ನೀವು ಬಳಸುವ ಅಡುಗೆ ಎಣ್ಣೆ ಬಗ್ಗೆ ಎಚ್ಚರ! – ಜಾಹೀರಾತಿಗೆ ಮಾರು ಹೋದರೆ ಕಾದಿದೆ ಅಪಾಯ – ನಿಮಗಾಗಿ ಇಲ್ಲಿದೆ ವಿಸ್ತ್ರತ ಮಾಹಿತಿ..!

ನೀವು ಬಳಸುವ ಅಡುಗೆ ಎಣ್ಣೆ ಬಗ್ಗೆ ಎಚ್ಚರ! – ಜಾಹೀರಾತಿಗೆ ಮಾರು ಹೋದರೆ ಕಾದಿದೆ ಅಪಾಯ – ನಿಮಗಾಗಿ ಇಲ್ಲಿದೆ ವಿಸ್ತ್ರತ ಮಾಹಿತಿ..!

ಅದೊಂದು ಕಾಲವಿತ್ತು. ಕಾಯಿಲೆ ಒಂದಿಷ್ಟು ವಯಸ್ಸಾದ ನಂತರ ಕಾಡೋ ಸಮಸ್ಯೆ ಅಂತಾ. ಹಾಗಾಗಿ ಯುವ ಜನಾಂಗ ಅರೋಗ್ಯದ ವಿಷಯದಲ್ಲಿ ಅಭದ್ರತೆಯನ್ನ ಎದುರಿಸಬೇಕಾಗಿರಲಿಲ್ಲ. ಆದರೆ ಕಾಲ ಈಗ ಪೂರ್ತಿಯಾಗಿ ಬದಲಾಗಿ ಬಿಟ್ಟಿದೆ. ಕಾಯಿಲೆ ಅನ್ನೋದು ಯಾವಾಗ, ಯಾರಿಗೇ ಬೇಕಾದರೂ ಬರಬಹುದು. ಕಾಯಿಲೆಗೆ ವಯಸ್ಸಿನ ಬೇಧವಿಲ್ಲ ಅಂತಾರೆ. ಶತಮಾನದಿಂದಿಚೆಗೆ ಮನುಷ್ಯ ತಂತ್ರಜ್ಞಾನದಲ್ಲಿ ಆವಿಷ್ಕಾರ ಮಾಡುತ್ತಿದ್ದರೆ ಮತ್ತೊಂದು ಕಡೆ ಆತ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಸೋಲುತ್ತಿದಾನೆ ಅನ್ನೋದು ವಾಸ್ತವ. ಆಹಾರ ವಿಜ್ಞಾನ, nutrition science ಕುರಿತಾಗಿ ಮನುಷ್ಯನಿಗೆ ಹೆಚ್ಚೇನೂ ಅರಿವೂ ಇರಲಿಲ್ಲ. ಆದರೂ ಮನುಷ್ಯ ಗಟ್ಟಿಯಾಗಿಯೇ ಇದ್ದ. ಆದರೆ ಇವತ್ತು ನಾವು ಹೆಚ್ಚಾಗಿ ತಿಳಿದುಕೊಂಡಿದ್ದೇವೆ. ಪ್ರಸ್ತುತ ಸಮಾಜ ಆರೋಗ್ಯದ ಬಗ್ಗೆ ಜಾಸ್ತಿ ಜಾಗೃತಿ ವಹಿಸುತ್ತಿದೆ. ಆದರೂ,  ವೈದ್ಯಕೀಯ ಕ್ಷೇತ್ರಕ್ಕೆ ಸವಾಲು ಹಾಕೋ ಅಂತಹ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಮಾಲ್ಡೀವ್ಸ್ ನಲ್ಲಿ ‘ಇಂಡಿಯಾ ಔಟ್’ ಅಭಿಯಾನ – ಭಾರತದ ನೆರವನ್ನೇ ಮರೆತರಾ ನೂತನ ಅಧ್ಯಕ್ಷ?

