಾಯ ಹಿಜಾಬ್ ಧರಿಸುವ ನಿಯಮವನ್ನು ಪಾಲಿಸದ ನೂರಾರು ವ್ಯಾಪಾರಗಳನ್ನು ಬಲವಂತವಾಗಿ ಮುಚ್ಚಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಇರಾನ್‌ನಲ್ಲಿ ನೈತಿಕ ಪೊಲೀಸ್ ಗಿರಿ ಮರಳಿದೆ. ಸಾಮೂಹಿಕ ಕಣ್ಗಾವಲು ತಂತ್ರಜ್ಞಾನವನ್ನು ಬಳಸಿ, ಹಿಜಾಬ್ ಧರಿಸದ ಮಹಿಳೆರನ್ನು ಗುರುತಿಸಲಾಗುತ್ತಿದೆ. ಇಂದಿನ ಈ ದಬ್ಬಾಳಿಕೆ ಅತ್ಯಂತ ಕಠಿಣವಾಗಿದೆ. ಇದನ್ನು ನೋಡಿ ಅಂತರರಾಷ್ಟ್ರೀಯ ಸಮುದಾಯವು ಸುಮ್ಮನೆ ಕೂರಬಾರದೆಂದು” ಆಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಸೆಕ್ರೆಟರಿ ಜನರಲ್ ಆಗ್ನೆಸ್ ಕ್ಯಾಲಮರ್ಡ್ ಹೇಳುತ್ತಾರೆ.