ರೋಹಿತ್ ಮೇಲೆ ಕಣ್ಣಿಟ್ಟ BCCI – ವಿಶ್ವಕಪ್ ಗೆದ್ದು ಸಂಭ್ರಮಿಸ್ತಾರಾ ಕೊಹ್ಲಿ?
RO-KOಗೆ ಸಿಗುತ್ತಾ ಕನಸಿನ ವಿದಾಯ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ.. ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ಸ್.. ಇಬ್ಬರೂ ಕೂಡ ತಮ್ಮ ವೃತ್ತಿಜೀವನದ ಕ್ಲೈಮ್ಯಾಕ್ಸ್ನಲ್ಲಿದ್ದಾರೆ. ಟಿ-20ಐ ಹಾಗೂ ಟೆಸ್ಟ್ ಫಾರ್ಮೆಟ್ಗೆ ನಿವೃತ್ತಿ ಘೋಷಣೆ ಮಾಡಿರುವ ದಿಗ್ಗಜರು ಏಕದಿನ ವಿಶ್ವಕಪ್ ಎತ್ತಿಹಿಡಿಯೋ ಮಹದಾಸೆಯಲ್ಲಿ ಓಡಿಐನಲ್ಲಿ ಮಾತ್ರ ಆಡ್ತಿದ್ದಾರೆ. 2027ರ ಏಕದಿನ ವಿಶ್ವಕಪ್ ಗೆದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ಗೆ ಫುಲ್ಸ್ಟಾಪ್ ಇಡ್ಬೇಕು ಅನ್ನೋದು ಇವ್ರಿಬ್ಬರ ಮಹದಾಸೆ. ಈ ವಿಚಾರದಲ್ಲಿ ಕೊಹ್ಲಿ ತಂಡದ ಭಾಗವಾಗಿರ್ತಾರೆ ಅಂದ್ರೂ ಕೂಡ ರೋಹಿತ್ ಹೆಸರು ಪದೇಪದೆ ಚರ್ಚೆಗೆ ಬರ್ತಾನೇ ಇರುತ್ತೆ.
ಇದನ್ನೂ ಓದಿ : 18 ಶತಕ.. 10,868* ರನ್ಸ್ – ಮಹಿಳಾ ಕ್ರಿಕೆಟ್ ಮಹಾರಾಣಿ ಸ್ಮೃತಿ
ಭಾರತೀಯ ಕ್ರಿಕೆಟ್ನಲ್ಲಿ ಒಬ್ಬರು ಹಿಟ್‌ಮ್ಯಾನ್ ರೋಹಿತ್ ಶರ್ಮಾ.. ಇನ್ನೊಬ್ಬರು ಕಿಂಗ್ ವಿರಾಟ್ ಕೊಹ್ಲಿ.. ದಶಕದ ಕಾಲ ಭಾರತದ ಬ್ಯಾಟಿಂಗ್ ಬೆನ್ನೆಲುವಾಗಿ ಟೀಂ ಇಂಡಿಯಾವನ್ನ ಯಶಸ್ವಿಯಾಗಿ ಮೇಲೆತ್ತಿದವರು. ಆದ್ರೆ ಈಗ ತಂಡದಲ್ಲಿ ಇವರ ಸ್ಥಾನವೇ ಪ್ರಶ್ನಾರ್ಥವಾಗಿದೆ. 2027ರ ವಿಶ್ವಕಪ್ ವೇಳೆಗೆ ರೋಹಿತ್‌ಗೆ 40 ವರ್ಷ.. ಕೊಹ್ಲಿಗೆ 39 ವರ್ಷ ಆಗಲಿದೆ. ರೋಹಿತ್ 19 ವರ್ಷ, ಕೊಹ್ಲಿ 18 ವರ್ಷ ಭಾರತದ ಪರ ಆಡಿದ್ದಾರೆ. 