ಸಮಾಜ ಎಷ್ಟೇ ಮುಂದುವರೆದರೂ ಆರೋಗ್ಯ ಎಂದೂ ಬಂದಾಗ ಅಭದ್ರತೆಯನ್ನ ಎದುರಿಸುತ್ತಾನೇ ಇದ್ದೇವೆ.. ನಾವು ತಿನ್ನೋ ಆಹಾರವೇ ನಮ್ಮನ್ನ ಕೊಲ್ಲುತ್ತಿದೆ ಅನ್ನೋದು ನಮಗೆ ಶಾಕಿಂಗ್ ಅನ್ನಿಸಿದ್ರೂ ಅದೂ ವಾಸ್ತವವೇ. ದಶಕಗಳಿಂದ ಬೊಜ್ಜು, ಮದುಮೇಹ, ಹೃದ್ರೋಗ, ಕ್ಯಾನ್ಸರ್ ನಂತಹ ಕಾಯಿಲೆಗಳು ಏರುತ್ತಿವೆ. ಯಾಕಂದ್ರೆ ನಾವು ಕರಿದ ಆಹಾರಗಳ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಕರಿದ ಚಿಕನ್, ಫ್ರೆಂಚ್ ಫ್ರೈಸ್, ಪಿಜ್ಜಾ, ಹೌದು..ಇದೂ ನಮ್ಮ ಇವತ್ತಿನ ಆಹಾರ ಜಗತ್ತು.  ನಿಮ್ಮ ಹೃದಯಯವನ್ನ ಕಾಪಾಡುತ್ತೆ, ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ, ಹೃದ್ರೋಗ ದಿಂದ ಕಾಪಾಡುತ್ತೆ ಅನ್ನೋ ಅಬ್ಬರದ ಪ್ರಚಾರದಿಂದ ನಮ್ಮನ್ನ ಆಕರ್ಷಿಸುತ್ತಾ ಉಪಯೋಗಿಸುವ ಸಂಸ್ಕರಿಸಿದ ಎಣ್ಣೆಗಳು ಅಂದರೆ refined cooking oil ಹೊಸ ಹೊಸ ರೋಗಗಳಿಗೆ ಕಾರಣವಾಗುತ್ತೆ ಅಂತಾ ಹೇಳಿದ್ರೆ ಒಪ್ಕೋತೀರಾ..! ಯಾಕಂದ್ರೆ ಆಕರ್ಷಕ ಜಾಹೀರಾತುಗಳೊಂದಿಗೆ ಅಗ್ಗದ ಬೆಲೆಯೊಂದಿಗೆ ಮಾರಾಟವಾಗುವ refined oil ಇವತ್ತು ಮನುಷ್ಯನಿಗೆ ಅತ್ಯಂತ ಹತ್ತಿರವಾಗಿದೆ. ಹಾಗಾಗಿ  ಮಾರುಕಟ್ಟೆಯಲ್ಲಿ ಅಬ್ಬರದಿಂದ ಓಡಾಡುತ್ತಿರುವ refined oil ನ ಕಹಿ ಸತ್ಯವನ್ನ ಒಪ್ಪಿಕೊಳ್ಳೋದೇನೋ ಅಷ್ಟೊಂದು ಸುಲಭವಲ್ಲ. ನಮ್ಮ ಮೆಚ್ಚಿನ ಪ್ಯಾಕ್ ಮಾಡಲಾದ ಆಹಾರಗಳಿಂದ ಹಿಡಿದು ಫೈವ್ ಸ್ಟಾರ್ ರೆಸ್ಟೋರೆಂಟ್‌ಗಳವರೆಗೆ, ಕಡೆಯದಾಗಿ ಬಹುತೇಕ ಎಲ್ಲಾ ಮನೆಗಳಲ್ಲಿ ಪ್ರತಿ ದಿನ ಉಪಯೋಗಿಸೋ cooking refined oil ಇವತ್ತು ನಮ್ಮ ಆರೋಗ್ಯದ ಪರಮ ಶತ್ರು.

ಅಡುಗೆ ಎಣ್ಣೆಯ ಹುಟ್ಟು ಹೇಗಿತ್ತು..!

