BCCI ಜುಟ್ಟು ಸರ್ಕಾರದ ಕೈಯಲ್ಲಿ? ಕೋಟಿ ಕೋಟಿ ಹಣ ಕೇಂದ್ರದ ಪಾಲು?
NEW ರೂಲ್ಸ್.. ಖಾಸಗಿ ದರ್ಬಾರ್ಗೆ ಬ್ರೇಕ್

BCCI ಜುಟ್ಟು ಸರ್ಕಾರದ ಕೈಯಲ್ಲಿ?  ಕೋಟಿ ಕೋಟಿ ಹಣ ಕೇಂದ್ರದ ಪಾಲು?NEW ರೂಲ್ಸ್.. ಖಾಸಗಿ ದರ್ಬಾರ್ಗೆ ಬ್ರೇಕ್

ಜಗತ್ತಿಗೆ ಶ್ರೀಮಂತ ಕ್ರಿಕೆಟ್ ಮಂಡಳಿ.. ವರ್ಷಕ್ಕೆ 10 ಸಾವಿರಾರು ಕೋಟಿಗೂ ಹೆಚ್ಚು ಆದಾಯ. ಅದ್ದಕ್ಕೆ ಬರೋ  ಬಡ್ಡಿನೇ 100 ಸಾವಿರ ಕೋಟಿ.. ಬಿಸಿಸಿಐ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ.. ಅದ್ದಕ್ಕೆ ಕಾರಣ ಬಿಸಿಸಿಐ ಅಷ್ಟರ ಮಟ್ಟಿಗೆ ಕ್ರಿಕೆಟ್‌ನಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿರೋದು. ದೇಶಿ ಕ್ರಿಕೆಟ್‌ನ ಬೆಳಸಿರೋದು.. 1928ರ ಡಿ. 4ರಂದು ಸ್ಥಾಪನೆಯಾದ ಬಿಸಿಸಿಐಯು ಇದುವರೆಗೆ ಖಾಸಗಿ ಸಂಸ್ಥೆಯಾಗಿಯೇ ಕೆಲಸ ಮಾಡ್ತಿದೆ. ಬಿಸಿಸಿಐ ತನ್ನದೇ ರೂಲ್ಸ್ ಹೊಂದಿರೋದ್ರಿಂದ  ಸರ್ಕಾರದ ಯಾವುದೇ ರೂಲ್ಸ್‌ ಗಳು ಇದ್ದಕ್ಕೆ ಅನ್ವಯ ಆಗಲ್ಲ..ಹೀಗಾಗಿ ಸರ್ಕಾರ ಬಿಸಿಸಿಐ ಹಿಡಿತಕ್ಕೆ ಮುಂದಾಗಿದೆ..

ಬಿಸಿಸಿಐ ಜುಟ್ಟು ಸರ್ಕಾರದ ಕೈಗೆ?

ವಿಶ್ವದ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯಾದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯನ್ನು ಕೇಂದ್ರ ಸರಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳೋಕೆ ಮುಂದಾಗಿದೆ. ರಾಷ್ಟ್ರೀಯ ಕ್ರೀಡಾ ಮಸೂದೆಯ ವ್ಯಾಪ್ತಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಬರಲಿದೆ ಎನ್ನಲಾಗಿದೆ. ಬಿಸಿಸಿಐ ಸ್ಥಾಪನೆಯಾದಾಗಿನಿಂದಲೂ ಖಾಸಗಿ ಸಂಸ್ಥೆಯಾಗಿಯೇ ಉಳಿದುಕೊಂಡಿರೋದ್ರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ, ಈ ಮಸೂದೆ ಕಾಯ್ದೆಯಾಗಿ ಬದಲಾದ ಬಳಿಕ ಬಿಸಿಸಿಐಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಎಂದು ಗುರುತಿಸಲಾಗುತ್ತದೆ. ಇತರ ಕ್ರೀಡಾ ಪ್ರಾಧಿಕಾರಗಳಂತೆ ಬಿಸಿಸಿಐಯು ಸರಕಾರದ ಅಧೀನಕ್ಕೆ ಒಳಪಟ್ಟರೂ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.   ಆದರೆ ಸಂಸತ್ತು ರೂಪಿಸುವ ನಿಯಮಗಳು ಬಿಸಿಸಿಐಗೆ ಅನ್ವಯವಾಗಲಿವೆ.

ಬಿಸಿಸಿಐಗೆ ಅನುದಾನ ಸಿಗೋದಿಲ್ವಾ?

ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಸರ್ಕಾರ ನಿಯಂತ್ರಣದಡಿ ತಂದರೂ ಸರಕಾರದಿಂದ ಅದಕ್ಕೆ ಯಾವುದೇ ಅನುದಾನ ದೊರಕುವ ಸಾಧ್ಯತೆಗಳಿಲ್ಲ. ಬಿಸಿಸಿಐ ತನ್ನದೇ ಆದ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ಹೊಸ ಮಸೂದೆಯ ಪ್ರಕಾರ ಸ್ಥಾಪನೆಯಾಗುವ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಕ್ರೀಡಾ ಪ್ರಾಧಿಕಾರಗಳ ನಿಯಂತ್ರಕ ಎಂದು ಗುರುತಿಸದೆ ಇದ್ದರೂ, ಕ್ರೀಡಾ ಪ್ರಾಧಿಕಾರಗಳನ್ನು ರದ್ದು ಮಾಡುವ ತನ್ನದೇ ಆದ ಅಧಿಕಾರವನ್ನು ಹೊಂದಿರುತ್ತದೆ.

ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗಾಗಿ ಈ ಕ್ರಮ

 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟನ್ನು ಸೇರ್ಪಡೆ ಮಾಡಿದ ಬಳಿಕ ಬಿಸಿಸಿಐ ಒಲಿಂಪಿಕ್ಸ್‌ ಆಂದೋಲನದ ಭಾಗವಾಗಿದೆ. ಹೀಗಾಗಿ ಈ ಸಂಸ್ಥೆಯನ್ನು ಸರ್ಕಾರದ ಅಧೀನಕ್ಕೆ ತರಲಾಗುತ್ತಿದೆ. ಅಲ್ಲದೆ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಲ್ಲಿ ಉಂಟಾಗುವ ವಿವಾದಗಳನ್ನು ಪರಿಹಾರ ಮಾಡೋಕೆ  ಸರ್ಕಾರ ಮುಂದಾಗಿದೆ.

ಬಿಸಿಸಿಐ ಅಧ್ಯಕ್ಷರ ಅಧಿಕಾರಾವಧಿ ಹೆಚ್ಚಳ

ಈ ಮಸೂದೆ ಕಾಯ್ದೆಯಾಗಿ ಬದಲಾದರೆ ಬಿಸಿಸಿಐ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆಯಾಗಲಿದೆ. ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರಗಳ ಅಧ್ಯಕ್ಷರ ಅಧಿಕಾರಾವಧಿಯನ್ನು 70 ವರ್ಷದಿಂದ 75 ವರ್ಷಕ್ಕೆ ಏರಿಕೆ ಮಾಡುವುದು ಈ ಕಾಯ್ದೆಯ ಪ್ರಮುಖ ನಿರ್ಧಾರವಾಗಿದೆ. ಹೀಗಾಗಿ ರೋಜ‌ರ್ ಬಿನ್ನಿ ಅವರು ಇನ್ನೂ 5 ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಯಿದೆ.

1928ರ ಡಿ. 4ರಂದು ಸ್ಥಾಪನೆಯಾದ ಬಿಸಿಸಿಐಯು ಇದುವರೆಗೆ ಖಾಸಗಿ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಕ್ರೀಡೆಗೆ ಸಂಬಂಧಿಸಿದ ಸರ್ಕಾರ  ರೂಪಿಸುವ ಯಾವುದೇ ಕಾಯ್ದೆಗಳು ಹಾಗೂ ಕಾನೂನುಗಳು ಬಿಸಿಸಿಐಗೆ ಅನ್ವಯವಾಗುತ್ತಿರಲಿಲ್ಲ. ಅದು ತನ್ನದೇ ಆದ ನೀತಿಗಳನ್ನು ಹೊಂದಿದ್ದು, ಅದರನ್ವಯ ಕಾರ್ಯನಿರ್ವಹಣೆ ಮಾಡುತ್ತಿದೆ. 2019ರವರೆಗೆ ಬಿಸಿಸಿಐಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಎಂದು ಕೂಡ ಗುರುತಿಸಲಾಗುತ್ತಿರಲಿಲ್ಲ. 2020ರಲ್ಲಿ ಬಿಸಿಸಿಐಯನ್ನು ಆರ್‌ಟಿಐ ವ್ಯಾಪ್ತಿಗೆ ತರಲಾಯಿತು. ಆದರೆ ಹೊಸ ಕ್ರೀಡಾ ಮಸೂದೆಯು ಬಿಸಿಸಿಐಯನ್ನು ಕ್ರೀಡಾ ಸಚಿವಾಲಯದ ವ್ಯಾಪ್ತಿಗೆ ತರಲಿದ್ದು ಸರಕಾರದ ನಿಯಂತ್ರಣಕ್ಕೆ ಒಳಪಡಲಿದೆ. ಈ ಮೂಲಕ ಬಿಸಿಸಿಐ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರವೆಂದು ಘೋಷಣೆ ಮಾಡಲಾಗುತ್ತೆ.   ಸಂಸತ್ತು ರೂಪಿಸಿದ ನಿಯಮದಂತೆ ಬಿಸಿಸಿಐ ಚುನಾವಣೆ ಮಾಡುತ್ತೆ. ಅಷ್ಟೇ ಅಲ್ಲ  ಬಿಸಿಸಿಐಯನ್ನು ವಜಾ ಮಾಡುವ ಅಧಿಕಾರವೂ ಸರಕಾರಕ್ಕೆ ಇರಲಿದೆ.

Kishor KV