2027 ರ ಏಕದಿನ ವಿಶ್ವಕಪ್ ಆರಂಭವಾಗುವ ಹೊತ್ತಿಗೆ ಇಬ್ಬರೂ 40 ವರ್ಷದ ಆಸುಪಾಸಿನಲ್ಲಿ ಇರ್ತಾರೆ. ತಂಡದಲ್ಲಿ ರೋಹಿತ್ ಆರಂಭಿಕ ಆಟಗಾರನಾಗಿರುವುದರಿಂದ ಮತ್ತು ಕೊಹ್ಲಿ 3 ನೇ ಸ್ಥಾನವನ್ನು ಹೊಂದಿರುವುದರಿಂದ ತಮ್ಮ ಸ್ಥಾನಗಳನ್ನ ಉಳಿಸಿಕೊಳ್ಳೋಕೂ ಫೈಟ್ ನಡೆಸಬೇಕು. ಈ ವಿಚಾರದಲ್ಲಿ ಕೊಹ್ಲಿ ಸೇಫ್ ಇದ್ರೂ ರೋಹಿತ್ ಸ್ವಲ್ಪ ಟಫ್ ಸಿಚುಯೇಷನ್ನಲ್ಲೇ ಇದ್ದಾರೆ. ಇದ್ರ ನಡುವೆ ಸೆಪ್ಟೆಂಬರ್ 3ರ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಭಾಗಿಯಾಗುವುದರ ಬಗ್ಗೆಯೂ ಚರ್ಚೆಯಾಗಿದೆ. ಈ ಸಭೆ ಬಳಿಕ ಕಾರ್ಯದರ್ಶಿ ದೇವಜಿತ್ ಸೈಕಿಯಾ ರಿಯಾಕ್ಟ್ ಮಾಡಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿರುವ ರೋಹಿತ್ ಭಾರತ ಏಕದಿನ ತಂಡದ ಖಾಯಂ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದಿದ್ದಾರೆ. ಆದ್ರೆ ವಿಶ್ವಕಪ್ ತಂಡದಲ್ಲೂ ಇರ್ತಾರಾ ಅನ್ನೋ ಬಗ್ಗೆ ಹೇಳಿಲ್ಲ. ಹೀಗಾಗಿ ರೋಹಿತ್‌ಗೆ ಮುಂದಿನ ಪ್ರತೀ ಪಂದ್ಯಗಳೂ ಮಾನದಂಡವಾಗಲಿದೆ.
ರೋಹಿತ್ ಶರ್ಮಾಗೆ ವಿಶ್ವಕಪ್ ಹಾದಿ ಅಷ್ಟು ಸುಲಭವಲ್ಲ!
2027ರ ಏಕದಿನ ವಿಶ್ವಕಪ್ವರೆಗೆ ಸ್ಥಾನವನ್ನ ಉಳಿಸಿಕೊಳ್ಳೋ ವಿಚಾರದಲ್ಲಿ ರೋಹಿತ್ ಶರ್ಮಾ ಸ್ವಲ್ಪ ಕಠಿಣ ಸವಾಲುಗಳನ್ನ ಎದುರಿಸುತ್ತಿದ್ದಾರೆ. ಮೇನ್ಲಿ ಫಾರ್ಮ್ ಮತ್ತು ಫಿಟ್ನೆಸ್ ಬಗ್ಗೆ ನೋಡ್ಬೇಕಾಗುತ್ತೆ. ರೋಹಿತ್ ಕೂಡ ಈಗ ತೂಕ ಇಳಿಸಿಕೊಂಡಿದ್ದಾರೆ ಆದರೆ ಇನ್ನೂ ಗಾಯದ ಸಾಧ್ಯತೆ ಇದೆ. ಅವರು 50 ಓವರ್‌ಗಳ ಕಾಲ ಮೈದಾನದಲ್ಲಿ ಉಳಿಯಲು ಸಾಧ್ಯವಾಗುವುದು ಅಷ್ಟೇ ಅಲ್ಲದೆ ಮ್ಯಾನೇಜ್ಮೆಂಟ್ ಬಾಯಿ ಮುಚ್ಚಿಸೋ ರೀತಿಯಲ್ಲಿ ರನ್ಸ್ ಕಲೆ ಹಾಕ್ಬೇಕು. ಪ್ರತಿ ಇನ್ನಿಂಗ್ಸ್ ಅನ್ನು ಸ್ಕ್ಯಾನರ್ ಅಡಿಯಲ್ಲಿ ಇರಿಸಿದಾಗ ಹಿಟ್‌ಮ್ಯಾನ್’ ಗೆ ಇದು ಕಠಿಣ ಕೆಲಸವಾಗುತ್ತೆ. ಯಾಕಂದ್ರೆ ಯಾರಿಂದಲೂ ಕೂಡ ಪ್ರತೀ ಮ್ಯಾಚಲ್ಲಿ ಅರ್ಧಶತಕ, ಶತಕ ಬಾರಿಸೋಕೆ ಆಗಲ್ಲ. ವರ್ಲ್ಡ್ ಕಪ್ಗೆ ಇನ್ನೂ ಒಂದು ವರ್ಷ ಬಾಕಿ ಇರೋದ್ರಿಂದ ಮುಂದಿನ ಅವ್ರ ಪ್ರತೀ ಪಂದ್ಯದಲ್ಲೂ ಕೂಡ ಪರ್ಫಾಮೆನ್ಸ್ ಮಾನದಂಡವಾಗುತ್ತೆ. ಆದ್ರೆ ಕೊಹ್ಲಿಗೆ ಇಷ್ಟು ರಿಸ್ಕ್ ಇಲ್ಲ.
ಫಿಟ್ & ಫೈನ್ ಆಗಿರೋ ಕೊಹ್ಲಿಗಿಲ್ಲ ಸ್ಥಾನದ ಭಯ!
ರೋಹಿತ್ ಸ್ಥಾನದ ವಿಚಾರದಲ್ಲಿ ಅಷ್ಟೆಲ್ಲಾ ಚರ್ಚೆಗಳಾದ್ರೂ ಕೊಹ್ಲಿ ಹೆಸರು ಮಾತ್ರ ಈ ಲಿಸ್ಟ್ನಲ್ಲಿ ಇಲ್ಲ. ಯಾಕಂದ್ರೆ ಕಿಂಗ್ ಕೊಹ್ಲಿ ಕನ್ಸಿಸ್ಟೆನ್ಸಿ ಪ್ರದರ್ಶನದ ಜೊತೆಗೆ ತಮ್ಮ ಫಿಟ್‌ನೆಸ್ ವಿಚಾರದಲ್ಲಿ ಈಗಲೂ ಬ್ರ್ಯಾಂಡ್ ಆಗಿದ್ದಾರೆ. ಅವರಿಗಿಂತ 10 ರಿಂದ 15 ವರ್ಷ ಕಿರಿಯ ಆಟಗಾರರಿಗಿಂತ ಹೆಚ್ಚು ಫಿಟ್ ಆಗಿದ್ದಾರೆ. ಹಾಗೇ ಇಂದಿನ ವಿಶ್ವದ ಅತ್ಯಂತ ಫಿಟ್ ಕ್ರಿಕೆಟಿಗರಲ್ಲಿ ಒಬ್ಬರು. ಪರ್ಫಾಮೆನ್ಸ್ ಅಂತಾ ಬಂದಾಗ್ಲೂ ಯಾವತ್ತೂ ಹಿಂದೆ ಉಳಿಯಲ್ಲ. ಇದೇ ಕಾರಣಕ್ಕೆ ಕೊಹ್ಲಿ ಸ್ಥಾನ ಅಂತಾ ಭದ್ರವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ 2027ರ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ರೋಕೋ ಜೋಡಿ ಆಡೋದನ್ನ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ. ಸೋ ಇಬ್ಬರೂ ಆಡ್ತಾರಾ ಅಥವಾ ಒಬ್ಬರು ಅವಕಾಶ ಪಡೆಯುತ್ತಾರಾ ಅಥವಾ ಇಬ್ಬರೂ ಅವಕಾಶ ಕಳ್ಕೊಳ್ತಾರಾ ಅನ್ನೋ ಬಗ್ಗೆ ಯಾವುದೇ ಕ್ಲಾರಿಟಿ ಇಲ್ಲ. ಇಷ್ಟೆಲ್ಲಾ ಚರ್ಚೆಗಳು ಆದ್ರೂ ಬಿಸಿಸಿಐ ಕೂಡ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾಗೇನಾದ್ರೂ ಆಟವೇ ಮಾನದಂಡ ಅಂತಾ ಪಡಿಗಣಿಸಿದ್ರೆ ರೋಹಿತ್ ಮತ್ತು ಕೊಹ್ಲಿ ದಕ್ಷಿಣ ಆಫ್ರಿಕಾಕ್ಕೆ ವಿಶ್ವಕಪ್ ಆಡಲು ವಿಮಾನ ಏರೋದ್ರಲ್ಲಿ ಅನುಮಾನವೇ ಇಲ್ಲ.
ಭಾರತದ ಬ್ಯಾಟಿಂಗ್ ಜೋಡೆತ್ತುಗೆ ಸಿಗುತ್ತಾ ಕನಸಿನ ವಿದಾಯ?
ಅಷ್ಟಕ್ಕೂ ಇಲ್ಲಿ ಟೀಂ ಇಂಡಿಯಾ ಫ್ಯಾನ್ಸ್ ಡೈಜೆಸ್ಟ್ ಮಾಡಿಕೊಳ್ಳಬೇಕಾದ ಮತ್ತೊಂದು ವಿಚಾರವೂ ಇದೆ. 2027 ರ ಏಕದಿನ ವಿಶ್ವಕಪ್ ಆಡುವುದು, ಟ್ರೋಫಿ ಗೆಲ್ಲುವುದು ಇವ್ರಿಬ್ಬರ ಮಹದಾಸೆಯಷ್ಟೇ ಅಲ್ಲ. ಜಗತ್ತಿನ ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿಗೆ ಕನಸಿನ ವಿದಾಯವೂ ಆಗಿರಲಿಲ್ಲ. 28 ವರ್ಷಗಳ ಏಕದಿನ ಪ್ರಶಸ್ತಿ ಕೊರಗನ್ನ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ನೀಗಿಸಿತ್ತು. ಧೋನಿ ನೇತೃತ್ವದ ತಂಡದ ಭಾಗವಾಗಿ ಕೊಹ್ಲಿ ಈಗಾಗಲೇ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಆದ್ರೆ 2023 ರಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದಿದ್ದ ರೋಹಿತ್‌ಗೆ ಟ್ರೋಫಿ ಗೆಲುವು ಸಿಕ್ಕಿಲ್ಲ. ಹೀಗಾಗಿ ಇಬ್ಬರೂ ಕೂಡ 2027ರ ಏಕದಿನ ವಿಶ್ವಕಪ್ ಗೆದ್ದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಫುಲ್ ಸ್ಟಾಪ್ ಇಡೋ ಟಾರ್ಗೆಟ್ನಲ್ಲಿದ್ದಾರೆ.. ಇಬ್ಬರ ಈ ಕನಸು ನನಸಾಗಲಿ.. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿ.. ಹಾಗೇ ಟ್ರೋಫಿಯೂ ನಮ್ಮದಾಗಲಿ ಅನ್ನೋದಷ್ಟೇ ಕೋಟಿ ಕೋಟಿ ಭಾರತೀಯರ ಆಸೆ.

ನೋಡಿರಿ