ಸುಮಾರು ಮೂರು ಲಕ್ಷ ವರುಷಗಳ ಹಿಂದೆ ಮನುಷ್ಯ ಬೆಂಕಿಯನ್ನು ಹೇಗೆ ಉತ್ಪಾದಿಸಬೇಕೆಂದು ಕಲಿತಾಗ, ಜನರು ಅಡುಗೆ ಉದ್ದೇಶಕ್ಕಾಗಿ ಪ್ರಾಣಿಗಳ ಕೊಬ್ಬನ್ನು ಎಣ್ಣೆಯಾಗಿ ಬಳಸುವ ಸಮಯ ಅದಾಗಿತ್ತು. ಮನುಷ್ಯನು ಪ್ರಾಣಿಗಳ ಮಾಂಸವನ್ನು ಬೆಂಕಿಯ ಅಡಿಯಲ್ಲಿ ಬೇಯಿಸಲು ಪ್ರಾರಂಭಿಸಿದಾಗ  ಎಣ್ಣೆಯು ನೈಸರ್ಗಿಕವಾಗಿ ಅದರಿಂದ ಹೊರಬರುತ್ತದೆ. ಈ ಮೂಲಕ ಎಣ್ಣೆಯೂ ಪ್ರಪಂಚಕ್ಕೆ ಪರಿಚಯವಾಗುತ್ತದೆ..ಹಾಗಾಗಿ ಮನುಷ್ಯ ಮೊಟ್ಟ ಮೊದಲ ಬಾರಿಗೆ ಎಣ್ಣೆಯಾಗಿ ಅಡುಗೆಗೆ ಬಳಸಿದ್ದೇ ಪ್ರಾಣಿಗಳ ಕೊಬ್ಬನ್ನು.  ಮನುಷ್ಯನ ವಿಕಸನ ದ ಆರಂಭದಿಂದಲೂ ಪ್ರಾಣಿಗಳಿಂದ ಸ್ಯಾಚುರೇಟೆಡ್ ಕೊಬ್ಬಿನೊಂದಿಗೆ ಅಡುಗೆ ಮಾಡಲು ಬಳಸುತ್ತಿದ್ದ. ನಂತರ ನಿಧಾನವಾಗಿ vegetable oil ಪ್ರಾರಂಭವಾಗಿತ್ತು. ಭಾರತದಲ್ಲಿ ಮುಖ್ಯವಾಗಿ ಎರಡು ರೀತಿಯ ಅಡುಗೆ ತೈಲಗಳಿತ್ತು. ಒಂದು ದೇಸಿ ತುಪ್ಪ.. ಇನ್ನೊಂದು ಆಯಾಯ ರಾಜ್ಯಗಳ ಸ್ಥಳೀಯ ಎಣ್ಣೆ ಕಾಳುಗಳಿಂದ ಗಾಣದ ಮೂಲಕ ಹೊರತೆಗೆಯುತ್ತಿದ್ದ ಶುದ್ಧ ಅಡುಗೆ ತೈಲಗಳು..ಉತ್ತರ ಮತ್ತು ಪೂರ್ವ ಭಾರತದಲ್ಲಿ ಸಾಸಿವೆ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕಡಲೆಕಾಯಿ; ತಮಿಳುನಾಡಿನಲ್ಲಿ ಎಳ್ಳು ಮತ್ತು ಕಡಲೆ, ಮತ್ತು ಕೇರಳದಲ್ಲಿ ತೆಂಗಿನಕಾಯಿ ಎಣ್ಣೆ ಹೀಗೆ..19 ನೇ ಶತಮಾನದಲ್ಲಿ ಇವಿಷ್ಟೇ ಎಣ್ಣೆಗಳಿದ್ದವು ಮತ್ತೂ ಬೀಜಗಳಿಂದ ಎಣ್ಣೆಯನ್ನು ಬಳಸುವವರೆಗೆ  ಹೃದಯರಕ್ತನಾಳ ಕಾಯಿಲೆಯು, ಕ್ಯಾನ್ಸರ್ ನಂತಹ ಕಾಯಿಲೆಗಳು ಅಸ್ತಿತ್ವದಲ್ಲಿಲ್ಲ ಎಂಬುದೇ ಆಶ್ಚರ್ಯಕರ ವಿಷಯ..ಆದರೆ ಮುಂದೆ ಎಣ್ಣೆ ಉದ್ಯಮ ಬೆಳೆಯತೊಡಗಿತ್ತು.

ಹೊಸ ಹೊಸ ಎಣ್ಣೆಗಳು ಹುಟ್ಟಿಕೊಂಡವು. ಈ ಸ್ಟೋರಿ ಎರಡು ಉದ್ಯಮಿಗಳ ಇಂಡಸ್ಟ್ರಿ made vegetable oil ಗಳು ಮುಂದೆ ಹೇಗೆ ಪ್ರತಿ ಮನೆಯ ಅಡುಗೆ ಮನೆಗೆ ಬಂದು ಸೇರಿತು.. ಈ ಕುರಿತಾದ hidden ಹಿಸ್ಟರಿ ಇಲ್ಲಿದೆ.

20 ನೇ ಶತಮಾನ.. ಅಡುಗೆ ತೈಲದಲ್ಲಿ ಕೈಗಾರಿಕ ಕ್ರಾಂತಿ.!

20 ನೇ ಶತಮಾನದ ಆರಂಭದವರೆಗೂ ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಆಯಿಲ್ ಹೀಗೆ ಕೆಲವೇ ಕೆಲವು ಸಾಂಪ್ರದಾಯಿಕ ಎಣ್ಣೆಗಳಿದ್ದವು.. ಇವುಗಳಲ್ಲಿ ಸ್ಯಾಚೂರೇಟೆಡ್ ಫ್ಯಾಟಿ ಆಸಿಡ್ (saturated fatty acid) ಇದ್ದೂ ಇದೂ ಮನುಷ್ಯನ ದೇಹದ ಬೆಳವಣಿಗೆಗೆ ಬೇಕಾಗುವ ಮುಖ್ಯವಾದ ಅಂಶವಾಗಿದೆ.. ಆದರೆ  1800 ರ ಅವಧಿಯಲ್ಲಿ , ಇಬ್ಬರು ಉದ್ಯಮಿಗಳು ಹೊಸ ಅಡುಗೆ ಎಣ್ಣೆಯನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಆಹಾರ ಜಗತ್ತು ದೊಡ್ಡ ಉದ್ಯಮದಂತೆ ಬೆಳೆಯತೊಡಗಿತು. 1800 ರ ಸಮಯ, ಅಮೇರಿಕಾ ದ ಸಿನ್ಸಿನಾಟಿ ಎಂಬ ನಗರದಿಂದ ಇದೂ ಶುರುವಾಗುತ್ತೆ. ಸಿನ್ಸಿನಾಟಿ ನಗರವನ್ನ ಅಂದು ಪೋರ್ಕೊಪೊಲಿಸ್ ಎಂದು ಕರೆಯಲಾಗುತ್ತಿತ್ತು ಏಕೆಂದರೆ ಹಂದಿ ಸಾಕಾಣಿಕೆ ಮತ್ತು ಅದರ ಉಪ ಉತ್ಪನ್ನಗಳಾದ ಸೋಪ್ ಮತ್ತೂ ಮೇಣದ ಬತ್ತಿಯ ಕಾರಣದಿಂದಾಗಿ ಅದನ್ನ ಪೋರ್ಕೊಪೊಲಿಸ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಆ ಸಮಯದಲ್ಲೇ ವಿಲಿಯಂ ಪ್ರಾಕ್ಟರ್ ಮತ್ತು ಜೇಮ್ಸ್ ಗ್ಯಾಂಬಲ್ ಯುರೋಪ್ನಿಂದ ಸಿನ್ಸಿನಾಟಿಗೆ ತೆರಳುತ್ತಾರೆ.  ಕಂಪನಿಯೊಂದನ್ನ ಪ್ರಾರಂಭಿಸುತ್ತಾರೆ. ಇದೂ ಮುಂದೆ ಅಡುಗೆ ಎಣ್ಣೆಯಲ್ಲಿ ಕೈಗಾರಿಕಾ ಕ್ರಾಂತಿಯಾಗೋದಿಕ್ಕೆ  ದೊಡ್ಡ ಟರ್ನಿಂಗ್ ಪಾಯಿಂಟ್ ಆಗುತ್ತೆ. ಇಲ್ಲಿ ಹಂದಿ ಮಾಂಸದ ಕೊಬ್ಬಿನಿಂದ ಸಾಬೂನುಗಳನ್ನ, ಮೊಂಬತ್ತಿಗಳನ್ನ ತಯಾರಿಸುತ್ತಿದ್ದರು. ಉದ್ಯಮವು ಬೆಳೆಯತೊಡಗಿತ್ತು. ಹಾಗೇ ಪ್ರಾಣಿಗಳ ಕೊಬ್ಬಿನ ಬದಲಿಗೆ ಸಾಬೂನು ತಯಾರಿಸಲು ತೆಂಗಿನಕಾಯಿ ಮತ್ತು ತಾಳೆ ಎಣ್ಣೆಗಳನ್ನ ಬಳಸಲು ಪ್ರಾರಂಭಿಸುತ್ತಾರೆ. ಇದು ಸೋಪ್ ಮುಳುಗುವ ಬದಲು ನೀರಿನಲ್ಲಿ ತೇಲುವಂತೆ ಮಾಡಿತು. ಮುಂದೆ ಸಾಬೂನಿನ ಕಚ್ಚಾ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಲು, ಪ್ರಾಕ್ಟರ್ & ಗ್ಯಾಂಬಲ್  ಹತ್ತಿ ಬೀಜದ ಎಣ್ಣೆಯನ್ನು ಬಳಸಲು ಪ್ರಾರಂಭಿಸಿತು. ಆ ಸಮಯದ ವರೆಗೆ , ಹತ್ತಿ ಬೀಜದ ಎಣ್ಣೆಯನ್ನು ಹತ್ತಿ ಕೃಷಿಯಿಂದ ಬಂದ ತ್ಯಾಜ್ಯವೆಂದು ಪರಿಗಣಿಸಲಾಗಿತ್ತು. ಜಾನುವಾರುಗಳಿಗೆ ವಿಷಕಾರಿಯಾಗಿತ್ತು. ಆದರೆ ಮುಂದೆ ಹತ್ತಿ ಬೀಜದ ಎಣ್ಣೆ ಯನ್ನ ಸಂಸ್ಕರಿಸಿ ಅಡುಗೆ ಮನೆಯ vegetable oil ಆಗಿ ತಯಾರಿಸಲು ಆರಂಭಿಸಿದರು..1860 ರ ಇಸವಿಯಲ್ಲಿ ತ್ಯಾಜ್ಯ ವೆಂದು ಕರೆಯಾಲಾಗುತ್ತಿದ್ದ ಜಾನುವಾರುಗಳಿಗೆ ವಿಷಕಾರಿಯಾಗಿದ್ದ ಹತ್ತಿ ಬೀಜದ ಎಣ್ಣೆ ಮುಂದೆ 1890 ರ ಅವಧಿಯಲ್ಲಿ ಅಮೇರಿಕಾ ದ ಪ್ರತಿ ಮನೆಯ ಅಡುಗೆ ಮನೆಯಲ್ಲಿತ್ತು. ಪ್ರಾಕ್ಟರ್ & ಗ್ಯಾಂಬಲ್ ತಮ್ಮ ಹೊಸ ಅಡುಗೆ ಎಣ್ಣೆಯನ್ನು “ಕ್ರಿಸ್ಕೊ” ಎಂದು ಕರೆದರು. ಪ್ರಾಣಿಗಳ ಕೊಬ್ಬಿನೊಂದಿಗೆ ಅಡುಗೆ ಮಾಡುವುದನ್ನು ಬಿಟ್ಟು ಈ ಹತ್ತಿ ತ್ಯಾಜ್ಯಕ್ಕೆ ಬದಲಾಯಿಸುವಂತೆ ಜನರನ್ನು ಮನವೊಲಿಸಲು ಆಕರ್ಷಕ ಜಾಹೀರಾತು ಗಳೊಂದಿಗೆ ಪ್ರಚಾರ ಮಾಡತೊಡಗಿದರು.

ಪೌಷ್ಟಿಕತಜ್ಞರು, ದಿನಸಿ ವ್ಯಾಪಾರಿಗಳು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ತಾಜಾ ಕ್ರಿಸ್ಕೋದಲ್ಲಿ ಬೇಯಿಸಿದ ಆಹಾರಗಳ ಮಾದರಿಗಳನ್ನು  ನೀಡಲಾಯಿತು. ಈ ಮೂಲಕ ಮಾರುಕಟ್ಟೆಯ ಪ್ರಚಾರವನ್ನ ಕೂಡಾ ಆರಂಭಿಸಿತ್ತು. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ನಿಂದ ಹಿಡಿದು, ವೈದ್ಯರು, ಪೌಷ್ಟಿಕ ತಜ್ಞರು ಸಸ್ಯ ಜನ್ಯ ಎಣ್ಣೆಗಳನ್ನ recommend ಮಾಡತೊಡಗಿದರು. ಪ್ರಾಕ್ಟರ್ & ಗ್ಯಾಂಬಲ್ ಕಂಪನಿ ಹತ್ತಿ ಎಣ್ಣೆ ಯಿಂದ ಅಡುಗೆ ಪುಸ್ತಕ ವನ್ನ ರಚಿಸುವರೆಗೂ ಹೋದರು. ಕ್ರಿಸ್ಕೋ ಎಣ್ಣೆ ಗೆ ಬದಲಾಯಿಸಲು ಸಾರ್ವಜನಿಕರನ್ನು ಮನವೊಲಿಸುವ ಪ್ರಮುಖ ಅಸ್ತ್ರಗಳೆಂದರೆ ಕಡಿಮೆ ಬೆಲೆ ಮತ್ತು ಆಹಾರ ಪ್ಯಾಕೇಜಿಂಗ್‌ನಲ್ಲಿರೋ ಅನಿಯಂತ್ರಿತ health claims. ಈ ಉತ್ಪನ್ನವು ಪ್ರಾಣಿಗಳ ಕೊಬ್ಬುಗಳಿಗಿಂತ ಹೆಚ್ಚು ಆರೋಗ್ಯಕರ ಮತ್ತು ಉತ್ತಮವಾಗಿದೆ ಎಂದೂ ನಂಬಿಸಲಾಗಿತ್ತು. ಇದೂ ಆರೋಗ್ಯಕರ ಹೃದಯಕ್ಕೆ ಅಗತ್ಯ ಎಂದೂ ಪ್ರತಿಪಾದಿಸತೊಡಗಿದವು. ಇದೂ ಮುಂದೆ saturated fatty acids ಗಳು ಇರುವಂತಹ ಸಂಪ್ರದಾಯಿಕ ಎಣ್ಣೆಗಳಾದ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಮುಂತಾದವುಗಳನ್ನ ದೂರವಿಡುವಂತಹ, ಧೂಷಿಸುವಂತಹ ಸಂದರ್ಭವನ್ನ ಸೃಷ್ಟಿ ಮಾಡುತ್ತದೆ. ಮುಂದೆ ಇದೇ ಕಂಪನಿಯೂ ಹಲವಾರು ಸಸ್ಯ ಜನ್ಯ ಎಣ್ಣೆಗಳನ್ನ ಪ್ರಾರಂಭಿಸುತ್ತದೆ. ಸೂರ್ಯಕಾಂತಿ, ಕಸುಬೆ, ಜೋಳ , ಅಕ್ಕಿ ಹೊಟ್ಟಿನಿಂದಲೂ ಎಣ್ಣೆ ಹೊರ ತೆಗೆದು ಸಂಸ್ಕರಿಸುತ್ತಾರೆ. ಇಂತಹ ಬೀಜಗಳಿಂದ ಎಣ್ಣೆಯನ್ನ ಹೊರ ತೆಗೆಯೋದು ಅಷ್ಟೇನೂ ಸುಲಭವಲ್ಲ. ಅಲ್ಲಿ ಪೆಟ್ರೋಲಿಯಂ ರಾಸಾಯನಿಕ ಗಳನ್ನು ಬಳಸಬೇಕಾಗುತ್ತದೆ.

