KL, ಸಿರಾಜ್ ಡ್ರಾಪ್ ಮಾಡಿದ್ದಕ್ಕೆ BCCI ಕೆಂಡ – ಪ್ರಸಿದ್ಧ್ ಹೆಸರು ಕೈಬಿಟ್ಟಿದ್ದಕ್ಕೂ ಎಚ್ಚರಿಕೆ
ತಂಡದಲ್ಲಿ ಮತ್ತೆ ಬದಲಾವಣೆಯಾಗುತ್ತಾ?

KL, ಸಿರಾಜ್ ಡ್ರಾಪ್ ಮಾಡಿದ್ದಕ್ಕೆ BCCI ಕೆಂಡ – ಪ್ರಸಿದ್ಧ್ ಹೆಸರು ಕೈಬಿಟ್ಟಿದ್ದಕ್ಕೂ ಎಚ್ಚರಿಕೆತಂಡದಲ್ಲಿ ಮತ್ತೆ ಬದಲಾವಣೆಯಾಗುತ್ತಾ?

ದೇಶದ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾಗಿರೋ ದುಲೀಪ್ ಟ್ರೋಫಿಗೆ ಕೌಂಟ್​ಡೌನ್ ಶುರುವಾಗಿದೆ. ಆಗಸ್ಟ್ 28ರಿಂದ ಆರು ವಲಯಗಳ ನಡುವೆ ಪೈಪೋಟಿ ನಡೆಯಲಿದೆ. ಅದ್ರಲ್ಲೂ ಈ ಬಾರಿಯ ಪಂದ್ಯಾವಳಿಯ ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಟೀಂ ಇಂಡಿಯಾದ ಸ್ಟಾರ್ಸ್ ಪ್ಲೇಯರ್ಸ್ ಕೂಡ ಭಾಗಿಯಾಗ್ತಿರೋದು. ಆದ್ರೆ ಅದೇ ದುಲೀಪ್ ಟ್ರೋಫಿಗೆ ದಕ್ಷಿಣ ವಲಯದ ಆಯ್ಕೆದಾರರು ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ರಂತ ಅಂತರರಾಷ್ಟ್ರೀಯ ಆಟಗಾರರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ದೇಶೀಯ ಪಂದ್ಯಾವಳಿಗಳಲ್ಲಿ ಅಂತರರಾಷ್ಟ್ರೀಯ ಆಟಗಾರರಿಗೆ ಮೊದಲ ಆದ್ಯತೆ ನೀಡ್ಬೇಕು ಅಂತಾ ಎಲ್ಲಾ ರಾಜ್ಯ ಘಟಕಗಳಿಗೆ ತಾಕೀತು ಮಾಡಿದೆ.

ಇದನ್ನೂ ಓದಿ : ದತ್ತು ಪುತ್ರನಿಗಾಗಿ ಗಂಭೀರ್ ಪಾಲಿಟಿಕ್ಸ್ – KKR ಕೋಟಾದಲ್ಲಿ ಏಷ್ಯಾಕಪ್ ಗೆ ರಾಣಾ

ಘನತೆ ಮತ್ತು ಗುಣಮಟ್ಟಕ್ಕಾಗಿ ಭಾರತೀಯ ಆಟಗಾರರಿಗೆ ಚಾನ್ಸ್ ಕೊಡಿ!

