ದುಬೈನಲ್ಲಿ ಇಂದಿನಿಂದ ಐಸಿಸಿ ಮಹತ್ವದ ಸಭೆ – ಟ್ರೋಫಿ ಇಟ್ಟುಕೊಂಡ ಪಾಕ್‌ಗೆ ಬುದ್ಧಿ ಕಲಿಸೋಕೆ BCCI ಪ್ಲ್ಯಾನ್

ದುಬೈನಲ್ಲಿ ಇಂದಿನಿಂದ ಐಸಿಸಿ ಮಹತ್ವದ ಸಭೆ  –  ಟ್ರೋಫಿ ಇಟ್ಟುಕೊಂಡ ಪಾಕ್‌ಗೆ ಬುದ್ಧಿ ಕಲಿಸೋಕೆ BCCI ಪ್ಲ್ಯಾನ್

 ಐಸಿಸಿ ಮಹತ್ವದ ಸಭೆ ಇಂದಿನಿಂದ(ನ.4) 4 ದಿನಗಳ ಕಾಲ ದುಬೈನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಏಷ್ಯಾಕಪ್​ ಟ್ರೋಫಿ ವಿವಾದವನ್ನು ಪ್ರಸ್ತಾಪಿಸಲು ಬಿಸಿಸಿಐ ಸಿದ್ಧಗೊಂಡಿದೆ. ವಿಜೇತ ಭಾರತ ತಂಡಕ್ಕೆ ಟ್ರೋಫಿ ಯನ್ನು ವಿತರಿಸಲು ಅವಕಾಶ ನೀಡದೆ ಹರಸ್ಯ ಸ್ಥಳದಲ್ಲಿ ಬಚ್ಚಿಟ್ಟಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಹಾಗೂ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಅಧ್ಯಕ್ಷ ಮೊಹ್ಸಿನ್​ ನಖ್ವಿ ವಿರುದ್ಧ ಬಿಸಿಸಿಐ  ತನ್ನ ಪ್ರತಿಭಟನೆಯನ್ನು ಐಸಿಸಿ ಎದುರು ನಡೆಸಲಿದೆ.

ಏಷ್ಯಾಕಪ್​ ಟ್ರೋಫಿ ಹಸ್ತಾಂತರಿಸಬೇಕೆಂದು ಬಿಸಿಸಿಐ 10 ದಿನಗಳ ಹಿಂದೆಯೇ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ಗೆ ಪತ್ರ ಬರೆದಿತ್ತು. ಆದರೆ ಅದು ಇನ್ನೂ ಬಾರದಿರುವುದರಿಂದ ನಾವು ಐಸಿಸಿ ಮೊರೆ ಹೋಗುವುದು ಅನಿವಾರ್ಯವಾಗಿದೆ. ಐಸಿಸಿ ನಮಗೆ ನ್ಯಾಯ ಒದಗಿಸಿ, ಟ್ರೋಫಿ ಪಡೆಯಲು ನೆರವಾಗುವ ಭರವಸೆ ಇದೆ ಎಂದು ಸೈಕಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜವಂಶದ ಪ್ರಭಾವವು ರಾಜಕೀಯದ ಜನ್ಮಸಿದ್ಧ ಹಕ್ಕು ಎಂಬ ಕಲ್ಪನೆಯನ್ನುಗಟ್ಟಿಗೊಳಿಸಿದೆ – ಶಶಿ ತರೂರ್

ಏಷ್ಯಾಕಪ್‌ ಫೈನಲ್‌ ಗೆದ್ದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಟ್ರೋಫಿಯೊಂದಿಗೆ ಸ್ಟೇಡಿಯಂನಿಂದ ಪಲಾಯನ ಮಾಡಿದ್ದರು. ನಂತರ ಅದನ್ನು ಎಸಿಸಿ ಕಚೇರಿಯಲ್ಲಿ ಲಾಕ್‌ ಮಾಡಿಟ್ಟಿದ್ದರು. ಮತ್ತು ತನ್ನ ಅನುಮತಿ ಇಲ್ಲದೆ ಯಾರಿಗೂ ಅದನ್ನು ಹಸ್ತಾಂತರಿಸದಂತೆ ಸಿಬ್ಬಂದಿಗೆ ಸೂಚಿಸಿದ್ದರು. ಬಳಿಕ ಬಿಸಿಸಿಐ, ಐಸಿಸಿಗೆ ದೂರು ನೀಡುವುದಾಗಿ ತಿಳಿಸಿದ ಬೆನ್ನಲ್ಲೇ ಇದೀಗ ನಖ್ವಿ ಎಸಿಸಿ ಮುಖ್ಯ ಕಚೇರಿಯಲ್ಲಿದ್ದ ಏಷ್ಯಾಕಪ್‌ ಟ್ರೋಫಿಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

Kishor KV