ಹೆಚ್ಚು ಹೊತ್ತು ಎಸಿ ಕೆಳಗೆ ಕೂರುವ ಮುನ್ನ ಎಚ್ಚರ! – 5 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಏನಾಗುತ್ತೆ?

ಹೆಚ್ಚು ಹೊತ್ತು ಎಸಿ ಕೆಳಗೆ ಕೂರುವ ಮುನ್ನ ಎಚ್ಚರ! – 5 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಏನಾಗುತ್ತೆ?

ಈಗಿನ ಜಮಾನದವರಿಗೆ ಎಸಿ ಬೇಕೇ ಬೇಕು. ಆಫೀಸಿನಲ್ಲಿ, ಕಾರಿನಲ್ಲಿ, ಮನೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಎಸಿ ಬಳಕೆ ಸಾಮಾನ್ಯವಾಗಿದೆ. ಆದರೆ , ಆ ಕ್ಷಣಕ್ಕೆ ಹಿತವೆನಿಸುವ ಕೃತಕ ತಾಪಮಾನ ಯಂತ್ರ ಎಷ್ಟು ಅಪಾಯಕಾರಿ ಎಂಬುದು ಅನೇಕರಿಗೆ ತಿಳಿದಿಲ್ಲ. ನಿಮಗೆ ಗೊತ್ತಿಲ್ಲದೆ ಅನೇಕ ರೋಗಗಳು ನಿಮ್ಮನ್ನು ಆವರಿಸಿಕೊಳ್ಳುತ್ತವೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡುತ್ತಿದ್ದೀರಾ?

ತುಂಬಾ ಹೊತ್ತು ಎ.ಸಿ. ಕೆಳಗೆ ಕುಳಿತುಕೊಂಡಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗುತ್ತೆ. ತಜ್ಞರ ಪ್ರಕಾರ ದಿನದಲ್ಲಿ ಐದು ಗಂಟೆಗಿಂತ ಹೆಚ್ಚು ಎ.ಸಿ. ಕೆಳಗೆ ಕುಳಿತುಕೊಂಡ್ರೆ ಸೈನಸ್ ಸೋಂಕು ಕಾಡಲು ಶುರುವಾಗುತ್ತದೆ. ಈಗಾಗಲೇ ಒಣ ಕಣ್ಣುಗಳ ಸಮಸ್ಯೆ ಹೊಂದಿದ್ದರೆ, ಹೆಚ್ಚು ಕಾಲ ಎಸಿಯಲ್ಲಿ  ಉರಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತೆ. ಇನ್ನು ರೂಂ, ಕಾರಿನಲ್ಲಿ AC ಹಾಕಿ ಹೆಚ್ಚು ಹೊತ್ತು ಕುಳಿತುಕೊಳ್ಳುವ ಜನರಲ್ಲಿ ಒಣ ಮತ್ತು ತುರಿಕೆ ಚರ್ಮ ಉಂಟಾಗುತ್ತದೆ. ಬಳಿಕ ಅಲರ್ಜಿ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು.

ಎಸಿಯಲ್ಲಿ ದೀರ್ಘಕಾಲ ಉಳಿಯುವುದರಿಂದ ಮೂಗು, ಗಂಟಲು ಮತ್ತು ಕಣ್ಣುಗಳಲ್ಲಿ ಉಸಿರಾಟದ ತೊಂದರೆ ಉಂಟಾಗುತ್ತದೆ. ಅಸ್ತಮಾ ಅಥವಾ ಅಲರ್ಜಿ ಇರುವವರಲ್ಲಿ AC ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಎಸಿಯನ್ನು ಹೆಚ್ಚಾಗಿ ಬಳಸುವುದರಿಂದ ನಿರ್ಜಲೀಕರಣ, ತಲೆನೋವು ಮತ್ತು ಮೈಗ್ರೇನ್‌ಗೆ ಕಾರಣವಾಗಬಹುದು. ಹೀಗಾಗಿ ಎಸಿ ಕೆಳಗೆ ಕೂರುವುದನ್ನು ಆದಷ್ಟು ಅವಾಯ್ಡ್ ಮಾಡೋದು ಉತ್ತಮ.

Shwetha M