ಕ್ರಿಕೆಟರ್ಸ್ ಅತಿರೇಕದ ವರ್ತನೆಗೆ ಬಿಸಿಸಿಐ ಗರಂ – ಪ್ರೀತಿಯಲ್ಲಿ ಬಿದ್ದ ಆಟಗಾರರಿಗೆ ಖಡಕ್ ಎಚ್ಚರಿಕೆ

ಕ್ರಿಕೆಟರ್ಸ್ ಅತಿರೇಕದ ವರ್ತನೆಗೆ ಬಿಸಿಸಿಐ ಗರಂ – ಪ್ರೀತಿಯಲ್ಲಿ ಬಿದ್ದ ಆಟಗಾರರಿಗೆ ಖಡಕ್ ಎಚ್ಚರಿಕೆ

ಐಪಿಎಲ್‌ನಲ್ಲಿ ಅಂಗಳದಲ್ಲಿ ಅಬ್ಬರಿಸುವ ಆಟಗಾರರು ಪ್ರೇಕ್ಷಕರನ್ನು ರಂಜಿಸಿದರೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ಕೆಲ ಆಟಗಾರರ ಅತಿರೇಕದ ವರ್ತನೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವ ಕ್ರಿಕೆಟರ್ಸ್ ತಮ್ಮ ಗರ್ಲ್‌ಫ್ರೆಂಡ್ಸ್‌ಗಾಗಿ ಟೈಮ್ ವೇಸ್ಟ್ ಮಾಡುವ ಪ್ರಕರಣ ಕೂಡಾ ಬೆಳಕಿಗೆ ಬಂದಿದೆ. ಇದರ ಜೊತೆ ಇಬ್ಬರು ಆಟಗಾರರು ಇ ಸಿಗರೇಟ್ ಸೇದಿ ಸಿಕ್ಕಿಬಿದ್ದಿರುವುದು ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ:ಆಗ HERO.. ಈಗ VILLAIN!  – RCBಗೆ ಜಿತೇಶ್ & ಶೆಫರ್ಡ್ ಭಾರ

ಐಪಿಎಲ್ ಅಂಗಳದಲ್ಲಿ ಆಟಗಾರರ ಶಿಸ್ತು ಉಲ್ಲಂಘನೆಯಿಂದ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ. ಆಟಗಾರರು ಮತ್ತು ಅಧಿಕಾರಿಗಳ ಕೊಠಡಿಗಳಿಗೆ ಅನಧಿಕೃತ ವ್ಯಕ್ತಿಗಳ ಭೇಟಿ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ನಾವು ಸುಮ್ಮನೆ ಕುಳಿತಿಲ್ಲ, ನಿಯಮ ಮೀರಿದರೆ ಕಠಿಣ ಶಿಕ್ಷೆ ಖಚಿತ’ ಎಂದು ಎಚ್ಚರಿಸಿದ್ದಾರೆ. ಕೆಲವು ತಂಡಗಳ ಆಟಗಾರರು ಮತ್ತು ಫ್ರಾಂಚೈಸಿಗಳು ಬಿಸಿಸಿಐ ನಿಗದಿಪಡಿಸಿದ ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಮರೆತಿವೆ ಎಂಬ ಆರೋಪ ಕೇಳಿಬಂದಿದೆ. ‘ತಂಡದ ಬಸ್‌ಗಳಲ್ಲಿ ಸಂಬಂಧಪಡದವರು ಪ್ರಯಾಣಿಸುವುದು, ಹೋಟೆಲ್‌ಗಳಲ್ಲಿ ಆಟಗಾರರು ಮತ್ತು ಅಧಿಕಾರಿಗಳ ಕೊಠಡಿಗಳಿಗೆ ಅನುಮತಿ ಇಲ್ಲದೆ ಹೊರಗಿನವರು ಭೇಟಿ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಗಂಭೀರ ಅಪರಾಧ’ ಎಂದು ಸೈಕಿಯಾ ಹೇಳಿದ್ದಾರೆ. ಈ ಬಾರಿ ಐಪಿಎಲ್ ಮೈದಾನಕ್ಕಿಂತ ಹೊರಗಿನ ಘಟನೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ಪಂಜಾಬ್ ಬೌಲರ್ ಅರ್ಷದೀಪ್ ಸಿಂಗ್, ಹೈದರಾಬಾದ್ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ವ್ಯಕ್ತವಾಗುತ್ತಿದೆ. ಇವರು ಆಟದ ಮೇಲೆ ಗಮನ ಹರಿಸೋದು ಬಿಟ್ಟು ಗರ್ಲ್​​ಫ್ರೆಂಡ್​ ಜೊತೆ ಸುತ್ತಾಡುತ್ತಿದ್ದಾರೆ.

ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದಕ್ಕಾಗಿ ತಂಡವೊಂದ ಮ್ಯಾನೇಜರ್‌ಗೆ 1 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಆರ್​​ ಆರ್​ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ ಬಳಸುತ್ತಿರುವ ದೃಶ್ಯ ವೈರಲ್ ಆಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಚಹಾಲ್ ಕೂಡ ಇದೇ ವಿವಾದ ಮಾಡಿಕೊಂಡಿದ್ದಾರೆ. ಕೇವಲ ಆಟಗಾರರಷ್ಟೇ ಅಲ್ಲ, ತಂಡದ ಮಾಲೀಕರು ಕೂಡ ನಿಯಮ ಮೀರಿ ಆಟಗಾರರ ಜೊತೆ ಬೆರೆಯುತ್ತಿದ್ದಾರೆ. ಇದೆಲ್ಲಾ ಕೂಡಾ ಶಿಸ್ತು ಉಲ್ಲಂಘನೆಯಾಗಿದ್ದು ಬಿಸಿಸಿಐ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

Sulekha