ಸಂಸ್ಕರಿಸಿದ ಎಣ್ಣೆಗಳನ್ನ ಹೇಗೆ ಹೊರತೆಗೆಯಲಾಗುತ್ತೆ..?

ಸಂಸ್ಕರಿಸಿದ ಎಣ್ಣೆಗಳನ್ನ ಅತೀ ಹೆಚ್ಚಿನ temperature ನಲ್ಲಿ ಬೇಯಿಸಿ ಬಳಿಕ ಹೆಕ್ಸಾನ್ ನಂತಹ ರಾಸಾಯನಿಕ ವನ್ನ ಸೇರಿಸಿ ಎಣ್ಣೆಯನ್ನ ಪ್ರತ್ಯೇಕ ಗೊಳಿಸಲಾಗುತ್ತದೆ. ನಂತರ ತೈಲವನ್ನು ಬಿಳುಪುಗೊಳಿಸಲಾಗುತ್ತದೆ. ತೈಲವನ್ನು ಬಿಳುಪುಗೊಳಿಸಲು bleaching ನಂತಹ ರಾಸಾಯನಿಕಗಳನ್ನ ಬಳಸಬೇಕಾಗುತ್ತದೆ..ಅದರ ವಾಸನೆಯನ್ನು ಕೂಡಾ ಹೊರತೆಗೆದು , ಮಾರಾಟ ಮಾಡಲು ಪ್ಯಾಕ್ ಮಾಡಲಾಗುತ್ತದೆ. ಈ ಸಂಸ್ಕರಿಸಿದ ಎಣ್ಣೆಯಲ್ಲಿ ಇರೋದು ಒಮೆಗಾ -6 ಕೊಬ್ಬುಗಳು. ಹಾಗೇ ಇವುಗಳನ್ನ ಹೆಚ್ಚಿನ temperature ನಲ್ಲಿ ಸಂಸ್ಕರಿಸಿದರಿಂದ ಇವುಗಳಿಂದ ಟ್ರಾನ್ಸ್ ಕೊಬ್ಬುಗಳು ಬಿಡುಗಡೆ ಗೊಳ್ಳುತ್ತವೆ.. ಈ trans fatty acids ಮನುಷ್ಯನ ದೇಹಕ್ಕೆ ಒಳ್ಳೆಯದಲ್ಲ..ಆದರೆ industry made vegetable oil ಆರೋಗ್ಯಕ್ಕೆ ಉತ್ತಮವೆಂದು ಕಂಪನಿಗಳು ಪ್ರತಿಪಾದಿಸತೊಡಗಿದವು. ಹಾಗೇ ಸಾರ್ವಜನಿಕರು ಕೂಡಾ ಅದನ್ನ ಒಪ್ಪಿಕೊಂಡಿದ್ದವು. ಹೊಸ ಎಣ್ಣೆಗಳನ್ನ ಒಪ್ಪಿಕೊಳ್ಳುವ ಭರದಲ್ಲಿ ಸಾಂಪ್ರದಾಯಿಕ ಎಣ್ಣೆಗಳನ್ನ ಧೂಷಿಸತೊಡಗಿದರು. ಆದರೆ 1990 ರ ದಶಕದಲ್ಲಿ ಹೊಸ ಹೊಸ ರೋಗಗಳು ಹುಟ್ಟಿ ಕೊಳ್ಳುತ್ತವೆ, ಹೃದಯ ಕಾಯಿಲೆ ಗಳು, ಮದುಮೇಹ, ಕ್ಯಾನ್ಸರ್, ಹೀಗೆ ಹತ್ತು ಹಲವಾರು ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ.  