‘ವೈರಸ್ ಬಗ್ಗೆ ಎಚ್ಚರಿಕೆ ಇರಲಿ, ಆತಂಕ ಬೇಡ’ – ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

‘ವೈರಸ್ ಬಗ್ಗೆ ಎಚ್ಚರಿಕೆ ಇರಲಿ, ಆತಂಕ ಬೇಡ’ – ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

ಚೀನಾದಲ್ಲಿ ಭಯಾನಕವಾಗಿ ಹರಡುತ್ತಿರುವ ಬಿಎಫ್​-7 ವೈರಸ್ ಬಗ್ಗೆ ಭಾರತದಲ್ಲಿ ಆತಂಕ ಪಡೋ ಅಗತ್ಯ ಇಲ್ಲ ಅಂತಾ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ. ಯಾವುದೇ ಕಾರಣಕ್ಕೂ ಭಾರತ ಮತ್ತೊಂದು ಚೀನಾ ಆಗೋದಿಲ್ಲ. ವೈರಸ್ ವೇಗವಾಗಿ ಹರಡುತ್ತೆ ಅನ್ನೋದು ಬಿಟ್ರೆ ಅದ್ರಿಂದ ಅಂಥಾ ಜೀವ ಹಾನಿ ಆಗಲ್ಲ. ಅದ್ರಲ್ಲೂ ಭಾರತದಲ್ಲಿ ಈಗಾಗ್ಲೇ ಪರಿಣಾಮಕಾರಿಯಾಗಿ ವ್ಯಾಕ್ಸಿನ್ ನೀಡಲಾಗಿದೆ. ಜನರು ಬೂಸ್ಟರ್ ಡೋಸ್ ಕೂಡ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನರ ದೇಹದಲ್ಲಿ ಈಗ ಹೈಬ್ರಿಡ್ ರೋಗ ನಿರೋಧಕ ಶಕ್ತಿ ಇದೆ. ಹೆಚ್ಚಿನ ಇಮ್ಯುನಿಟಿಯನ್ನ ಹೊಂದಿದ್ದಾರೆ. ಇದ್ರ ಜೊತೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೂಡ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಕೂಡ ಮಾಡಲಾಗ್ತಿದೆ. ಹೀಗಾಗಿ ವೈರಸ್ ಬಗ್ಗೆ ಎಚ್ಚರಿಕೆ ಇರಲಿ, ಆತಂಕ ಬೇಡ ಅಂತಾ ಐಸಿಎಂಆರ್​ ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ:  ಚೀನಾದಲ್ಲಿ ಒಂದೇ ದಿನ 3.7 ಕೋಟಿ ಪಾಸಿಟಿವ್ ಕೇಸ್

ಇನ್ನು ಚೀನಾ ವೈರಸ್​ ಬಿಎಫ್​-7 ಭೀತಿ ಹಿನ್ನೆಲೆಯಲ್ಲಿ ಭಾರತದಲ್ಲಿ ನಿಯಮಗಳನ್ನ ಮತ್ತಷ್ಟು ಬಿಗಿಪಡಿಸಲಾಗ್ತಿದೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್​ಕಾಂಗ್ ಮತ್ತು ಥಾಯ್​ಲ್ಯಾಂಡ್​ನಿಂದ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ RTPCR​ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ಐದು ರಾಷ್ಟ್ರಗಳ ಪ್ರಯಾಣಿಕರಿಗೆ ಇನ್ಮುಂದೆ RTPCR​ ಟೆಸ್ಟ್ ಕಡ್ಡಾಯ. ಒಂದು ವೇಳೆ ಪಾಸಿಟಿವ್ ಬಂದಿದ್ದೇ ಆದಲ್ಲಿ ಅಂಥವರನ್ನ ಕ್ವಾರಂಟೈನ್ ಮಾಡಬೇಕು ಅಂತಾ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಸೂಚನೆ ಕೊಟ್ಟಿದ್ದಾರೆ.

suddiyaana