ದುಲೀಫ್ ಟ್ರೋಫಿಯಲ್ಲಿ ಡಿಗ್ನಿಟಿ ಌಂಡ್ ಕ್ವಾಲಿಟಿಯನ್ನ ಎತ್ತಿ ಹಿಡಿಯೋಕೆ ಭಾರತೀಯ ತಂಡದ ಆಟಗಾರರನ್ನ ಮೊದಲು ಆಯ್ಕೆ ಮಾಡುವಂತೆ ಬಿಸಿಸಿಐ ಖಡಕ್ ಸಂದೇಶ ರವಾನಿಸಿದೆ. ರಾಷ್ಟ್ರೀಯ ತರಬೇತುದಾರ ಮತ್ತು ಆಯ್ಕೆ ಸಮಿತಿಯಿಂದ ಅಧಿಕೃತ ಅನುಮೋದನೆ ಪಡೆಯದೇ ಇದ್ರೂ ದೇಶೀಯ ಕ್ರಿಕೆಟ್‌ನಲ್ಲಿ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುವ ಅವಕಾಶ ಇದೆ ಎಂದು ಆಯ್ಕೆದಾರರಿಗೆ ಹೇಳಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಕೆಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಹೊರತುಪಡಿಸಿ, ದಕ್ಷಿಣ ವಲಯವು ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಸುದರ್ಶನ್ ಅವರನ್ನು ಸೇರಿಸಿಕೊಂಡಿಲ್ಲ. ಇವ್ರಲ್ಲಿ ಬಹುತೇಕ ಆಟಗಾರರೆಲ್ಲಾ ಆಫ್-ಸೀಸನ್‌ನಲ್ಲಿ ಪಂದ್ಯಗಳಿಗೆ ಲಭ್ಯವಿದ್ದಾರೆ. ಈ ನಡುವೆ ತಿಲಕ್ ವರ್ಮಾ ಅವರನ್ನು ದಕ್ಷಿಣ ವಲಯದ ನಾಯಕನನ್ನಾಗಿ ನೇಮಿಸಲಾಗಿದೆ. ಬಟ್ ಈಗ ಬಿಸಿಸಿಐ ಹಸ್ತಕ್ಷೇಪದ ನಂತರ ತಂಡವನ್ನು ಪರಿಷ್ಕರಣೆ ಮಾಡೋ ಸಾಧ್ಯತೆಯೂ ಇದೆ. ಆದ್ರೆ ಉಳಿದ ವಲಯಗಳು ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಶ್ರೇಯಸ್ ಅಯ್ಯರ್ ಸೇರಿದಂತೆ ಹಲವಾರು ಭಾರತೀಯ ತಾರಾ ಆಟಗಾರರನ್ನ ಆಯ್ಕೆ ಮಾಡಿವೆ. ಹೀಗಾಗಿ ಕೊನೇ ಗಳಿಗೆಯಲ್ಲಿ ತಂಡಗಳಲ್ಲಿ ಚೇಂಜಸ್ ಆದ್ರೂ ಅಚ್ಚರಿ ಇಲ್ಲ.

ಆಗಸ್ಟ್ 28 ರಿಂದ ಆರಂಭ.. 6 ವಲಯಗಳು ಭಾಗಿ!

ಇನ್ನು ದುಲೀಫ್ ಟ್ರೋಫಿ ಬಗ್ಗೆ ನೋಡೋದಾದ್ರೆ ಆಗಸ್ಟ್ 28 ರಿಂದ ಸೆಪ್ಟೆಂಬರ್ 15 ರವರೆಗೆ ಪಂದ್ಯಗಳು ನಡೆಯಲಿವೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಮಧ್ಯ ಮತ್ತು ಈಶಾನ್ಯ ಎಂಬ ಆರು ವಲಯಗಳ ತಂಡಗಳು ಭಾಗವಹಿಸಲಿವೆ. ಪ್ರಸ್ತುತ ದಕ್ಷಿಣ ಮತ್ತು ಪಶ್ಚಿಮ ವಲಯಗಳು ಸೆಮಿಫೈನಲ್‌ಗೆ ಡೈರೆಕ್ಟ್ ಎಂಟ್ರಿ ಪಡೆದಿವೆ. ಆದರೆ ಪೂರ್ವ vs ಉತ್ತರ ಮತ್ತು ಮಧ್ಯ vs ಈಶಾನ್ಯ ವಲಯಗಳು ಆಗಸ್ಟ್ 28ರಿಂದ 31 ರವರೆಗೆ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿವೆ. ಸೆಪ್ಟೆಂಬರ್ 4ರಿಂದ7 ರವರೆಗೆ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ನಂತರ ಸೆಪ್ಟೆಂಬರ್ 11 ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯಲಿವೆ.

Shantha Kumari