ಒಮೆಗಾ -3  ದೇಹದ ಪ್ರತಿಯೊಂದು ಜೀವಕೋಶದಲ್ಲಿ ಕಂಡುಬರುವ ಒಂದು ಆರೋಗ್ಯಕರ ಕೊಬ್ಬು. ಜೀವಕೋಶದ ಬೆಳವಣಿಗೆಗೆ ಒಮೆಗಾ – 3 ಮತ್ತೂ ಒಮೆಗಾ -6 ಅಗತ್ಯವೇ. ಆದರೆ ಅವುಗಳನ್ನ ಸರಿಯಾದ ಅನುಪಾತದಲ್ಲಿ ಬಳಸಿದಾಗ ಮಾತ್ರ. ಈ ಎರಡು ಅನ್ ಸ್ಯಾಚೂರೇಟೆಡ್ ಕೊಬ್ಬು ಗಳು ನಮ್ಮ ದೇಹದಲ್ಲಿ ಆದಾಗಿಯೇ ಉತ್ಪತ್ತಿಯಾಗೋದಿಲ್ಲಾ.. ನಾವು ತಿನ್ನುವ ಆಹಾರದ ಮೂಲಕ ನಮ್ಮ ದೇಹದಲ್ಲಿ ಈ ಅಂಶಗಳನ್ನ ಹೆಚ್ಚಿಸಬೇಕಾಗುತ್ತದೆ. ಆದರೆ ಹೊಸ ಹೊಸ refined oil ಗಳು ಬಂದ ನಂತರ ಒಮೆಗಾ -6 ಕೊಬ್ಬುಗಳು ನಮ್ಮ ದೇಹದಲ್ಲಿ ಹತ್ತು ಇಪ್ಪತ್ತು ಪಟ್ಟು ಹೆಚ್ಚಿವೆ. ಅವು ನಮ್ಮ ಜೀವಕೋಶಗಳನ್ನು ಆಕ್ಸಿಡೀಕರಿಸಲು ಕಾರಣವಾಗುತ್ತವೆ, ಒಮೆಗಾ -6 ಮತ್ತೂ ಟ್ರಾನ್ಸ್ ಕೊಬ್ಬುಗಳು ದೇಹದಲ್ಲಿ ಉರಿಯೂತವನ್ನ ಹೆಚ್ಚಿಸುವುದರಿಂದ ಕ್ಯಾನ್ಸರ್, ಮಧುಮೇಹ, ಸಂಧಿವಾತ ಮತ್ತು ಹೃದಯರಕ್ತನಾಳದ ಕಾಯಿಲೆ, ಗರ್ಭಕೋಶದ ಎಂಡೊಮೆಟ್ರಿಸಿಸ್ ಳಂತಹ ಕಾಯಿಲೆಗಳಿಗೆ ಕಾರಣವಾಯಿತು. ಕಾಯಿಲೆಗಳು ಹೆಚ್ಚಾದವು. ಹೃದ್ರೋಗವನ್ನ ತಡೆಯುತ್ತದೆ ಎನ್ನುತ್ತಾ ಮಾರಾಟವಾಗುತ್ತಿದ್ದ ಎಣ್ಣೆಗಳು ಹೃದ್ರೋಗ ಕಾಯಿಲೆಗಳನ್ನ ಹೆಚ್ಚಿಸಿದ್ದವು. ಆ ಸಂದರ್ಭದಲ್ಲಿಯೇ ಸತ್ಯವು ಹೊರ ಹೊಮ್ಮಿತ್ತು. ಕ್ರಿಸ್ಕೊವನ್ನು 50% ಟ್ರಾನ್ಸ್ ಕೊಬ್ಬಿನಿಂದ ತಯಾರಿಸಲಾಗುತ್ತದೆ ಎಂಬ ಸತ್ಯ ಜನರಿಗೆ ಅರಿವಾಗತೊಡಗಿತು. ಟ್ರಾನ್ಸ್ ಫ್ಯಾಟ್ ಮನುಷ್ಯನನ್ನ ಮೃತ್ಯು ಕೂಪಕ್ಕೆ ದೂಡುತ್ತಿದ್ದೆ ಎನ್ನುವ ಸತ್ಯ ಬಯಲಾಗತೊಡಗಿತು. ಹಾಗಾಗಿ 2018 ರಲ್ಲಿ ಆಹಾರದಲ್ಲಿ trans fat ಅಂಶವನ್ನ  FDA ನಿಷೇಧಿಸುತ್ತದೆ. ಹಾಗಾಗಿ ಈಗ ಉತ್ಪನ್ನಗಳ ಮೇಲೆ ಟ್ರಾನ್ಸ್ ಕೊಬ್ಬುಗಳನ್ನು ಲೇಬಲ್ ಮಾಡಬೇಕಾಗಿದೆ, ಹೆಚ್ಚಿನ ಕಂಪನಿಗಳು ತಮ್ಮ ಉತ್ಪನ್ನಗಳಿಂದ ಅವುಗಳನ್ನು ತೆಗೆದುಹಾಕಿವೆ.. ಆದರೆ ಅವುಗಳನ್ನ ಎಷ್ಟರ ಮಟ್ಟಿಗೆ ನಂಬಬಹುದು ಎನ್ನುವ ಪ್ರಶ್ನೆಯೂ ಮೂಡುತ್ತೆ.

