ಅಂಗಡಿಗೆ ಹೋಗಿ ಬರಿಗೈಯಲ್ಲಿ ವಾಪಸ್ ಬಂದ್ರೆ ಹುಷಾರ್..!‌ – ನಿಮಗೂ ಬೀಳುತ್ತೆ 500 ರೂಪಾಯಿ ದಂಡ!

ಅಂಗಡಿಗೆ ಹೋಗಿ ಬರಿಗೈಯಲ್ಲಿ ವಾಪಸ್ ಬಂದ್ರೆ ಹುಷಾರ್..!‌ – ನಿಮಗೂ ಬೀಳುತ್ತೆ 500 ರೂಪಾಯಿ ದಂಡ!

ಅಂಗಡಿಗಳಿಗೆ ತೆರಳಿದಾಗ ಅನೇಕರು ಅಂಗಡಿ ಸಿಬ್ಬಂದಿಗಳಿಗೆ ಅದು ಕೊಡಿ.. ಇದು ಕೊಡಿ.. ಅದು ಬೇಡ.. ಇದು ಇರ್ಲಿ ಅಂತಾ ಗಂಟೆಗಟ್ಟಲೆ ತಲೆ ತಿನ್ನುತ್ತಾರೆ. ಇನ್ನು ಮಹಿಳೆಯರು ಅಂಗಡಿಗೆ ಬಂದರೆ ಕೇಳಬೇಕೆ? ದಿನಪೂರ್ತಿ ಅಂಗಡಿ ಮಾಲೀಕನ ಜೀವ ತಿನ್ನುತ್ತಾರೆ. ಕಡೆಗೆ ಯಾವುದು ಇಷ್ಟ ಆಗಿಲ್ಲ.. ಯಾವುದು ಬೇಡ ಅಂತಾ ಎದ್ದು ಹೊರಟು ಹೋಗುತ್ತಾರೆ. ಇದಕ್ಕಾಗಿಯೇ ಇಲ್ಲೊಬ್ಬ ಅಂಗಡಿ ಮಾಲೀಕ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಆ ಪ್ಲಾನ್‌ ಏನು ಅನ್ನೋದನ್ನು ಕೇಳಿದ್ರೆ ಶಾಕ್‌ ಆಗುತ್ತೆ..

ಕೆಲ ಗ್ರಾಹಕರು ಒಂದು ವಸ್ತು ಖರೀದಿಸಲು ಗಂಟೆಗಟ್ಟಲೆ ಸಮಯ ವ್ಯರ್ಥ ಮಾಡುತ್ತಾರೆ. ಕಡೆಗೆ ಯಾವುದು ಬೇಡ ಅಂತಾ ಬರಿಗೈಯಲ್ಲಿ ಹೊರಟು ಹೋಗುತ್ತಾರೆ. ಸ್ಪೇನ್​ನ ಬಾರ್ಸಿಲೋನಾದಲ್ಲಿ ವ್ಯಾಪರಸ್ಥನೊಬ್ಬ ತಲೆ ತಿನ್ನುವ ಗಿರಾಕಿಗಳಿಂದ ತಪ್ಪಿಸಿಕೊಳ್ಳಲು ಹೊಸ ಪ್ಲಾನ್‌ ಮಾಡಿದ್ದಾರೆ. ಅಂಗಡಿಗೆ ಬಂದು ಬರಿಗೈಯಲ್ಲಿ ಹೋದರೆ 500 ರೂಪಾಯಿ ದಂಡ ತೆರಬೇಕಾಗುತ್ತದೆ ಅಂತಾ ಸೂಚನಾ ಫಲಕ ಹಾಕಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಮಣಿಪುರದಲ್ಲಿ ದೇಶವೇ ತಲೆತಗ್ಗಿಸುವ ಪೈಶಾಚಿಕ ಕೃತ್ಯ – ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ..!

ಸ್ಪೇನ್​ನ ಬಾರ್ಸಿಲೋನಾದಲ್ಲಿ ಕಿರಾಣಿ ಅಂಗಡಿಯೊಂದಿದೆ. ಕ್ವಿವಿಯರ್ಸ್ ಮುರ್ರಿಯಾ ಎಂಬ ವ್ಯಕ್ತಿ ಈ ಕಿರಾಣಿ ಅಂಗಡಿಯನ್ನು 1898ರಲ್ಲಿ ಪ್ರಾರಂಭಿಸಿದ್ದಾನೆ. ಈ ಅಂಗಡಿಯನ್ನು ಚೆನ್ನಾಗಿ ಅಲಂಕರಿಸಲಾಗಿದೆ. ಪ್ರತಿ ವರ್ಷ ಈ ಅಂಗಡಿಯನ್ನು ನೋಡಲು ಜನರು ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಹೆಚ್ಚಿನವರು ಈ ಅಂಗಡಿಯ ಒಳಭಾಗವನ್ನು ನೋಡಿ ನಂತರ ಹೊರಡುತ್ತಾರೆ. ಅವರು ಏನನ್ನೂ ಮಾತನಾಡುವುದಿಲ್ಲ ಅಥವಾ ಏನನ್ನೂ ತೆಗೆದುಕೊಳ್ಳುವುದಿಲ್ಲ. ಜನರು ಪರಸ್ಪರ ಫೋಟೋ-ಸೆಲ್ಫಿ ತೆಗೆದುಕೊಂಡು ಅಲ್ಲಿಂದ ಹೊರಡುತ್ತಾರೆ. ಇದೆಲ್ಲದರಿಂದ ಬೇಸತ್ತ ಅಂಗಡಿಯವರು ಇದಕ್ಕೆಲ್ಲ ಪರಿಹಾರ ಕಂಡುಕೊಂಡಿದ್ದಾರೆ.

ಈ ಅಂಗಡಿಯನ್ನು ಪ್ರಸ್ತುತ ಟೋನಿ ಮರಿನೋ ನಡೆಸುತ್ತಿದ್ದಾರೆ. ಜನರು ಅಂಗಡಿಗೆ ಬಂದು ಹಾಗೆ ಸುಮ್ಮನೆ ಹೋಗುತ್ತಿರುವುದಕ್ಕೆ ಕಡಿವಾಣ ಹಾಕಲು ದಂಡ ಹಾಕುವುದಾಗಿ ಹೇಳಿದ್ದಾರೆ. ಜನರಿಗೆ ತಮಾಷೆಯಂತೆ ಕಂಡರೂ ಇಲ್ಲಿಗೆ ಪ್ರವಾಸಿಗರು ಬರುವುದರಿಂದ ದುಡಿಯುವ ಜನರು ತೊಂದರೆ ಅನುಭವಿಸುವಂತಾಗಿದೆ. ಅದಕ್ಕೇ ಅಂಗಡಿಯೊಳಗೆ ಒಂದು ಬೋರ್ಡ್ ಇಟ್ಟು ಬರೆದು ‘ನೋಡಲು ಮಾತ್ರ ಒಳಗೆ ಬರಬೇಕಾದರೆ 5 ಯೂರೋ (461 ರೂಪಾಯಿ) ಕೊಡಬೇಕು. ಅಂಗಡಿಗೆ ಬರುವ ಪ್ರತಿಯೊಬ್ಬರಿಗೂ ಈ ಶುಲ್ಕ ವಿಧಿಸಲಾಗುವುದು ಎಂದು ಹಾಕಿದ್ದಾರೆ. ಈ ಪೋಸ್ಟ್​​ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

suddiyaana