RCB ಫ್ಯಾನ್ಸ್ ಬಲಿ.. BCCI ಕಟ್ಟೆಚ್ಚರ! – ಕಪ್ ಗೆದ್ರೂ ಇನ್ಮುಂದಿಲ್ಲ ಸೆಲೆಬ್ರೇಷನ್
ಪರ್ಮಿಷನ್.. ಸೆಕ್ಯೂರಿಟಿ.. ಏನೆಲ್ಲಾ ರೂಲ್ಸ್?

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4 ರಂದು ಕಾಲ್ತುಳಿತ ಸಂಭವಿಸಿ 11 ಜನ ಪ್ರಾಣ ಬಿಟ್ಟಿದ್ರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ರು. ಈ ದುರಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರೀ ಸದ್ದು ಮಾಡಿತ್ತು. ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ಮತ್ತು ಇಬ್ಬರು ಇವೆಂಟ್ ಆಯೋಜಕರನ್ನು ಬಂಧಿಸಲಾಗಿತ್ತು, ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಖಜಾಂಚಿಯವರು ನೈತಿಕ ಜವಾಬ್ದಾರಿಯಿಂದ ರಾಜೀನಾಮೆ ನೀಡಿದ್ದಾರೆ. ಬಟ್ ಈ ಘಟನೆಯಿಂದ ಬಿಸಿಸಿಐ ಭಾರೀ ಮುಜುಗರಕ್ಕೀಡಾಗಿತ್ತು. ಹೀಗಾಗಿ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿ ಹೊಸ ನಿಮಯಗಳನ್ನ ರೂಪಿಸಲಾಗಿದೆ. ಭವಿಷ್ಯದಲ್ಲಿ ಈ ಥರ ಇನ್ಸಿಡೆಂಟ್ಸ್ ನಡೀಬಾರ್ದು ಅಂತಾನೇ ಈಗ ಕೆಲ ಗೈಡ್ ಲೈನ್ಸ್ ತಂದಿದ್ದಾರೆ. 2024ರ T20 ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆಯನ್ನು ಮುಂಬೈನಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ್ದ ಬಿಸಿಸಿಐ, ಈಗ ಫ್ರಾಂಚೈಸಿಗಳಿಗೂ ಇದೇ ಮಾದರಿಯನ್ನು ಅನುಸರಿಸಲು ಕಟ್ಟಪ್ಪಣೆ ಹೊರಡಿಸಿದೆ.
ಇದನ್ನೂ ಓದಿ : 80 ಓವರ್.. ನ್ಯೂ ಬಾಲ್ ರೂಲ್ಸ್ ಏನು? – ಅಂಪೈರ್ ಜೊತೆ ಪದೇಪದೆ ಕಿರಿಕ್ ಸರಿನಾ?
ವಿಜಯೋತ್ಸವಕ್ಕೆ ಗೈಡ್ ಲೈನ್ಸ್!
ಬಿಸಿಸಿಐನಿಂದ ಸಂಭ್ರಮಾಚರಣೆಗೆ ಅನುಮತಿ ಪಡೆಯೋದು ಕಡ್ಡಾಯ
ಲಿಖಿತ ಪೂರ್ವಾನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ
ಟ್ರೋಫಿ ಗೆದ್ದ 3ರಿಂದ 4 ದಿನಗಳ ಒಳಗೆ ಸೆಲೆಬ್ರೇಷನ್ ಮಾಡುವಂತಿಲ್ಲ
ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ಯಾವುದೇ ಅನುಮತಿ ಸಿಗಲ್ಲ
4 ರಿಂದ 5 ಹಂತಗಳಲ್ಲಿ ಭದ್ರತಾ ಪ್ರೋಟೋಕಾಲ್ ಗಳನ್ನ ರೂಪಿಸಬೇಕು
ಎಲ್ಲಾ ಸ್ಥಳಗಳಲ್ಲಿ ಬಹು-ಹಂತದ ಭದ್ರತಾ ಸಿಬ್ಬಂದಿಯ ಉಪಸ್ಥಿತಿ ಅತ್ಯಗತ್ಯ
ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಸೆಕ್ಯೂರಿಟಿ
ಜಿಲ್ಲಾ ಪೊಲೀಸ್, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಂದ ಅನುಮತಿ
ಕಾರ್ಯಕ್ರಮ ಆಯೋಜನೆಗೆ Civil and law enforcement agency ಅನುಮತಿ
ಬಿಸಿಸಿಐನ ಹೊಸ ರೂಲ್ಸ್. ನೆಕ್ಸ್ಟ್ ಸೀಸನ್ನಲ್ಲಿ ಯಾರೇ ಕಪ್ ಗೆದ್ರೂ ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತೆ. ಆದ್ರೆ ಆರ್‌ಸಿಬಿ ಸೆಲೆಬ್ರೇಷನ್ ಟೈಮಲ್ಲಿ ಇದ್ಯಾವುದೂ ಆಗಿರಲಿಲ್ಲ. ಆರ್‌ಸಿಬಿ ತಂಡವು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಅನುಮತಿ ಪಡೆಯದೆ, ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕವಾಗಿ ಸಂಭ್ರಮಾಚರಣೆ ಘೋಷಿಸಿತ್ತು. ಇದರಿಂದ 2.5 ಲಕ್ಷಕ್ಕೂ ಅಧಿಕ ಜನರು ಕ್ರೀಡಾಂಗಣದ ಸುತ್ತ ಸೇರಿದ್ದರು. ಇದು ದುರಂತಕ್ಕೆ ಕಾರಣವಾಗಿತ್ತು. ಹೀಗಾಗಿ ಮುಂದಿನ ವರ್ಷಗಳಲ್ಲಿ ಎಲ್ಲಾ ರೀತಿಯಿಂದಲೂ ಸುರಕ್ಷತೆ ಕೈಗೊಂಡ ಬಳಿಕವಷ್ಟೇ ಸೆಲೆಬ್ರೇಷನ್ ಮಾಡಬಹುದು.

ನೋಡಿರಿ