Refined oil ಬದಲಿಗೆ ಪರ್ಯಾಯ ಎಣ್ಣೆಗಳು ಯಾವುದಿವೆ?

ಸಂಸ್ಕರಿಸಿದ ಎಣ್ಣೆಗಳು ಮಾರುಕಟ್ಟೆ ಗೆ ಬರುವ ಮೊದಲು ಮನುಷ್ಯ ಬಳಸುತ್ತಿದ್ದ ಎಣ್ಣೆ ಗಳು ನೈಸರ್ಗಿಕ ಸಾಂಪ್ರದಾಯಿಕ ತೈಲಗಳು. ತೆಂಗಿನಕಾಯಿ, ಆಲಿವ್, ಕಡಲೆ ಕಾಯಿ, ಎಳ್ಳು ಎಣ್ಣೆ ಹೀಗೆ ಸಾವಿರಾರು ವರುಷಗಳಿಂದ ಬಳಸುತ್ತಿದ್ದ ಇವುಗಳನ್ನ ಗಾಣಾ ದ ಮೂಲಕ ತೆಗೆಯಲಾಗುತ್ತದೆ. ಇದನ್ನ cold pressed oil ಅಂತಾನೂ ಹೇಳಲಾಗುತ್ತದೆ. ಇಲ್ಲಿ ಬೀಜಗಳನ್ನು ಪುಡಿಮಾಡಿ ನಂತರ ತೈಲವನ್ನು ಹೊರತೆಗೆಯಲು ಒತ್ತಡವನ್ನು ಬಳಸಿ ತೈಲಗಳನ್ನು ಕೋಲ್ಡ್ ಪ್ರೆಸ್ ಮಾಡುತ್ತಾರೆ ಇಲ್ಲಿ temperature ಮತ್ತೂ ರಾಸಾಯನಿಕಗಳ ಅಗತ್ಯವಿಲ್ಲ.

ಸಸ್ಯಜನ್ಯ ಎಣ್ಣೆಗಳ ಬಗ್ಗೆ ಸತ್ಯವು  ತಿಳಿದಿದ್ದರೂ ನಾವು ಇನ್ನೂ ಖರೀದಿಸುತ್ತಿದ್ದೇವೆ . ತಯಾರಕರು ಇನ್ನೂ ಅದನ್ನು ತಯಾರಿಸುತ್ತಿದ್ದಾರೆ ಮತ್ತು,ವ್ಯಾಪಾರಿಗಳು ಇನ್ನೂ ಮಾರಾಟ ಮಾಡುತ್ತಿದ್ದಾರೆ. ಕಾರಣ ಅಗ್ಗದ ಬೆಲೆ ನಮ್ಮನ್ನ ಮತ್ತೇ ಅವುಗಳನ್ನ ಕೊಂಡು ಕೊಳ್ಳೋದಿಕ್ಕೆ ಪ್ರೆರೇಪಿಸುತ್ತದೆ ಅನ್ನೋದು ವಾಸ್ತವವೇ..2018 ರಲ್ಲಿ WHO,  ಜಾಗತಿಕವಾಗಿ ಐದು ಶತಕೋಟಿ ಜನರು ಹಾನಿಕಾರಕ ಟ್ರಾನ್ಸ್ ಕೊಬ್ಬಿನಿಂದ ಅಸುರಕ್ಷಿತರಾಗಿದ್ದಾರೆ ಮತ್ತೂ ಹೃದಯ ಸಮಸ್ಯೆಗಳಿಂದ ಬಳಲುತ್ತಿರಬಹುದು ಎಂದೂ ಹೇಳಿತ್ತು. ಟ್ರಾನ್ಸ್-ಕೊಬ್ಬಿನ ಜಾಗತಿಕ ನಿರ್ಮೂಲನೆಗೆ ಕರೆ ನೀಡಿತ್ತು. ಆದರೆ ಸಾಂಪ್ರದಾಯಿಕ ಎಣ್ಣೆಗಳ ಹೆಚ್ಚಿನ ಬೆಲೆ ಜನರನ್ನ ಮತ್ತೇ ಮತ್ತೇ refined oil ಗಳನ್ನ ಉಪಯೋಗಿಸುತ್ತಿರುವಂತೆ ಮಾಡುತ್ತಿರುವುದು ಸುಳ್ಳಲ್ಲ. ಹಾಗಿದ್ರು ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಸಾಧ್ಯ ಆದಷ್ಟು ಸಾಂಪ್ರದಾಯಿಕ ಎಣ್ಣೆ ಗಳನ್ನು ಉಪಯೋಗಿಸುತ್ತಾ refined cooking ಆಯಿಲ್ ಗಳನ್ನ ಬಳಸದೇ ಇರೋದು ಸೂಕ್ತ..

Sulekha